ಕರ್ನಾಟಕ

karnataka

ETV Bharat / bharat

ಗಾಂಧೀಜಿಯ ತತ್ವಗಳು ಜಗತ್ತಿನ ಮಹಾನ್‌ ನಾಯಕರುಗಳಿಗೂ ಸ್ಫೂರ್ತಿ.. - Legacy of Gandhi

ಗಾಂಧೀಜಿ ಅವರು ತಮ್ಮ ಪ್ರತಿಯೊಂದು ಆಂದೋಲಗಳನ್ನು ಅಹಿಂಸಾತ್ಮಕವಾಗಿ ಮಾಡಿ, ಇಡೀ ವಿಶ್ವಕ್ಕೆ ಸ್ಫೂರ್ತಿಯಾಗಿದ್ದಾರೆ. ಅವರ ಅಹಿಂಸಾತ್ಮಕ ತತ್ವವನ್ನು ವಿಶ್ವದ ಅನೇಕ ನಾಯಕರು ಅಳವಡಿಸಿಕೊಂಡಿದ್ದಾರೆ. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ದಲೈ ಲಾಮಾ, ನೆಲ್ಸನ್ ಮಂಡೇಲಾ, ಅಡಾಲ್ಫೊ ಪೆರೆಜ್ ಎಸ್ಕ್ವಿವೆಲ್ ಸೇರಿದಂತೆ ಅನೇಕ ಜಗತ್ತಿನ ಮಹಾನ್‌ ನಾಯಕರು ಗಾಂಧಿ ತತ್ವಗಳಿಗೆ ಮಾರುಹೋಗಿದ್ದಾರೆ.

ಮಹಾತ್ಮ ಗಾಂಧೀಜಿ

By

Published : Sep 24, 2019, 6:55 AM IST

ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ದಲೈ ಲಾಮಾ, ನೆಲ್ಸನ್ ಮಂಡೇಲಾ, ಅಡಾಲ್ಫೊ ಪೆರೆಜ್ ಎಸ್ಕ್ವಿವೆಲ್, ವಿವಿಧ ಖಂಡಗಳ ನೊಬೆಲ್ ಪ್ರಶಸ್ತಿ ವಿಜೇತ ನಾಯಕರು ಗಾಂಧೀಜಿಯ ತತ್ವ ಮತ್ತು ಕೆಲಸಗಳಿಂದ ಹೆಚ್ಚು ಪ್ರಭಾವಿತರಾಗಿದ್ದಾರೆ.

ವರ್ಣಭೇದ ನೀತಿ ವಿರುದ್ಧ ಹೋರಾಟ ಬಾಪು ಸ್ಫೂರ್ತಿ:

ದಕ್ಷಿಣ ಆಫ್ರಿಕಾದಲ್ಲಿದ್ದ ವರ್ಣಭೇದ ನೀತಿಯನ್ನು ಹೋಗಲಾಡಿಸುವಲ್ಲಿ ನೆಲ್ಸನ್​ ಮಂಡೇಲಾ ಮತ್ತು ಡೆಸ್ಮಂಡ್​ ಟುಟು ಅವರು ಪ್ರಮುಖ ಪಾತ್ರವಹಿಸಿದ್ದಾರೆ. ವರ್ಣಭೇದ ನೀತಿ ವಿರೋಧಿ ಚಳವಳಿಯನ್ನು ಇವರಿಬ್ಬರೂ ಆರಂಭಿಸಿದ್ರು. ಈ ಮೂಲಕ ಕರಿಯರಿಗೆ ರಾಜಕೀಯ ಹಕ್ಕುಗಳನ್ನು ದೊರಕಿಸಿಕೊಟ್ಟರು. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಇವರನ್ನು ಅಮೆರಿಕಾದ ಗಾಂಧಿ ಎಂದು ಕರೆಯಲಾಗುತ್ತದೆ.

'ನಾನು ಗಾಂಧೀಜಿಯವರ ತತ್ತ್ವಶಾಸ್ತ್ರವನ್ನು ಆಳವಾಗಿ ಅಧ್ಯಯನ ಮಾಡುತ್ತಿದ್ದಂತೆ, ನನಗೆ ಪ್ರೀತಿಯ ಶಕ್ತಿಯ ಬಗ್ಗೆ ಇದ್ದ ಸಂದೇಹ ಕ್ರಮೇಣ ಕಡಿಮೆಯಾಯಿತು. ನನಗೆ ಮೊದಲು 'ಕ್ರಿಶ್ಚಿಯನ್​​ರ ಪ್ರೀತಿಯ ಸಿದ್ಧಾಂತ' ಹಾಗೂ ಈ ಕುರಿತು ಗಾಂಧೀಜಿ ಅವರ ನಿಲುವು ಎರಡು ಒಂದೇ ಎನಿಸಿತು. ಶೋಷಣೆಗೊಳಗಾದ ಜನರಿಗೆ ಅವರ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯವರ ಈ ಪ್ರೀತಿಯ ಮಾರ್ಗ ಪ್ರಬಲ ಶಸ್ತ್ರಾಸ್ತ್ರಗಳಲ್ಲಿ ಒಂದಾಗಲಿದೆ ಎಂದು 'ಪಿಲಿಗ್ರೀಮೇಜ್​​​​ ಟು ನಾನ್​​ವಯೋಲೆನ್ಸ್​​​'​​ (Pilgrimage to Nonviolence)ನಲ್ಲಿ ಮಾರ್ಟಿನ್ ಲೂಥರ್ ಬರೆದಿದ್ದಾರೆ. ಪ್ರೊಟೆಸ್ಟೆಂಟ್‌ಗಳಾದ ಸ್ಟಾನ್ಲಿ ಜೋನ್ಸ್, ಹೆನ್ರಿ ರೋಸರ್ ಮತ್ತು ಡಾ. ಕಾರ್ಮನ್, ಡಬ್ಲ್ಯೂ ಡಬ್ಲ್ಯೂ ಪಿಯರ್ಸನ್ ಇವರೆಲ್ಲಾ ಗಾಂಧೀಜಿಯವರ ತತ್ವಗಳನ್ನು ಅನುಸರಿಸುತ್ತಿದ್ದರು.

ಅಹಿಂಸಾತ್ಮಕ ಮಾರ್ಗದಲ್ಲಿ ಅನೇಕ ಚಳವಳಿ:

ಅಹಿಂಸಾ ಮಾರ್ಗದಲ್ಲಿ ಹೋದವರಿಗೆ ಅನೇಕ ಯಶಸ್ಸು ಸಿಕ್ಕಿದೆ ಎಂದು ಇತಿಹಾಸ ಹೇಳುತ್ತದೆ. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ನೇತೃತ್ವದಲ್ಲಿ 1960ರಲ್ಲಿ ಅಮೆರಿಕನ್ ನಾಗರಿಕ ಹಕ್ಕುಗಳ ಚಳವಳಿ ಆರಂಭಿಸಲಾಯಿತು. ಆಫ್ರಿಕನ್-ಅಮೆರಿಕನ್ನರಿಗೆ ರಾಜಕೀಯ ಹಕ್ಕುಗಳನ್ನು ನೀಡುವುದು ಈ ಚಳವಳಿಯ ಉದ್ದೇಶವಾಗಿತ್ತು. ಇನ್ನು, ಪೋಲೆಂಡ್​ನಲ್ಲಿ ಸಾಲಿಡಾರಿಟಿ ಮತ್ತು ಜೆಕೊಸ್ಲೊವಾಕಿಯಾದ ಚಾರ್ಟರ್​ 77ನಂತಹ ಶಕ್ತಿಗಳ ನೇತೃತ್ವದಲ್ಲಿ ಅಹಿಂಸಾತ್ಮಕ ಚಳವಳಿಯನ್ನು ಆರಂಭಿಸಲಾಯಿತು. ಫಿಲಿಪೈನ್ಸ್‌ನಲ್ಲಿ ಫರ್ಡಿನ್ಯಾಂಡ್​​ ಮಾರ್ಕೋಸ್​ನ ಸರ್ವಾಧಿಕಾರವನ್ನು ಉರುಳಿಸಲು 1986ರಲ್ಲಿ ಬೃಹತ್​​ ಸಂಖ್ಯೆಯಲ್ಲಿ ಜನರು ಪ್ರತಿಭಟಿಸಿದ್ರು. ಈ ವೇಳೆ ಜನರ ಮೇಲೆ ಗುಂಡು ಹಾರಿಸಲು ಸೈನ್ಯ ನಿರಾಕರಿಸಿತು. ಅಲ್ಲದೇ ಟ್ಯಾಂಕ್​ಗಳನ್ನು ನಿರ್ವಹಿಸುವ ಪುರುಷರಿಗೆ ಗುಲಾಬಿಗಳನ್ನು ಅರ್ಪಿಸುವ ಹುಡುಗಿಯರ ಚಿತ್ರಗಳನ್ನು ಸ್ಮರಣೆಗಾಗಿ ಕೆತ್ತಲಾಗಿದೆ. ಈ ಎಲ್ಲ ಚಳವಳಿಗಳನ್ನು ಪ್ರಜಾಪ್ರಭುತ್ವ ಬೆಂಬಲಿಸುವ ಸಲುವಾಗಿ ಮಾಡಲಾಗಿದೆ.

ಡೆಲ್ ವಾಸ್ಟೊಗೆ ಶಾಂತಿಯ ಸೇವಕ ಹೆಸರು ಬಂದಿದ್ದೇಕೆ?

ಜೋಸೆಫ್ ಜೀನ್ ಲಂಜಾ ಡೆಲ್ ವಾಸ್ಟೊ ಒಬ್ಬ ಕ್ರಿಶ್ಚಿಯನ್ ಆದರ್ಶವಾದಿಯಾಗಿದ್ದು, ಇವರು 1937ರಲ್ಲಿ ಗಾಂಧೀಜಿಯವರನ್ನು ಭೇಟಿಯಾಗಲು ವಾರ್ಧಾಗೆ ಬಂದಿದ್ದರು.1943 ರಲ್ಲಿ 'ಲೆ ಪೆಲೆರಿನೇಜ್ ಆಕ್ಸ್ ಮೂಲ' ಎಂಬ ಪುಸ್ತಕ ಬರೆದರು. ನಂತರ ಗಾಂಧೀಜಿ ಅವರ ಶಿಷ್ಯರಾಗಿ, ಶಾಂತಿದಾಸ್​ ಅಥವಾ ಶಾಂತಿಯ ಸೇವಕ ಎಂಬ ಹೆಸರು ಪಡೆದುಕೊಂಡರು. ನಂತರ ಡೆಲ್ ವಾಸ್ಟೊ 1957 ರಲ್ಲಿ ಫ್ರೆಂಚ್ ರಾಜಕೀಯದಲ್ಲಿ ಸಕ್ರಿಯರಾದರು. ಅಲ್ಜೀರಿಯನ್ನರು ಫ್ರೆಂಚ್​​ರನ್ನು ಹಿಂಸಿಸುವುದನ್ನು ವಿರೋಧಿಸಿ 20 ದಿನಗಳ ಕಾಲ ಉಪವಾಸ ಮಾಡಿದರು.

ಪ್ರೊಫೆಸರ್ ಎಡ್ವರ್ಡ್ ಅವರ ಪ್ರಕಾರ ಗಾಂಧೀಜಿ ಪ್ಯಾಲೆಸ್ಟೈನ್​​ನಲ್ಲಿ,'ಗಾಜಾದ ಗಾಂಧಿ' ಎಂದು ಪ್ರಸಿದ್ಧರಾಗಿದ್ದರು. ದಕ್ಷಿಣ ಆಫ್ರಿಕಾದ ಡರ್ಬನ್ ಸ್ಟ್ರೀಟ್​ಗೆ ಗಾಂಧಿ ಎಂದು ಹೆಸರಿಡಲಾಗಿದೆ. ಅರ್ಜೆಂಟೈನಾದ ಎಸ್ಕ್ವಿವೆಲ್ ಶಾಂತಿ ಮತ್ತು ನ್ಯಾಯದ ಸ್ಥಾಪಕರಾಗಿದ್ದಾರೆ. 1970ರ ದಶಕದಲ್ಲಿ ಆರಂಭವಾದ ಪ್ಯಾನ್-ಲ್ಯಾಟಿನ್ ಅಮೆರಿಕನ್ ನಾಗರಿಕ ಹಕ್ಕುಗಳ ಆಂದೋಲನವು ಅಹಿಂಸಾತ್ಮಕ ಮಾರ್ಗದಲ್ಲಿ ನಡೆದಿದೆ.

ಅಟ್ಲಾಂಟಾ ಮೂಲದ ಪ್ರೊಫೆಸರ್ ವಾಲ್ಟರ್ ಅರ್ಲ್ ಫ್ಲೂಕರ್ ಅವರು 2007ರಲ್ಲಿ ಭಾರತಕ್ಕೆ ಭೇಟಿ ನೀಡಿದ್ರು. ಈ ವೇಳೆ ಅವರು ಇಡೀ ವಿಶ್ವವೇ ಶಾಂತಿಯುತವಾಗಿ ಹಾಗೂ ಸಹಬಾಳ್ವೆಯಿಂದ ಇರಲು ಗಾಂಧೀಜಿಯವರ ಪಾತ್ರ ಮಹತ್ವವಾಗಿದೆ ಎಂದಿದ್ದಾರೆ. 1930ರಲ್ಲಿ ಯುಎಸ್‌ನ ಪತ್ರಿಕೆಯೊಂದು ತನ್ನ ‘ವರ್ಷದ ವ್ಯಕ್ತಿ’ ಎಂದು ಹೆಡ್​ಲೈನ್​ ನೀಡುವ ಮೂಲಕ ಗಾಂಧೀಜಿ ಅವರ ಕುರಿತು ಸುದ್ದಿ ಪ್ರಕಟಿಸಿತ್ತು. “ಅಹಿಂಸೆ”, “ಅಹಿಂಸಾತ್ಮಕ ಪ್ರತಿರೋಧ”, “ಸತ್ಯಾಗ್ರಹ” ಮತ್ತು “ಶಾಂತಿವಾದ” ಎಂಬ ನಾನಾ ಅರ್ಥಗಳನ್ನು ಅಹಿಂಸೆ ಎಂಬ ಪದಕ್ಕೆ ಜೀನ್​ ಶಾರ್ಪ್​ 1959 ರಲ್ಲಿ ನೀಡಿತ್ತು ಎಂದು ಅಮೆರಿಕಾದ ಪತ್ರಿಕೆಗಳಾದ ದಿ ನ್ಯೂಯಾರ್ಕ್ ಟೈಮ್ಸ್, ದಿ ಟೈಮ್ಸ್ ಮತ್ತು ದಿ ಮ್ಯಾಂಚೆಸ್ಟರ್ ಗಾರ್ಡಿಯನ್ ಬರೆದಿದ್ದವು.

ಟಾಂಜಾನಿಯಾದ ನಾಯಕ ಜೂಲಿಯಸ್ ನೈರೆರೆ ಗಾಂಧಿಯಿಂದ ಹೆಚ್ಚು ಪ್ರಭಾವಿತರಾಗಿದ್ದರು. ಆದ್ದರಿಂದ ಅವರು ವರ್ಣಭೇದ ನೀತಿಯನ್ನು ವಿರೋಧಿಸಿ, ಇದನ್ನು ಟಾಂಗನ್ಯಿಕಾ ಕ್ರಾಂತಿಯ ಮೇಲೆ ಹೇರಲು ಪ್ರಯತ್ನಿಸಿದರು. ಇನ್ನು, ಉತ್ತರ ನೈಜೀರಿಯಾದಲ್ಲೂ ಅನೇಕರು ಗಾಂಧೀಜಿ ಅವರ ತತ್ವ- ಆದರ್ಶಗಳನ್ನು ಅನುಸರಿಸುತ್ತಿದ್ದರು. ಇದರಲ್ಲಿ ಅನೇಕ ಧರ್ಮ ನಿಷ್ಠ ನೈಜೀರಿಯಾದ ಮುಸ್ಲಿಂ ವಿದ್ಯಾರ್ಥಿಗಳಿದ್ದರು.

ಪಾಶ್ಚಿಮಾತ್ಯ ಜೀವನ ವಿಧಾನವನ್ನು ಅನುಸರಿಸಿದ್ರೆ ಇದರಿಂದ ನಮ್ಮ ಕುಟುಂಬದ ವಿಭಜನೆಯಾಗುತ್ತದೆ ಮತ್ತು ಶತಮಾನಗಳಿಂದ ನಾವು ಪಾಲಿಸಿಕೊಂಡು ಬಂದಿರುವ ಮೌಲ್ಯಕ್ಕೆ ಧಕ್ಕೆಯಾಗುತ್ತದೆ ಎಂಬ ನಂಬಿಕೆ ನಮ್ಮಲಿದೆ. ಆದರೆ, ಇಂದಿನ ಪೀಳಿಗೆ ಈಗಲೂ ಗಾಂಧೀಜಿ ಅವರ ತತ್ವಗಳನ್ನು ಒಪ್ಪಿಕೊಳ್ಳುತ್ತಿದೆ. ಅಲ್ಲದೇ ಪ್ರಸ್ತುತ ಭಾರತಕ್ಕೆ ಈ ತತ್ವಗಳು ಅವಶ್ಯಕವಾಗಿದ್ದು, ಜಗತ್ತಿನಲ್ಲಿರುವ ಅನೇಕ ತೊಂದರೆಗಳನ್ನು ಹಿಂಸಾಚಾರದ ಮೂಲಕ ಬಗೆಹರಿಸಲು ಸಾಧ್ಯವಾಗಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತಿದೆ. ಶಾಂತಿ ಮತ್ತು ಸಾಮರಸ್ಯದ ಹುಡುಕಾಟದಲ್ಲಿ ಗೊಂದಲಕ್ಕೊಳಗಾದ ಜಗತ್ತಿಗೆ ಹೆಚ್ಚು ಉಲ್ಲೇಖಿಸಿದ ಪಾಥ್‌ಫೈಂಡರ್​ ಗಾಂಧೀಜಿ.

ABOUT THE AUTHOR

...view details