ಹೈದರಾಬಾದ್‌ನ ಸಿಎಸ್‌ಐಆರ್‌ನ ಭಾರತೀಯ ರಾಸಾಯನಿಕ ತಂತ್ರಜ್ಞಾನ ಸಂಸ್ಥೆಯ (ಐಐಸಿಟಿ) ನಿರ್ದೇಶಕ ಡಾ. ಎಸ್. ಚಂದ್ರಶೇಖರ್ ಅವರು “ನಾವು ಕೋವಿಡ್- 19 ಅನ್ನು ನಿಯಂತ್ರಿಸಲು ಬಹುಮುಖ ತಂತ್ರದೊಂದಿಗೆ ಮುಂದುವರಿಯುತ್ತಿದ್ದೇವೆ” ಎಂದಿದ್ದಾರೆ.
ವೈರಸ್ ವಿರುದ್ಧ ಪರಿಣಾಮಕಾರಿ ಕೆಲಸ ನಿರ್ವಹಿಸುವುದಕ್ಕಾಗಿ ಕಂಡುಹಿಡಿದ ಔಷಧಿಗಳನ್ನು ಉತ್ಪಾದಿಸುವುದರ ಜೊತೆಗೆ, ವೈರಸ್ ದೇಹಕ್ಕೆ ಬರದಂತೆ ತಡೆಯುವ ಲಸಿಕೆಗಳನ್ನು ತಯಾರಿಸುವತ್ತ ಗಮನ ಹರಿಸಲಾಗಿದೆ. ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಪರಿಷತ್ತಿನ(ಸಿಎಸ್ಐಆರ್) ಪ್ರಯೋಗಾಲಯಗಳು ಈ ಕುರಿತು ಸಂಶೋಧನೆ ನಡೆಸುತ್ತಿವೆ ಎಂದು ಐಐಸಿಟಿ ತಿಳಿಸಿದೆ. ಅವರು ರಾಜ್ಯಸಭಾ ಟಿವಿಯೊಂದಿಗೆ ಕೋವಿಡ್- 19 ಪರೀಕ್ಷೆಗಳು, ಪ್ರಸ್ತುತ ಸವಾಲುಗಳು ಮತ್ತು ಸೂಕ್ತ ಔಷಧದ ಪ್ರಗತಿಯ ಕುರಿತು ಮಾತನಾಡಿದರು.
ವ್ಯಾಪಕವಾಗಿ ಹಬ್ಬುತ್ತಿರುವ ಸಾಂಕ್ರಾಮಿಕ ರೋಗ ಕೋವಿಡ್ -19 ಪ್ರಸ್ತುತ ದೊಡ್ಡ ಅನಾಹುತವನ್ನು ಸೃಷ್ಠಿಸಿದೆ. ಕೊರೊನಾ ವೈರಸ್ ಕಳೆದ 4 ತಿಂಗಳಿನಿಂದ ವ್ಯಾಪಕ ಹಾನಿಯನ್ನುಂಟುಮಾಡುತ್ತಿದೆ. ಇಷ್ಟುಅಲ್ಪಾವಧಿಯಲ್ಲಿ ಮಾರಕ ವೈರಸ್ ಅನ್ನು ಎದುರಿಸಲು ಸೂಕ್ತವಾದ ಔಷಧಗಳು ಮತ್ತು ಲಸಿಕೆಗಳನ್ನು ಕಂಡು ಹಿಡಿಯುವುದು ಬಹಳ ಕಷ್ಟ. ಆದಾಗ್ಯೂ, ಐಐಸಿಟಿ ರಿವರ್ಸ್ ಗೇರ್ ಎಂಜಿನಿಯರಿಂಗ್ ವಿಧಾನದ ಮೂಲಕ ಜಾಗತಿಕವಾಗಿ ಕೆಲಸ ಮಾಡುವ ಕೆಲವು ಔಷಧಿಗಳನ್ನು ತಯಾರಿಸುವ ಕಾರ್ಯವಿಧಾನವನ್ನು ಹೊರ ತಂದಿದೆ. ಈ ಸಾಂಕ್ರಾಮಿಕ ರೋಗಕ್ಕೆ ಪ್ರಪಂಚದಲ್ಲಿ ಎಲ್ಲಿಯಾದರೂ ಔಷಧ ತಯಾರಿಸಿದರೆ ಮತ್ತು ಅದು ಪೇಟೆಂಟ್ ಹೊಂದಿದ್ದರೂ ಸಹ ಐಐಸಿಟಿ ಕಡಿಮೆ ವೆಚ್ಚದಲ್ಲಿ ಲಸಿಕೆಯನ್ನು ತಯಾರಿಸುವ ಯೋಜನೆಯನ್ನು ಹಾಕಿದೆ.
ಈ ಔಷಧವನ್ನು ಮೂಲತಃ ಬೇರೆಯದೇ ಪ್ರಕ್ರಿಯೆಯನ್ನು ಅಳವಡಿಸುವುದರ ಮೂಲಕ ತಯಾರಿಸುವುದು ಐಐಸಿಟಿ ಉದ್ದೇಶ. ಇದರಿಂದಾಗಿ ಐಐಸಿಟಿ ಲಸಿಕೆ ತಯಾರಿಕೆ ಪ್ರಕ್ರಿಯೆಯನ್ನು ಮುಂದುವರಿಸಿದೆ. ಈ ರೀತಿಯಾಗಿ, ಒಂದೇ ಔಷಧಿಯನ್ನು ಅಗ್ಗದ ಬೆಲೆಗೆ ಲಭ್ಯವಾಗುವ ಹಾಗೆ ಮಾಡಬಹುದು. ಜೆನೆರಿಕ್ ಮೆಡಿಸಿನ್ (ಜನೌಷಧ) ಸಂಬಂಧಿತ ಔಷಧ ತಯಾರಿಕೆಯನ್ನು ರಿವರ್ಸ್ ಗೇರ್ ಎಂಜಿನಿಯರಿಂಗ್ ಮೂಲಕವೇ ಮಾಡಲಾಗುತ್ತದೆ. ಜಗತ್ತಿನಲ್ಲಿ ಎಲ್ಲೆಲ್ಲಿ ಔಷಧಿ ಅಥವಾ ಲಸಿಕೆ ತಯಾರಿಸಿದರೂ ಭಾರತದಲ್ಲಿ ಅದನ್ನು ತಯಾರಿಸುವುದು ಅನಿವಾರ್ಯ ಏಕೆಂದರೆ, ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದ ವಿವಿಧ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯ ಎಫ್‌ಡಿಎ ಅನುಮೋದಿತ ಔಷಧ ಉತ್ಪಾದನಾ ಘಟಕಗಳನ್ನು ಹೊಂದಿರುವ ಕಾರಣ ಹೊಸದಾಗಿ ಕಂಡುಹಿಡಿದ ಲಸಿಕೆಗಳನ್ನು ಭಾರತದಲ್ಲಿಯೂ ಆದಷ್ಟು ಬೇಗ ತಯಾರಿಸಲು ಕಾರ್ಯತಂತ್ರ ರೂಪಿಸಬೇಕು.