ಕಣ್ಣೂರು: ಲಾಕ್‌ಡೌನ್, ಎಲ್ಲವನ್ನೂ ಲಾಕ್ ಮಾಡಿದೆ. ಜನರನ್ನು ಮಾತ್ರವೇ ಮನೆಯಲ್ಲಿ ಕೂಡಿಹಾಕಿದ್ದಲ್ಲದೆ. ಆತನಿಗೆ ಬೇಕಾದ ಅಗತ್ಯ ಸೌಲಭ್ಯವೂ ಸಿಗದಂತಾಗಿದೆ. ಇದರಲ್ಲಿ ಪುರುಷರಿಗೆ ತುಂಬಾ ಅಗತ್ಯವಾದ ಸೆಲೂನ್ ಕೂಡಾ ಸೇರಿದೆ.
ಹೌದು, ಪುರುಷರಿಗೆ ಕನಿಷ್ಟ ತಿಂಗಳಿಗೆ ಒಂದರಿಂದ ಎರಡು ಬಾರಿಯಾದ್ರೂ ಹೇರ್ ಕಟ್ಟಿಂಗ್ ಮತ್ತು ಶೇವಿಂಗ್ ಮಾಡಬೇಕಾಗುತ್ತದೆ. ಆದ್ರೆ ಲಾಕ್ಡೌನ್ನಿಂದಾಗಿ ಸೆಲೂನ್, ಮೆನ್ಸ್ ಬ್ಯೂಟಿ ಪಾರ್ಲರ್ಗಳ ಬಾಗಿಲು ಮುಚ್ಚಿವೆ. ಹೀಗಾಗಿ ಪುರುಷರು ಮನೆಯಲ್ಲೇ ಹೇರ್ ಕಟ್ಟಿಂಗ್ ಹಾಗೂ ಶೇವಿಂಗ್ ಮಾಡುವ ಅನಿವಾರ್ಯ ಬಂದಿದೆ.
ಮಹಿಳೆಯರಿಂದಲೇ ಪುರುಷರ ಕ್ಷೌರ ಕಾರ್ಯ ಕೇರಳದ ಕಣ್ಣೂರಿನ ಗ್ರಾಮೀಣ ಪ್ರದೇಶಗಳ ಜನರಿಗೆ ಈ ಲಾಕ್ಡೌನ್ನಿಂದ ಹೇರ್ ಕಟ್ಟಿಂಗ್ ಮತ್ತು ಶೇವಿಂಗ್ಗೆ ಯಾವುದೇ ಸಮಸ್ಯೆ ಆಗಿಲ್ಲ ಅನಿಸುತ್ತೆ. ಯಾಕಂದ್ರೆ ಈ ಪ್ರದೇಶದ ಯುವಕರು, ಮುದುಕರು ಹಾಗೂ ಮಕ್ಕಳಿಗೆ ಸೆಲೂನ್ಗಳಿಗೆ ಹೋಗೋ ಸಮಸ್ಯೆಯೇ ಎದುರಾದಂತಿಲ್ಲ. ಇವರ ಮನೆಯಲ್ಲಿರೋ ಮಹಿಳೆಯರ ಮುಂದೆ ಬಂದು ಕುಳಿತ್ರೆ ಸಾಕು, ಇವರ ಹೇರ್ ಕಟ್ ಆಗಿಬಿಡುತ್ತೆ. ಮಹಿಳೆಯರೇ ಖುದ್ದು ಪುರುಷರ ಹೇರ್ ಟ್ರಿಮ್ ಮಾಡಿ ಖರ್ಚನ್ನೂ ಉಳಿಸಿದ್ದಾರೆ.
ಲಾಕ್‌ಡೌನ್ ಆರಂಭದ ವೇಳೆ ಹೇರ್ ಕಟ್ ಮಾಡಿಸಿರುವವರೆಲ್ಲಾ ಈಗ ಎರಡನೇ ಬಾರಿಗೆ ಮತ್ತೆ ತಮ್ಮ ಹೇರ್ ಕಟ್ ಮಾಡಿಸಿಕೊಳ್ಳಲು ಮಹಿಳೆಯರ ಮುಂದೆ ಬಂದು ಕುಳಿತಿದ್ದಾರೆ. ಮಹಿಳೆಯರು ಕೂಡಾ ಈ ಬಾರ್ಬರ್ ಕೆಲಸವನ್ನು ಎಂಜಾಯ್ ಮಾಡುತ್ತಿದ್ದಾರಂತೆ.