ನವದೆಹಲಿ: ಕೊರೊನಾ ವೈರಸ್ ಭಾರತದಾದ್ಯಂತ ಭೀತಿ ಹುಟ್ಟುಹಾಕಿದೆ. ದೇಶದೆಲ್ಲೆಡೆ ಲಾಕ್ಡೌನ್ ಜಾರಿ ಮಾಡಲಾಗಿದ್ದು, ವೈರಸ್ ಹರಡುವಿಕೆಯನ್ನು ತಕ್ಕ ಮಟ್ಟಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದೇವೆ. ಈ ನಡುವೆ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ತಾಯ್ನಾಡಿಗೆ ಕರೆಸಿಕೊಳ್ಳಲು ಕೇಂದ್ರ ಸರ್ಕಾರ ವಿಶೇಷ ತಂಡ ರಚಿಸಬೇಕು ಎಂದು ಸುಪ್ರೀಂಕೋರ್ಟ್ನ ಮೊರೆ ಹೋಗಲಾಗಿದೆ.
ಕೇರಳದ ಕೋಯಿಕ್ಕೋಡ್ನ ಕಾಂಗ್ರೆಸ್ ಶಾಸಕ ಎಂ,ಕೆ ರಾಘವನ್ ಸುಪ್ರೀಂಕೋರ್ಟ್ಗೆ ಮನವಿ ಮಾಡಿದ್ದಾರೆ. ವಿದೇಶಗಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ವಾಪಾಸು ಕರೆಸಿಕೊಳ್ಳಲು ಅನೂಕೂಲವಾಗುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕು. ಸೌದಿ ಅರೇಬಿಯಾ, ಓಮನ್, ಕತಾರ್ನಿಂದ ವಾಪಾಸಾಗಲು ಸಾಧ್ಯವಾಗದೇ ಇರುವ ನಾಗರಿಕರನ್ನು ಸ್ಥಳಾಂತರಿಸಬೇಕಿದೆ ಎಂದಿದ್ದಾರೆ.