ಹೈದರಾಬಾದ್:ಕೋವಿಡ್-19 ವೈರಸ್ ಇಡೀ ವಿಶ್ವವನ್ನೇ ಆವರಿಸಿದ್ದು, ಎಲ್ಲೆಲ್ಲೂ ತಲ್ಲಣ ಸೃಷ್ಟಿಸಿದೆ. ಇದನ್ನು ನಿಯಂತ್ರಿಸಲು ವಿಜ್ಞಾನಿಗಳು ಹಾಗೂ ವೈದ್ಯರು ಶಕ್ತಿಮೀರಿ ಪ್ರಯತ್ನಿಸುತ್ತಿದ್ದರೂ ಇನ್ನೂ ಸಾಧ್ಯವಾಗಿಲ್ಲ. ಜಗತ್ತಿನಾದ್ಯಂತ ಆರೋಗ್ಯ ವ್ಯವಸ್ಥೆಯನ್ನೇ ಹಾಳು ಮಾಡಿರುವ ವೈರಸ್ ಸಾಮಾಜಿಕ, ಆರ್ಥಿಕ, ಮಾನವೀಯ ಬಿಕ್ಕಟ್ಟನ್ನು ಸಹ ಸೃಷ್ಟಿಸಿದೆ.
ಏನೇ ಆದರೂ ಬದುಕು ಮುನ್ನಡೆಯುವುದು ಮಾತ್ರ ಅನಿವಾರ್ಯ. ಹೀಗಾಗಿ ಇಂದಿನ ಪರಿಸ್ಥಿತಿಯಲ್ಲಿ ಕೊರೊನಾಗೆ ಹೆದರದೆ ಅದರ ಬಗ್ಗೆ ವಾಸ್ತವತೆಗಳನ್ನು ಅರ್ಥಮಾಡಿಕೊಂಡು ಸುರಕ್ಷಿತವಾಗಿ ಬದುಕಲು ಕಲಿಯುವುದೊಂದೇ ಮಾರ್ಗ ಉಳಿದಿದೆ. ಕೊರೊನಾ ಬಗ್ಗೆ ಒಂದಿಷ್ಟು ಒಳ್ಳೆಯ ಮಾಹಿತಿಗಳು ಇಲ್ಲಿದ್ದು, ಇವನ್ನು ಅರಿತುಕೊಂಡಲ್ಲಿ ನಿಮ್ಮ ಮನದಲ್ಲಿನ ಭಯವೂ ಕೊಂಚ ಕಡಿಮೆಯಾಗುವುದು ಖಂಡಿತ.
ಕೋವಿಡ್-19 ಬಗ್ಗೆ ಮತ್ತಷ್ಟು ತಿಳಿಯೋಣ ಕೊರೊನಾ ಪಾಸಿಟಿವ್ ಅಂದಾಕ್ಷಣ ಖಂಡಿತ ಹೆದರಬೇಕಿಲ್ಲ!
ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ ಎಂದಾಕ್ಷಣ ಭಯಭೀತರಾಗುವ ಯಾವುದೇ ಅಗತ್ಯವಿಲ್ಲ. ಜೀವ ಹೋದೀತೆಂಬ ಭಯದಲ್ಲಿ ಆಸ್ಪತ್ರೆಗೆ ಓಡಿ ಹೋಗುವ ಅಗತ್ಯವೂ ಇಲ್ಲ. ಕೊರೊನಾ ವೈರಸ್ ಬಗ್ಗೆ ಸೂಕ್ತ ಮಾಹಿತಿ ಇದ್ದವರು ಇದರೊಂದಿಗೆ ಸಮರ್ಥವಾಗಿ ಹೋರಾಡಿ ಗೆಲುವು ಸಾಧಿಸಿದ್ದನ್ನು ನಾವು ಕೇಳುತ್ತಿದ್ದೇವೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (Indian Medical Research Council -ICMR) ಮಾರ್ಗಸೂಚಿಗಳ ಪ್ರಕಾರ- ಸೋಂಕು ಲಕ್ಷಣರಹಿತ ರೋಗಿಗಳು ಮತ್ತು ಅತಿ ಕಡಿಮೆ ಸೋಂಕಿನ ಲಕ್ಷಣಗಳನ್ನು ಹೊಂದಿರುವವರು ತಾವಾಗಿಯೇ ತಮ್ಮ ಚಿಕಿತ್ಸೆ ಮಾಡಿಕೊಳ್ಳಲು ಆರಂಭಿಸಬಹುದು ಅಥವಾ ಮನೆಯಲ್ಲಿ ಪ್ರತ್ಯೇಕವಾಗಿ ಇದ್ದು ಚಿಕಿತ್ಸೆ ಪಡೆದುಕೊಳ್ಳಲಾರಂಭಿಸಿದರು. ಸಾವಿರಾರು ರೋಗಿಗಳು ಮನೆಯಲ್ಲಿದ್ದು ಚಿಕಿತ್ಸೆ ಪಡೆದು ಈಗಾಗಲೇ ಗುಣಮುಖರಾಗಿದ್ದು, ಇನ್ನೂ ಅನೇಕರು ಗುಣಮುಖರಾಗುವ ಹಾದಿಯಲ್ಲಿದ್ದಾರೆ. ಆದಾಗ್ಯೂ ಕೊರೊನಾ ಕುರಿತಾದ ನೂರಾರು ಪ್ರಶ್ನೆಗಳು ನಮ್ಮ ತಲೆಯನ್ನು ಕೊರೆಯುತ್ತಲೇ ಇವೆ.
ಕೋವಿಡ್-19 ಬಗ್ಗೆ ಮತ್ತಷ್ಟು ತಿಳಿಯೋಣ ಸೋಂಕಿನ ಲಕ್ಷಣವೇ ಇಲ್ಲದವರು ಅಥವಾ ಸಣ್ಣ ಪ್ರಮಾಣದ ಲಕ್ಷಣಗಳಿರುವವರು ಯಾವೆಲ್ಲ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು? ಕೆಲಸಕ್ಕೆ ಹೋಗುವುದಾ ಅಥವಾ ಬೇಡವಾ? ಮನೆ ಅಥವಾ ಕಚೇರಿಯಲ್ಲಿ ಯಾರಿಗಾದರೂ ಕೊರೊನಾ ಬಂದಲ್ಲಿ ಏನು ಮಾಡುವುದು? ಯಾವಾಗ ಪರೀಕ್ಷೆ ಮಾಡಿಸಿಕೊಳ್ಳುವುದು? ಆಸ್ಪತ್ರೆಗೆ ಹೋಗುವುದು ಯಾವಾಗ ಅನಿವಾರ್ಯ? ... ಈ ಎಲ್ಲ ಪ್ರಶ್ನೆಗಳಿಗೆ ಉತ್ತರಗಳು ಇಲ್ಲಿವೆ..
ಖ್ಯಾತ ವೈದ್ಯರಾದ ಡಾ. ಎಂ.ವಿ. ರಾವ್ ಅವರು ಕೊರೊನಾ ವೈರಸ್ ಬಗ್ಗೆ ಅತ್ಯುತ್ತಮ ಮಾಹಿತಿಗಳನ್ನು ನೀಡಿದ್ದಾರೆ.
"ಕೊರೊನಾ ಎಂಬುದು ಸಾಂಕ್ರಾಮಿಕವಾಗಿ ಹರಡುವ ವೈರಸ್ ಆಗಿದ್ದು, ಇದರ ಜೀವಿತಾವಧಿ ಒಂದರಿಂದ ಎರಡು ವಾರಗಳಷ್ಟಿರುತ್ತದೆ. ನಂತರ ಶರೀರದಲ್ಲಿ ಇದರ ಪ್ರಭಾವ ಕಡಿಮೆಯಾಗಲಾರಂಭಿಸುತ್ತದೆ. ಕೊರೊನಾ ಸೋಂಕು ತಗುಲಿದ ಶೇ 85 ರಷ್ಟು ಜನರಿಗೆ ಯಾವುದೇ ಗಂಭೀರ ರೀತಿಯ ಅಪಾಯವಿರುವುದಿಲ್ಲ ಎಂಬುದು ಗೊತ್ತಿರಲಿ. ಆದರೆ ಸೋಂಕು ತಗುಲಿದ್ದರೂ ಅದರ ಪ್ರಭಾವ ಅಥವಾ ಲಕ್ಷಣಗಳು ಕಾಣಿಸಿಕೊಳ್ಳದೆಯೂ ಇರಬಹುದು."
ಕೋವಿಡ್-19 ಬಗ್ಗೆ ಮತ್ತಷ್ಟು ತಿಳಿಯೋಣ "ತಮಗೆ ಕೊರೊನಾ ವೈರಸ್ ಸೋಂಕು ತಗುಲಿದೆ ಎಂಬುದು ಸಹ ಅನೇಕರಿಗೆ ಗೊತ್ತಾಗುವುದೇ ಇಲ್ಲ. ಕೆಲ ದಿನಗಳ ನಂತರ ಸೋಂಕಿನ ವಿರುದ್ಧ ಶರೀರದಲ್ಲಿ ಪ್ರತಿಕಾಯಗಳು ನಿರ್ಮಾಣವಾಗಲಾರಂಭಿಸುತ್ತವೆ. ಕೇವಲ ಶೇ 15 ರಷ್ಟು ಜನರಲ್ಲಿ ಮಾತ್ರ ಸೋಂಕಿನ ಸ್ಪಷ್ಟ ಲಕ್ಷಣಗಳು ಗೋಚರಿಸುತ್ತವೆ ಹಾಗೂ ಅದರಲ್ಲಿ ಕೆಲವೇ ಕೆಲವರಿಗೆ ಮಾತ್ರ ಆರೋಗ್ಯ ಸ್ಥಿತಿ ಗಂಭೀರವಾಗುತ್ತದೆ. ಈ ಶೇ 15 ಸೋಂಕಿತರಲ್ಲಿ ಕೇವಲ ಶೇ 5 ರಷ್ಟು ಜನರಿಗೆ ಮಾತ್ರ ಐಸಿಯು ಚಿಕಿತ್ಸೆ ಅಗತ್ಯವಾಗುತ್ತದೆ. ಹೀಗಾಗಿ ಕೊರೊನಾ ವೈರಸ್ ಹಾಗೂ ಅದರ ಪರಿಣಾಮಗಳ ವಾಸ್ತವಾಂಶಗಳ ಅರಿವಿದ್ದಲ್ಲಿ ಅದಕ್ಕಾಗಿ ಹೆದರುವ ಅಗತ್ಯವೇ ಇಲ್ಲ ಹಾಗೂ ನಿಮ್ಮ ಧೈರ್ಯದಿಂದಲೇ ಅರ್ಧ ರೋಗ ವಾಸಿಯಾದಂತೆ. ಕೊರೊನಾ ವೈರಸ್ ಹೊಸ ರೋಗವಾಗಿರುವುದರಿಂದ ಅದನ್ನು ವೈಜ್ಞಾನಿಕವಾಗಿ ಅರಿತುಕೊಳ್ಳುವುದು ಅತಿ ಅಗತ್ಯವಾಗಿದೆ." ಎನ್ನುತ್ತಾರೆ ಡಾ. ರಾವ್.
ಕೋವಿಡ್-19 ಬಗ್ಗೆ ಮತ್ತಷ್ಟು ತಿಳಿಯೋಣ "ಕೊರೊನಾ ವೈರಸ್ ಬಹುತೇಕವಾಗಿ ಶ್ವಾಸಕೋಶಕ್ಕೇ ಮೊದಲು ದಾಳಿ ಮಾಡುತ್ತದೆ. ಹೀಗಾಗಿ ಸಣ್ಣ ಪ್ರಮಾಣದ ಗಂಟಲು ಕೆರೆತ ಹಾಗೂ ಜ್ವರ ಕಂಡು ಬರುತ್ತವೆ. ಹಾಗೆಯೇ ಬಹುತೇಕ ವ್ಯಕ್ತಿಗಳಲ್ಲಿ ಇದು ತಾನಾಗಿಯೇ ಗುಣವಾಗುತ್ತದೆ. ಆದರೆ ಕೆಲ ಬಾರಿ ಮಾತ್ರ ಇದು ನ್ಯೂಮೋನಿಯಾಗೆ ಕಾರಣವಾಗುತ್ತದೆ. ಇನ್ನು ಕೆಲ ವಿರಳ ಪ್ರಕರಣಗಳಲ್ಲಿ ವೈರಸ್ ಸೋಂಕು ಹೋಗಿದ್ದರೂ ದೇಹದಲ್ಲಿ ನೋವಿನ ಲಕ್ಷಣಗಳು ಕಂಡು ಬರುತ್ತವೆ. ಈ ಸಮಯದಲ್ಲಿ ದೇಹದ ರೋಗ ಪ್ರತಿರೋಧಕ ಶಕ್ತಿ ಜಾಗೃತಗೊಂಡು ಸೈಟೋಕಿನ್ ಸೇರಿದಂತೆ ಇನ್ನೂ ಹಲವಾರು ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಈ ಪ್ರಕ್ರಿಯೆಯನ್ನು ಸೈಟೋಕಿನ್ ಸ್ಟಾರ್ಮ್ ಎನ್ನುತ್ತಾರೆ. ಇದರಿಂದ ರಕ್ತಕೋಶಗಳ ಮೃದುವಾದ ಎಂಡೋಥೀಲಿಯಂ ಪರದೆಗೆ ಹಾನಿಯಾಗುತ್ತದೆ. ಇದು ರಕ್ತ ಹೆಪ್ಪುಗಟ್ಟಲು ಸಹ ಕಾರಣವಾಗಬಹುದು. ಹೀಗಾದಲ್ಲಿ ಶರೀರದ ಅಂಗಾಂಗಗಳಿಗೆ ಅಗತ್ಯವಾದ ಆಕ್ಸಿಜನ್, ಪೌಷ್ಟಿಕಾಂಶಗಳು ಹಾಗೂ ಇನ್ನಿತರ ವಸ್ತುಗಳ ಪೂರೈಕೆಗೆ ಅಡ್ಡಿ ಉಂಟಾಗಬಹುದು. ಇಂಥ ಪರಿಸ್ಥಿತಿಯು ಗಂಭೀರ ಆರೋಗ್ಯ ಸ್ಥಿತಿ ಎಂದು ಹೇಳಲಾಗಿದ್ದು, ತುರ್ತು ವೈದ್ಯಕೀಯ ಚಿಕಿತ್ಸೆ ನೀಡಬೇಕಾಗುತ್ತದೆ."
ಕೋವಿಡ್-19 ಬಗ್ಗೆ ಮತ್ತಷ್ಟು ತಿಳಿಯೋಣ ಕೋವಿಡ್-19 ಬಗ್ಗೆ ಮತ್ತಷ್ಟು ತಿಳಿಯೋಣ