ಕರ್ನಾಟಕ

karnataka

ETV Bharat / bharat

ಭಾರತದಲ್ಲಿ ಚಿರತೆಗಳ ಸಂತತಿ ಹೆಚ್ಚಳ ಕುರಿತು ಮೋದಿ ಟ್ವೀಟ್​: ಭಾರತದಲ್ಲಿವೆ 12,852 ಚಿರತೆಗಳು! - ಅತಿಹೆಚ್ಚು ಚಿರತೆ ಹೊಂದಿರುವ ರಾಜ್ಯ

ದೇಶದಲ್ಲಿ ಕಳೆದ ಕೆಲ ವರ್ಷಗಳಲ್ಲಿ ಚಿರತೆ ಸಂತತಿಯಲ್ಲಿ ಗಣನೀಯ ಏರಿಕೆ ಕಂಡು ಬಂದಿದ್ದು, ಭಾರತದಲ್ಲಿ ಇದೀಗ ಒಟ್ಟು 12,852 ಚಿರತೆಗಳು ವಾಸಿಸುತ್ತಿವೆ. ಮಧ್ಯಪ್ರದೇಶ 3421 ಚಿರತೆಗಳನ್ನು ಹೊಂದಿದ್ದು, ಮೊದಲ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ 1,783 ಚಿರತೆಗಳಿದ್ದು, ಎರಡನೇ ಸ್ಥಾನದಲ್ಲಿದೆ. ಉಳಿದಂತೆ 1,690 ಚಿರೆತೆಗಳು ಮಹಾರಾಷ್ಟ್ರದಲ್ಲಿ ಕಂಡು ಬಂದಿವೆ.

leopard
ಭಾರತದಲ್ಲಿವೆ 12,852 ಚಿರತೆಗಳು

By

Published : Dec 22, 2020, 2:43 PM IST

ನವದೆಹಲಿ: ದೇಶದಲ್ಲಿ ಕಳೆದ ಕೆಲ ವರ್ಷಗಳಲ್ಲಿ ಚಿರತೆ ಸಂತತಿಯಲ್ಲಿ ಗಣನೀಯ ಏರಿಕೆಯಾಗಿರುವುದು ಕಂಡು ಬಂದಿದೆ. ಭಾರತದಲ್ಲಿನ 2018ರ ಚಿರತೆಗಳ ಸ್ಥಿತಿಗತಿ ಕುರಿತ ವರದಿಯನ್ನು ಕೇಂದ್ರ ಸರ್ಕಾರ ಸೋಮವಾರ ಬಿಡುಗಡೆ ಮಾಡಿದ್ದು, ಅದರನ್ವಯ ದೇಶದಲ್ಲಿ 12,852 ಚಿರತೆಗಳಿರುವುದು ಕಂಡುಬಂದಿದೆ.

ಅತಿಹೆಚ್ಚು ಚಿರತೆ ಹೊಂದಿರುವ ರಾಜ್ಯಗಳ ಪೈಕಿ ಕರ್ನಾಟಕ 2 ನೇ ಸ್ಥಾನದಲ್ಲಿದೆ. ವರದಿಯ ಪ್ರಕಾರ, 2014ರಲ್ಲಿ ದೇಶದಲ್ಲಿ 8,000 ಚಿರತೆಗಳಿದ್ದರೆ, 2018ರಲ್ಲಿ ಚಿರತೆಗಳ ಸಂಖ್ಯೆ 12,852ಕ್ಕೆ ಹೆಚ್ಚಳವಾಗಿದೆ. ಮಧ್ಯಪ್ರದೇಶ 3421 ಚಿರತೆಗಳನ್ನು ಹೊಂದಿದ್ದು, ಮೊದಲ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ 1,783 ಚಿರತೆಗಳಿದ್ದು, ಎರಡನೇ ಸ್ಥಾನದಲ್ಲಿದೆ. ಉಳಿದಂತೆ 1,690 ಚಿರೆತೆಗಳು ಮಹಾರಾಷ್ಟ್ರದಲ್ಲಿದ್ದು, ಅತೀ ಹೆಚ್ಚು ಚಿರತೆಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಮಹಾರಾಷ್ಟ್ರ 3 ನೇ ಸ್ಥಾನದಲ್ಲಿದೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಚಿರತೆ ಸಂತತತಿ ಹೆಚ್ಚಳ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ. ಭಾರತ ಈಗ 12,852 ಚಿರತೆಗಳನ್ನು ಹೊಂದಿದೆ ಎಂದು ಹೇಳಿರುವ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಪ್ರಧಾನಿ, ಗ್ರೇಟ್​ ನ್ಯೂಸ್​ ! ಸಿಂಹಗಳು ಮತ್ತು ಹುಲಿಗಳ ನಂತರ ಇದೀಗ ಚಿರತೆಗಳ ಸಂಖ್ಯೆ ಹೆಚ್ಚಾಗಿದೆ. ಪ್ರಾಣಿ ಸಂರಕ್ಷಣೆಗಾಗಿ ಕೆಲಸ ಮಾಡುತ್ತಿರುವ ಎಲ್ಲರಿಗೂ ಅಭಿನಂದನೆಗಳು. ನಾವು ನಮ್ಮ ಈ ಪ್ರಯತ್ನಗಳನ್ನು ಮುಂದುವರಿಸಬೇಕು ಮತ್ತು ನಮ್ಮ ಪ್ರಾಣಿಗಳು ಸುರಕ್ಷಿತ ಆವಾಸಸ್ಥಾನಗಳಲ್ಲಿ ವಾಸಿಸುವಂತೆ ನೋಡಿಕೊಳ್ಳಬೇಕು" ಎಂದು ಪಿಎಂ ಮೋದಿ ಟ್ವೀಟ್​​ನಲ್ಲಿ ತಿಳಿಸಿದ್ದಾರೆ. ಭಾರತದಲ್ಲಿ ಈಗ 12,852 ಚಿರತೆಗಳಿವೆ, ಈ ಹಿಂದಿನ ಅಂದಾಜು 2014 ರಲ್ಲಿ ನಡೆಸಿದ ನಾಲ್ಕು ವರ್ಷಗಳಲ್ಲಿ ಅವುಗಳ ಸಂಖ್ಯೆಯಲ್ಲಿ ಶೇ. 60 ಕ್ಕಿಂತ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ಹುಲಿಗಳು ಮತ್ತು ಸಿಂಹಗಳಂತೆ ಚಿರತೆಗಳ ಸಂಖ್ಯೆ ಏರಿಕೆಯಾಗಿರುವ ವರದಿ ಗಮನಿಸಿದ್ರೆ, ದೇಶವು ತನ್ನ ಪರಿಸರ ವಿಜ್ಞಾನ ಮತ್ತು ಜೀವವೈವಿಧ್ಯತೆಯನ್ನು ಚೆನ್ನಾಗಿ ರಕ್ಷಿಸುತ್ತಿದೆ ಎಂಬುದು ತಿಳಿಯುತ್ತದೆ ಎಂದಿದ್ರು.

ABOUT THE AUTHOR

...view details