ಕರ್ನಾಟಕ

karnataka

ETV Bharat / bharat

ನಡುರೋಡಿನಲ್ಲೇ ಹೊತ್ತಿ ಉರಿದ ಖಾಸಗಿ ಬಸ್​​... ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು! - ಪ್ರಯಾಣಿಕರು ಸೇಫ್​​

ನಡು ರಸ್ತೆಯಲ್ಲೇ ಖಾಸಗಿ ಬಸ್​ವೊಂದು ಹೊತ್ತಿ ಉರಿದಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಖಾಸಗಿ ಬಸ್​ಗೆ ಬೆಂಕಿ

By

Published : Sep 6, 2019, 2:02 AM IST

ಪುಣೆ:ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಖಾಸಗಿ ಬಸ್​​ವೊಂದು ನಡುರೋಡಿನಲ್ಲೇ ಧಗಧಗನೇ ಹೊತ್ತಿ ಉರಿದಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ಪ್ರಯಾಣಿಕರು ಅದೃಷ್ಠವಶಾತ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಹಾರಾಷ್ಟ್ರದ ಪುಣೆಯಿಂದ ನಾಗ್ಪುರ್​ಗೆ ತೆರಳುತ್ತಿದ್ದ ಖಾಸಗಿ ಬಸ್​​, ಪುಣೆ ಅಹ್ಮದ್​ನಗರ ಹೆದ್ದಾರಿಯ ರಾಮವಾಡಿ ಆಕ್ಟ್ರೋಯ್​ ನಾಕಾ ಬಳಿ ಏಕಾಏಕಿ ಹೊತ್ತಿ ಉರಿದಿದೆ. ಈ ವೇಳೆ ತಕ್ಷಣವೇ ಪ್ರಯಾಣಿಕರನ್ನು ಕಳೆಗಿಳಿಸಲಾಗಿದ್ದು, ಕ್ಷಣಾರ್ಧದಲ್ಲೇ ಬೆಂಕಿ ಬಸ್​ಗೆ ಸಂಪೂರ್ಣವಾಗಿ ಆವರಿಸಿಕೊಂಡಿದೆ.

ಈ ಬಸ್​​ನಲ್ಲಿ 29 ಪ್ರಯಾಣಿಕರು ತೆರಳುತ್ತಿದ್ದರು. ಬೆಂಕಿ ಹತ್ತಿದ್ದು ಗೊತ್ತಾಗುತ್ತಿದ್ದಂತೆ ಎಲ್ಲರೂ ಗಡಿಬಿಡಿಯಲ್ಲಿ ಕೆಳಗೆ ಇಳಿದಿದ್ದಾರೆ. ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ABOUT THE AUTHOR

...view details