ಕೊಚ್ಚಿ(ಕೇರಳ):ಲಾಕ್ಡೌನ್ ಆದೇಶ ಘೋಷಣೆಯಾದಾಗಿನಿಂದ ದೇಶದ ರೈತರು ಸಂಕಷ್ಟಕ್ಕೊಳಗಾಗಿದ್ದು, ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆ ಸಾಗಿಸಿ ಮಾರಾಟ ಮಾಡಲು ಸಾಧ್ಯವಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ.
ಅನ್ನದಾತನ ಅನ್ನಕ್ಕೆ ಕನ್ನ ಹಾಕಿದ ಕೊರೊನಾ: ಕೈಗೆ ಬಂದ ಬೆಳೆ ತಲುಪುತ್ತಿಲ್ಲ ಮಾರುಕಟ್ಟೆ - ಅನ್ನದಾತರು
ಕೊರೊನಾ ವೈರಸ್ ಭೀತಿಯಲ್ಲಿ 21 ದಿನಗಳ ಕಾಲ ಭಾರತ ಲಾಕ್ಡೌನ್ ಆಗಿದೆ. ಇದರಿಂದ ತಾವು ಬೆಳೆದ ಫಸಲನ್ನು ಮಾರಾಟ ಮಾಡಲಾಗದೆ ರೈತರು ತೀವ್ರ ತೊಂದರೆಗೆ ಸಿಲುಕಿದ್ದಾರೆ.
Kerala: Strawberry & carrot growers face problems
ಕೋವಿಡ್-19 ಭೀತಿಯಲ್ಲಿ ದೇಶದ ಎಲ್ಲಾ ಮಾರುಕಟ್ಟೆಗಳು ಬಂದ್ ಆಗಿವೆ. ರೈತರು ಬೆಳೆದಿರುವ ವಿವಿಧ ಬೆಳೆ ತೆಗೆದುಕೊಂಡು ಹೋಗಿ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರು ಬೆಳೆದ ಫಸಲು ಜಮೀನಿನಲ್ಲೇ ಕೊಳೆಯುತ್ತಿದೆ. ಇಡುಕ್ಕಿಯ ಮುನ್ನಾರ್ ಪ್ರದೇಶದಲ್ಲಿ ರೈತರು ಬೆಳೆದಿರುವ ಸ್ಟ್ರಾಬೆರಿ, ಕ್ಯಾರೆಟ್ ಸೇರಿದಂತೆ ಹತ್ತಾರು ಬೆಳೆಗಳು ಕಟಾವಿಗೆ ಬಂದಿವೆ. ಆದ್ರೆ, ಕಟಾವಿಗೆ ಜನರೂ ಸಿಗುತ್ತಿಲ್ಲ, ಮಾರುಕಟ್ಟೆಯೂ ಲಭ್ಯವಿಲ್ಲ. ಹೀಗಾಗಿ ರೈತರು ತಲೆಮೇಲೆ ಕೈ ಹೊತ್ತು ಕುಳಿತುಕೊಳ್ಳುವುದಲ್ಲದೆ ಸದ್ಯಕ್ಕೆ ಬೇರೇನೂ ಮಾಡಲಾಗದ ಪರಿಸ್ಥಿತಿಯಲ್ಲಿದ್ದಾರೆ.
Last Updated : Apr 2, 2020, 10:50 AM IST