ನವದೆಹಲಿ:ಮತ್ತೊಂದು ಗ್ರಹಣಕ್ಕೆ ಜುಲೈ ತಿಂಗಳು ಸಾಕ್ಷಿಯಾಗುತ್ತಿದೆ. ಪೌರ್ಣಿಮೆಯ ದಿನ ಚಂದಿರನಿಗೆ ಗ್ರಹಣ ಹಿಡಿಯಲಿದೆ. ಈ ಗ್ರಹಣದ ಭಾರತದಲ್ಲಿ ಗೋಚರಿಸಲಿದೆಯೇ ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ. ಇದರ ಪ್ರಭಾವವನ್ನು ಭಾರತದಲ್ಲಿ ನಾವು ನೋಡಲಾಗುವುದಿಲ್ಲ. ಇದನ್ನು ವಿಶೇಷವಾಗಿ ಪೆನ್ಯುಂಬ್ರಲ್ ಚಂದ್ರಗ್ರಹಣ ಎಂದು ಕರೆಯಲಾಗುತ್ತದೆ.
ವಿಶ್ವದ ಇತರೆ ಭಾಗಗಳಲ್ಲಿ ಈ ಚಂದ್ರ ಗ್ರಹಣ ಬೆಳಗ್ಗೆ 8.37 ಕ್ಕೆ ಆರಂಭಗೊಂಡು, ಬೆಳಗ್ಗೆ 11.37ಕ್ಕೆ ಮೋಕ್ಷ ಕಾಲವಾಗಲಿದೆ. ಈ ಗ್ರಹಣದ ಒಟ್ಟು ಅವಧಿ 2 ಗಂಟೆ 43 ನಿಮಿಷ 44 ಸೆಕೆಂಡ್ ಗಳಾಗಿರಲಿದೆ. ಇನ್ನು ಕಳೆದ ಜೂನ್ 5 ರಂದು ಚಂದ್ರಗ್ರಹಣ ಸಂಭವಿಸಿದ್ದು, ಜೂನ್ 21ರಂದು ಸೂರ್ಯ ಗ್ರಹಣ ಸಂಭವಿಸಿತ್ತು.