ನವದೆಹಲಿ: ನಾಳೆ ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯ ಇಸ್ಕಾನ್ ದೇವಸ್ಥಾನದಲ್ಲಿ 670 ಪುಟಗಳುಳ್ಳ 800ಕೆ.ಜಿ ತೂಕದ ಬೃಹತ್ ಭಗವದ್ಗೀತೆ ಗ್ರಂಥ ಅನಾವರಣ ಗೊಳಿಸಲಿದ್ದಾರೆ.
ನಾಳೆ ಮೋದಿ ಅವರಿಂದ 800 ಕೆ.ಜಿ ತೂಕದ ಭಗವದ್ಗೀತೆ ಅನಾವರಣ... ಇದರ ವಿಶೇಷತೆ ಏನ್ ಗೊತ್ತಾ? - ಭಗವದ್ಗೀತೆ
670 ಪುಟಗಳುಳ್ಳ 800ಕೆ.ಜಿ ತೂಕದ ಬೃಹತ್ ಭಗವದ್ಗೀತೆ ಗ್ರಂಥವನ್ನ ಪ್ರಧಾನಿ ಮೋದಿ ಅನಾವರಣ ಗೊಳಿಸಲಿದ್ದಾರೆ.
800 ಕೆ.ಜಿ ತೂಕದ ಭಗವದ್ಗೀತೆ ಅನಾವರಣ
ಇದು 2.8 ಮೀಟರ್ ಎತ್ತರ ಮತ್ತು 2 ಮೀಟರ್ ಉದ್ದವಿರದ್ದು, ಅತಿದೊಡ್ಡ ಮುದ್ರಿತ ಪವಿತ್ರ ಗ್ರಂಥ ಎಂಬ ಕೀರ್ತಿಗೆ ಪಾತ್ರವಾಗಿದೆ.
18 ಸೂಕ್ಷ್ಮ ವರ್ಣಚಿತ್ರಗಳ ಒಂದು ಕಲಾತ್ಮಕ ಸ್ಪರ್ಶದಿಂದ ಮತ್ತು ಸೊಗಸಾದ ವಿನ್ಯಾಸವನ್ನು ಹೊಂದಿರುವ ಈ ಪುಸ್ತಕವನ್ನು YUPO ಸಿಂತೆಟಿಕ್ ಲೇಪಿತ ಮಿಲನ್, ಇಟಲಿ ಕಾಗದದವನ್ನ ಬಳಸಿ ಮುದ್ರಿಸಲಾಗಿದ್ದು, ಜಲನಿರೋಧಕವಾಗಿದೆ (ವಾಟರ್ ಪ್ರೂಫ್) ಎಂದು ಇಸ್ಕಾನ್ ಮೂಲಗಳು ತಿಳಿಸಿವೆ.