ತಮಿಳುನಾಡು: ಇಲ್ಲಿನ ಕಂಬಂನಲ್ಲಿ ವಕೀಲರನ್ನು ಅಮಾನುಷವಾಗಿ ಹತ್ಯೆ ಮಾಡಲಾಗಿದೆ.
ವಕೀಲನ ಮೇಲೆ ಗುಂಡಿನ ದಾಳಿ: ಭೀಕರ ಹತ್ಯೆ..!
ತಮಿಳುನಾಡಿನ ಕಂಬಂನಲ್ಲಿ ವಕೀಲನನ್ನು ಅಡ್ಡಗಟ್ಟಿರುವ ದುಷ್ಕರ್ಮಿಗಳು ಗುಂಡಿನ ಮಳೆಗೆರೆದು ಅಮಾನುಷವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಉತ್ತಮಾ ಪಾಲ್ಯಂನ ವಕೀಲ ರಂಜಿತ್ (42) ಮೃತಪಟ್ಟವರಾಗಿದ್ದು, ರಂಜಿತ್ ನ್ಯಾಯಾಲಯದಿಂದ ಮನೆಗೆ ಬೈಕ್ನಲ್ಲಿ ತೆರಳುತ್ತಿದ್ದಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಮೊದಲು ಕಾರಿನಲ್ಲಿ ಬಂದು ವಕೀಲರ ಬೈಕ್‌ಗೆ ಢಿಕ್ಕಿ ಹೊಡೆದಿದ್ದು, ಅಮಾನುಷವಾಗಿ ಹತ್ಯೆ ಮಾಡಿದ್ದಾರೆ. ಈ ಘಟನೆಯು ಕೊಟ್ಟಾರಕಾರ - ದಿಂಡುಂಕಲ್ ಹೆದ್ದಾರಿಯ ಕಂಬಂ ಬಳಿ ಸಂಭವಿಸಿದೆ. ಇನ್ನು ಹಲವು ಬಾರಿ ಗುಂಡು ಹಾರಿಸಿದ್ದರಿಂದ ವಕೀಲ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಫೋನ್ ಕರೆಗಳ ಮೂಲಕ ಯಾರೋ ಬೆದರಿಕೆ ಹಾಕಿದ್ದಾರೆ ಎಂದು ವಕೀಲರು ಈ ಹಿಂದೆ ಪೊಲೀಸರಿಗೆ ದೂರು ನೀಡಿದ್ದರು ಎಂದು ತಿಳಿದು ಬಂದಿದೆ. ಇನ್ನು ಸ್ಥಳಕ್ಕೆ ಟೆನಿ ಎಸ್‌ಐ ಭೇಟಿ ನೀಡಿದ್ದು, ತನಿಖೆಗಾಗಿ ಸದಸ್ಯರ ತಂಡವನ್ನು ನಿಯೋಜಿಸಲಾಗಿದೆ. ಇನ್ನು ತನಿಖೆಗಾಗಿ ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಪೋಲಿಸರು ಪರಿಶೀಲನೆ ನಡೆಸುತ್ತಿದ್ದಾರೆ.