ಕರ್ನಾಟಕ

karnataka

ETV Bharat / bharat

ಸ್ಮಶಾನವನ್ನೇ ವಾಸ ಸ್ಥಾನವನ್ನಾಗಿಸಿಕೊಂಡ ಚಿರತೆ... ಬೆಚ್ಚಿಬಿದ್ದ ಜನರು - ಅರಣ್ಯ ಇಲಾಖೆ

ಅಮರಿಯಾ ಜಿಲ್ಲೆಯ ಸ್ಮಶಾನದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುವ ಚಿರತೆ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಸದ್ಯ ಸ್ಮಶಾನದ ರಸ್ತೆಯಲ್ಲಿ ಅತ್ತಿಂದಿತ್ತ ಓಡಾಡುತ್ತಿರುವ ಚಿರತೆಯ ದೃಶ್ಯ ಸೇರೆಯಾಗಿದ್ದು, ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ಸ್ಥಳೀಯರು ಆಗ್ರಹಿಸಿದ್ದಾರೆ.

Leopard's frequent visit to UP's village scare locals
ಸ್ಮಶಾನವನ್ನೇ ತನ್ನ ಮನೆಯನ್ನಾಗಿಸಿದ ಚಿರತೆ...ಸ್ಥಳಿಯರಲ್ಲಿ ಆತಂಕ

By

Published : Aug 26, 2020, 2:04 PM IST

ಅಮರಿಯಾ(ಉತ್ತರ ಪ್ರದೇಶ):ಇಲ್ಲಿನ ಪಿಲಿಬಿತ್​​​ ಪ್ರದೇಶದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಇಲ್ಲಿನ ಜನನಿಬಿಡ ಪ್ರದೇಶದಲ್ಲಿ ಹಿರಿ ವಯಸ್ಸಿನ ಚಿರತೆ ಓಡಾಡುತ್ತಿರುವುದು ಪತ್ತೆಯಾಗಿದೆ.

ಸ್ಮಶಾನವನ್ನು ಚಿರತೆ ತನ್ನ ವಾಸ ಸ್ಥಾನವನ್ನಾಗಿಸಿಕೊಂಡಿದ್ದು, ಆಗಾಗ್ಗೆ ಕಾಣಿಸಿಕೊಳ್ಳುತ್ತಿದೆ. ಆದಷ್ಟು ಬೇಗ ಅರಣ್ಯ ಇಲಾಖೆ ಸಿಬ್ಬಂದಿಯು ಈ ಕುರಿತು ಕ್ರಮಕ್ಕೆ ಮುಂದಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಸ್ಮಶಾನದಲ್ಲಿ ಚಿರತೆ ಓಡಾಟ

ಈ ಕುರಿತಂತೆ ಮಾತನಾಡಿರುವ ವಿಭಾಗೀಯ ಅರಣ್ಯ ಅಧಿಕಾರಿ ಸಂಜೀವ್ ಕುಮಾರ್, ಅಮರಿಯಾ ಜಿಲ್ಲೆಯಲ್ಲಿ ಚಿರತೆಯೊಂದು ಪತ್ತೆಯಾಗಿದೆ. ಅದನ್ನು ಹಿಡಿಯುಲು ಈಗಾಗಲೇ ಟ್ರ್ಯಾಕಿಂಗ್​ ನಡೆಸಲಾಗುತ್ತಿದೆ. ಈ ಚಿರತೆಯು ಪಿಲಿಬಿತ್​​ ಹುಲಿ ಸಂರಕ್ಷಿತಾ ಅರಣ್ಯದಿಂದ 18 ಕಿಲೋ ಮೀಟರ್ ದೂರದವರೆಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ ಎಂದಿದ್ದಾರೆ.

ಚಿರತೆ ಓಡಾಡಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗುತ್ತಿದೆ.

ABOUT THE AUTHOR

...view details