ಮುಂಬೈ: ಖ್ಯಾತ ಗಾಯಕಿ ಪದ್ಮಭೂಷಣ ಲತಾ ಮಂಗೇಶ್ಕರ್ ಅವರಿಗೆ ಪ್ರತಿಷ್ಠಿತ 'ಡಾಟರ್ ಆಫ್ ದಿ ನೇಷನ್' ಪ್ರಶಸ್ತಿ ಲಭಿಸಿದೆ. ಸೆ. 28ರ ಅವರ 90ನೇ ಹುಟ್ಟುಹಬ್ಬದಂದು ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ಲತಾ ಮಂಗೇಶ್ಕರ್ ಅವರಿಗೆ ಪ್ರತಿಷ್ಠಿತ 'ಡಾಟರ್ ಆಫ್ ದಿ ನೇಷನ್' ಪ್ರಶಸ್ತಿ
ಖ್ಯಾತ ಗಾಯಕಿ ಪದ್ಮಭೂಷಣ ಲತಾ ಮಂಗೇಶ್ಕರ್ ಅವರಿಗೆ ಪ್ರತಿಷ್ಠಿತ 'ಡಾಟರ್ ಆಫ್ ದಿ ನೇಷನ್' ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಲತಾ ಮಂಗೇಶ್ಕರ್
ಭಾರತೀಯ ಚಿತ್ರ ಸಂಗೀತಕ್ಕೆ ನೀಡಿರುವ ಕೊಡುಗೆಯನ್ನು ಗಮನಿಸಿ ಕಳೆದ 7 ದಶಕಗಳಿಂದ ಹಿನ್ನೆಲೆ ಗಾಯಕರಿಗೆ 'ಡಾಟರ್ ಆಫ್ ದಿ ನೇಷನ್' ಪ್ರಶಸ್ತಿಯನ್ನು ನೀಡುತ್ತ ಬರಲಾಗುತ್ತಿದೆ. ಪ್ರಶಸ್ತಿ ಪ್ರದಾನ ಸಮಾರಂಭಕ್ಕೋಸ್ಕರ ಖ್ಯಾತ ಏಸ್ ಗೀತರಚನೆಕಾರ, ಕವಿ ಪ್ರಸೂನ್ ಜೋಶಿ ವಿಶೇಷ ಹಾಡೊಂದನ್ನು ರಚಿಸಿದ್ದಾರೆ.
ಲತಾ ಮಂಗೇಶ್ಕರ್ ಅವರ 90ನೇ ಹುಟ್ಟುಹಬ್ಬದಂದು ಪ್ರಧಾನಿ ನರೇಂದ್ರ ಮೋದಿಯವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಲತಾ ಮಂಗೇಶ್ಕರ್ 30ಕ್ಕೂ ಅಧಿಕ ಪ್ರಾದೇಶಿಕ ಭಾಷೆಗಳು, ವಿದೇಶಿ ಭಾಷೆಗಳೂ ಸೇರಿಂದತೆ ಸಾವಿರಾರು ಹಾಡುಗಳಿಗೆ ಕೂಡ ಧ್ವನಿ ನೀಡಿದ್ದಾರೆ.