ಕರ್ನಾಟಕ

karnataka

ETV Bharat / bharat

ಸರ್ಕಾರದಿಂದ ದಿಟ್ಟ ಕ್ರಮಗಳನ್ನು ಎದುರು ನೋಡುತ್ತಿದ್ದೇನೆ: ಪಿ.ಚಿದಂಬರಂ - ಲಾಕ್​ಡೌನ್​ ವಿಸ್ತರಣೆ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ''ಜಾನ್ ಬಿ, ಜಹಾನ್​ ಬಿ'' ಧ್ಯೇಯ ವಾಕ್ಯವನ್ನು ಕಾಂಗ್ರೆಸ್​ ಹಿರಿಯ ಮುಖಂಡ ಪಿ. ಚಿದಂಬರಂ ಅವರು ಸ್ವಾಗತಿಸಿದ್ದು, ಕೇಂದ್ರ ಸರ್ಕಾರ ಬಡವರು ಮತ್ತು ದುರ್ಬಲರ ಜೀವನೋಪಾಯಕ್ಕೆ ಧನ ಸಹಾಯ ಮಾಡುವ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

chidambaram
ಪಿ. ಚಿದಂಬರಂ

By

Published : Apr 12, 2020, 1:05 PM IST

ನವದೆಹಲಿ : ಕಾಂಗ್ರೆಸ್ ಹಿರಿಯ ಮುಖಂಡ ಮತ್ತು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು ಪ್ರಧಾನಿ ನರೇಂದ್ರ ಮೋದಿಯವರ "ಜಾನ್ ಬಿ, ಜಹಾನ್ ಬಿ" ಎಂಬ ಧ್ಯೇಯವಾಕ್ಯವನ್ನು ಸ್ವಾಗತಿಸಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು "ಜೀವನ ಮತ್ತು ಜೀವನೋಪಾಯ ಎರಡೂ ಮುಖ್ಯ ಎಂಬ ಪ್ರಧಾನ ಮಂತ್ರಿಯ ಘೋಷಣೆಯನ್ನು ನಾನು ಸ್ವಾಗತಿಸುತ್ತೇನೆ. ಬಡವರು ಮತ್ತು ದುರ್ಬಲರ ಜೀವನ ಸುಗಮವಾಗಿಸಲು ಬರಿದಾದ ಕೈಗೆ ಹಣ ನೀಡುವ ಕುರಿತು ಸರ್ಕಾರವು ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ನಾನು ಎದುರು ನೋಡುತ್ತಿದ್ದೇನೆ. ಅದು ಜೀವನೋಪಾಯವನ್ನು ಉಳಿಸುತ್ತದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

ನಿನ್ನೆ ಪ್ರಧಾನ ಮಂತ್ರಿಯವರು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌​ ಮೂಲಕ ಸಭೆ ನಡೆಸಿ ಲಾಕ್ ಡೌನ್ ವಿಸ್ತರಣೆ ಕುರಿತು ಚರ್ಚೆ ನಡೆಸಿದ ನಂತರ ಚಿದಂಬರಂ ಅವರು ತಮ್ಮ ಅಭಿಪ್ರಾಯ ಮಂಡನೆ ಮಾಡಿದ್ದಾರೆ. ಸದ್ಯ ಎಲ್ಲಾ ರಾಜ್ಯಗಳ ಸಿಎಂಗಳ ಅಭಿಪ್ರಾಯಗಳ ಮೆರೆಗೆ ಲಾಕ್​ಡೌನ್​ ಅನ್ನು ಎರಡು ವಾರಗಳವರೆಗೆ ವಿಸ್ತರಣೆ ಮಾಡಲಾಗಿದೆ.

ABOUT THE AUTHOR

...view details