ಕರ್ನಾಟಕ

karnataka

ETV Bharat / bharat

ಕೊರೊನಾ ಭೀತಿ: ಲಾಕ್​ಡೌನ್​ ಇದ್ರೂ ಕೆಲಸಕ್ಕೆ ಹಾಜರಾಗೋ ಜೀವರಕ್ಷಕ ಸಿಬ್ಬಂದಿ - ಕೊರೊನಾ ಇತ್ತೀಚಿನ ಸುದ್ದಿ

ದೃಷ್ಟಿ ಮರಿನ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ರವಿಶಂಕರ್ ಕೂಡ ಪ್ರಸ್ತುತ ಪರಿಸ್ಥಿತಿಯ ಮಧ್ಯೆ ತಮ್ಮ ಜೀವರಕ್ಷಕ ಸೇವೆಗಳು ಮುಂದುವರಿಯುವಂತೆ ನೋಡಿಕೊಳ್ಳುವಲ್ಲಿ ನಿರತರಾಗಿದ್ದಾರೆ.

ಲಾಕ್​ಡೌನ್​ ಇದ್ರು ಕೆಲಸಕ್ಕೆ ಹಾಜರಾಗೋ ಜೀವರಕ್ಷಕ ಸಿಬ್ಬಂದಿ
ಲಾಕ್​ಡೌನ್​ ಇದ್ರು ಕೆಲಸಕ್ಕೆ ಹಾಜರಾಗೋ ಜೀವರಕ್ಷಕ ಸಿಬ್ಬಂದಿ

By

Published : Apr 5, 2020, 1:27 PM IST

ಪಣಜಿ: ಕೊರೊನಾ ಸೋಂಕು ಹಿನ್ನೆಲೆ ಗೋವಾದಲ್ಲಿ ಲಾಕ್​ಡೌನ್​ ಇದ್ರೂ ಕೂಡ ಬೀಚ್​ನಲ್ಲಿ ಕೆಲವರು ಕರ್ತವ್ಯ ನಿರ್ವಹಿಸಿ ಜನರ ರಕ್ಷಣೆಗೆ ಮುಂದಾಗಿದ್ದಾರೆ.

ಸಮುದ್ರಕ್ಕೆ ಬರುವ ಸ್ಥಳೀಯರ ಮೇಲೆ ನಿಗಾ ಇಡಬೇಕಾದ ಹಿನ್ನೆಲೆ ಕಾವಲುಗಾರ ಜಾಧವ್ ಮತ್ತು ಇತರ ಜೀವರಕ್ಷಕರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಯಾವುದೇ ಸಮಯದಲ್ಲಿ ತುರ್ತು ಪರಿಸ್ಥಿತಿ ಉಂಟಾಗಬಹುದು. ಆದ್ದರಿಂದ ನಾವು ಕಾವಲು ಕಾಯುತ್ತಲೇ ಇರುತ್ತೇವೆ ಎಂದು ಉತ್ತರ ಗೋವಾ ಜಿಲ್ಲೆಯ ಕಲಾಂಗುಟ್-ಬಾಗಾ ಬೀಚ್ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಜಾಧವ್ ತಿಳಿಸಿದ್ದಾರೆ.

ಇನ್ನು ಮಾರಣಾಂತಿಕ ಕೊರೊನಾ ವೈರಸ್ ನಿಯಂತ್ರಣಕ್ಕೆ ಕರಾವಳಿ ರಾಜ್ಯವು ಲಾಕ್ ಡೌನ್ ಹಂತದಲ್ಲಿದ್ದರೂ, ಖಾಸಗಿ ಏಜೆನ್ಸಿಯಾದ ದೃಷ್ಟಿ ಮೆರೈನ್‌ನ ಜೀವರಕ್ಷಕರು ಸಾಮಾನ್ಯ ದಿನದಂತೆ ಕೆಲಸಕ್ಕೆ ಹಾಜರಾಗಬೇಕಿದೆ. ಕಡಲತೀರದ ಉದ್ದಕ್ಕೂ ಜನರನ್ನು ನಿರ್ಬಂಧಿಸಲು ಕೆಂಪು ಬಾವುಟಗಳನ್ನು ನೆಡುತ್ತೇವೆ. ಅಲ್ಲದೆ, ನಾನೂ ಕೂಡ ಗಸ್ತು ತಿರುಗುತ್ತಿದ್ದೇನೆ. ಆ ವೇಳೆ ಕಂಡ ಜನರಿಗೆ ಬುದ್ದಿ ಹೇಳಿ ಮರಳಿ ಕಳುಹಿಸುತ್ತೇನೆ ಎನ್ನುತ್ತಾರೆ ಜಾಧವ್​.

ದೃಷ್ಟಿ ಮರಿನ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ರವಿಶಂಕರ್ ಕೂಡ ಪ್ರಸ್ತುತ ಪರಿಸ್ಥಿತಿಯ ಮಧ್ಯೆ ತಮ್ಮ ಜೀವರಕ್ಷಕ ಸೇವೆಗಳು ಮುಂದುವರಿಯುವಂತೆ ನೋಡಿಕೊಳ್ಳುವಲ್ಲಿ ನಿರತರಾಗಿದ್ದಾರೆ.

ಕಳೆದ ಕೆಲವು ವಾರಗಳಿಂದ ನಾವು ನಮ್ಮ ಜೀವರಕ್ಷಕರು ಮತ್ತು ಸಿಬ್ಬಂದಿಗೆ ಯಾವುದನ್ನು ಮಾಡಬೇಕು ಯಾವುದನ್ನು ಮಾಡಬಾರದು ಎಂಬುದರ ಬಗ್ಗೆ ಹೇಳಿಕೊಟ್ಟಿದ್ದೇವೆ. ಅದರಲ್ಲೂ ಕೋವಿಡ್​ 19 ಸಂಬಂಧ ತರಬೇತಿಗಳನ್ನು ನಡೆಸಿ ಇದರ ಬಗ್ಗೆ ಅರಿವು ಮೂಡಿದಲಾಗಿದೆ ಎಂದು ರವಿಶಂಕರ್​ ಹೇಳಿದ್ದಾರೆ.

ABOUT THE AUTHOR

...view details