ಮಹಬೂಬಾಬಾದ್(ತೆಲಂಗಾಣ):ಮಕ್ಕಳೇ.. ನನ್ನನ್ನು ನೋಡಿಕೊಳ್ಳುವವರ‍್ಯಾರು.. ನೀವು ಇಲ್ಲದೇ ಬೆಳೆ ಬೆಳೆಯುವುದ್ಹೇಗೆ.. ಅಂತಾ ಎತ್ತುಗಳ ಸಾವು ಕಣ್ಣಾರೆ ಕಂಡ ಆ ರೈತ ಕುಟುಂಬದ ರೋದನ ಮುಗಿಲು ಮುಟ್ಟಿತ್ತು. ಈ ಮನಕಲಕುವ ಘಟನೆ ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಡೊರ್ನಕಲ್ ತಾಲೂಕಿನ ವೆನ್ನಾರಂ ಗ್ರಾಮದ ನಿವಾಸಿ ರೈತ ರಾಮ್ಮೂರ್ತಿ ತನ್ನ ಸ್ವಂತ ಮಕ್ಕಳಿಗಿಂತ ಹೆಚ್ಚಾಗಿ ಎರಡು ಎತ್ತುಗಳನ್ನು ಸಾಕಿ ಸಲುಹಿದ್ದರು. ಭಾನುವಾರ ರಾಮ್ಮೂರ್ತಿ ಜಮೀನು ಉಳುಮೆಗೆ ಎತ್ತುಗಳನ್ನು ಕರೆದೊಯ್ದು ಮರಕ್ಕೆ ಕಟ್ಟಿದ್ದರು. ಕೋತಿಗಳಿಂದ ಬೆಳೆಯನ್ನು ಕಾಪಾಡುವುದಕ್ಕೆ ರಾಮ್ಮೂರ್ತಿ ಸಾಕಿರುವ ಕೋತಿಯನ್ನು ಜಮೀನಿಗೆ ಕರೆದೊಯ್ದಿದ್ದರು.
ಮುಗಿಲು ಮುಟ್ಟಿತ್ತು ಆ ರೈತ ಕುಟುಂಬನ ಆಕ್ರಂದನ ಈ ವೇಳೆ ರಭಸವಾಗಿ ಮಳೆ ಸುರಿದಿತ್ತು. ಎತ್ತುಗಳ ಬಳಿ ಕೋತಿಯೂ ಇದ್ದು, ಈ ವೇಳೆ ಎತ್ತುಗಳಿದ್ದ ಜಾಗದಲ್ಲಿ ಸಿಡಿಲು ಬಡಿದಿದೆ. ಎತ್ತುಗಳು ಮತ್ತು ಕೋತಿ ಸಿಡಿಲಿಗೆ ಸ್ಥಳದಲ್ಲೇ ಸಾವನ್ನಪ್ಪಿವೆ. ಇದನ್ನು ಕಣ್ಣಾರೆ ಕಂಡ ರೈತ ಒಂದು ಕ್ಷಣ ದಿಗ್ಭ್ರಾಂತಿಯಾದರು. ಎತ್ತುಗಳು ಮತ್ತು ಕೋತಿ ಸಾವನ್ನಪ್ಪಿರುವುದನ್ನು ಅರಗಿಸಿಕೊಳ್ಳಲಾಗದೇ ಅವರ ರೋದನೆ ಮುಗಿಲು ಮುಟ್ಟಿತ್ತು. ಸುದ್ದಿ ತಿಳಿದ ಆತನ ಕುಟುಂಬಸ್ಥರು ಸಹ ಸ್ಥಳಕ್ಕೆ ಬಂದರು. ಆತನ ಕುಟುಂಬ ಸಹ ಆ ಮೂಕ ಜೀವಿಗಳ ಸಾವು ನೋಡಿ ರೋದಿಸುತ್ತಲೇ ಇದ್ದರು.
ಸ್ಥಳೀಯರು, ಸಂಬಂಧಿಕರು ಎಷ್ಟೇ ಸಮಾಧಾನಗೊಳಿಸಿದರೂ ಅವರ ಆಕ್ರಂದನ ಮಾತ್ರ ನಿಲ್ಲಲಿಲ್ಲ. ರೈತ ಕುಟುಂಬದ ಆಕ್ರಂದನ ಕಂಡು ಸ್ಥಳೀಯರು, ಸಂಬಂಧಿಕರ ಕಣ್ಂಚೆ ಒದ್ದೆಯಾಗಿದ್ದವು. ಬಳಿಕ ರಾಮ್ಮೂರ್ತಿ ಅದೇ ಭೂಮಿಯಲ್ಲಿ ಅವುಗಳ ಅಂತ್ಯೆಕ್ರಿಯೆಯನ್ನು ವಿಧಿವಿಧಾನಗಳ ಮೂಲಕ ನೇರವೇರಿಸಿದರು.