ಅಜ್ಮೀರ್ (ರಾಜಸ್ಥಾನ):ಮಿಡತೆಗಳ ಹಾವಳಿಗೆ ಬೇಸತ್ತ ಜನ ಅದನ್ನು ಓಡಿಸುವ ಹಲವಾರು ಪ್ರಯತ್ನಗಳಲ್ಲಿ ತೊಡಗಿದ್ದಾರೆ. ರಾಜಸ್ಥಾನದ ಅಜ್ಮೀರ್‌ನ ಸ್ಥಳೀಯರು ಮಂಗಳವಾರ ಪಾತ್ರೆಗಳನ್ನು ಬಡಿದು ಮಿಡತೆಗಳನ್ನು ಓಡಿಸುವ ಪ್ರಯತ್ನ ಮಾಡಿದ್ದಾರೆ.
ಮಿಡತೆ ಹಾವಳಿಗೆ ಈ ನಗರ ತತ್ತರ: ತಟ್ಟೆ ಬಡಿದು ಓಡಿಸಿದ ಜನ - ರಾಜಸ್ಥಾನದ ಅಜ್ಮೀರ್
ಮರುಭೂಮಿ ಮಿಡತೆ ಇದು ಒಂದು ಪ್ರಭೇದವಾಗಿದೆ. ಇದು ಸಣ್ಣ-ಕೊಂಬಿನ ಮಿಡತೆಯಾಗಿದ್ದು ತಾನು ಸಾಗೋ ಹಾದಿಯಲ್ಲಿ ಸಿಗುವ ಗಿಡಗಳನ್ನೆಲ್ಲ ಸರ್ವನಾಶ ಮಾಡುತ್ತದೆ. ಆದರೆ, ಈ ಮಿಡತೆ ಹಾವಳಿ ಲಕ್ಷಾಂತರ ಜನರ ಜೀವನೋಪಾಯ ಕೊಳ್ಳಿ ಇಟ್ಟ ಕೊರೊನಾ ಏಟಿನ ಮೇಲೆ ಮತ್ತೊಂದು ದೊಡ್ಡ ಪೆಟ್ಟನ್ನೇ ನೀಡಿದೆ.
ಮಿಡತೆ ಹಾವಳಿ
ಮಕ್ಕಳು ಮತ್ತು ಮಹಿಳೆಯರು ತಮ್ಮ ಮನೆ ಚಾವಣಿಯ ಮೇಲೆ ಪಾತ್ರೆಗಳನ್ನು ಬಡಿದು ಮಿಡತೆ ಓಡಿಸುವ ಪ್ರಯತ್ನದಲ್ಲಿ ತೊಡಗಿಕೊಂಡಿದ್ದರು. 14,80,858 ಹೆಕ್ಟೇರ್ನಲ್ಲಿ ನಡೆಸಿದ ಸಮೀಕ್ಷೆಯಲ್ಲಿ 383 ಸ್ಥಳಗಳ 11,60,091 ಹೆಕ್ಟೇರ್ ಪ್ರದೇಶದಲ್ಲಿ ಮಿಡತೆ ದಾಳಿಯನ್ನು ನಿಯಂತ್ರಿಸಲಾಗಿದೆ ಎಂದು ರಾಜಸ್ಥಾನ ಸರ್ಕಾರದ ಕೃಷಿ ಇಲಾಖೆ ಭಾನುವಾರ ತಿಳಿಸಿದೆ.
ಏಪ್ರಿಲ್ 11 ರಂದು ಜೈಸಲ್ಮೇರ್ ಮತ್ತು ಶ್ರೀಗಂಗನಗರ ಜಿಲ್ಲೆಗಳು ಮೊದಲ ಮಿಡತೆ ದಾಳಿಗೆ ಸಾಕ್ಷಿಯಾಗಿದೆ. ಇತ್ತೀಚೆಗೆ ಮೇ 30 ರಂದು ಅಲ್ವಾರ್ ಜಿಲ್ಲೆಗೆ ಮಿಡತೆಗಳು ದಾಳಿ ಮಾಡಿವೆ ಎಂದು ಇಲಾಖೆ ವರದಿಯಲ್ಲಿ ತಿಳಿಸಿದೆ.
Last Updated : Jun 10, 2020, 9:12 AM IST