ಕರ್ನಾಟಕ

karnataka

ETV Bharat / bharat

ದೇವರ ನಾಡಲ್ಲಿ 40 ಡಿಗ್ರಿ ದಾಟಿದ ಉಷ್ಣಾಂಶ... ಬಿಸಿಲಿನ ಹೊಡೆತಕ್ಕೆ ಮೂವರು ಬಲಿ

ತಾಪಮಾನ ಗುರುವಾರದ ವೇಳೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕೇರಳ ರಾಜ್ಯ ವಿಪತ್ತು ನಿರ್ವಹಣಾ ತಂಡ ಎಚ್ಚರಿಕೆ ನೀಡಿದೆ.

ತಾಪಮಾನ

By

Published : Mar 26, 2019, 5:34 PM IST

ತಿರುವನಂತಪುರಂ: ದೇಶಾದ್ಯಂತ ಚುನಾವಣೆಯ ಬಿಸಿ ಏರುತ್ತಿದ್ದರೆ ಇತ್ತ ದೇವರ ಸ್ವಂತ ನಾಡು ಎಂದೇ ಕರೆಸಿಕೊಳ್ಳುವ ಕೇರಳದಲ್ಲಿ ತಾಪಮಾನ ಜನತೆಯನ್ನು ಕಂಗೆಡಿಸಿದೆ.

ಕೇರಳದ ಪಾಲಕ್ಕಾಡ್​ನಲ್ಲಿ ಉಷ್ಣಾಂಶ 40 ಡಿಗ್ರಿ ತಲುಪಿದೆ. ಆಲಪ್ಪುಳ ಹಾಗೂ ಪಟ್ಟನಂತಿಟ್ಟಗಳಲ್ಲಿ ಸಹ ಉಷ್ಣಾಂಶ 40ರ ಆಸುಪಾಸಿನಲ್ಲಿದೆ. ಬಿಸಿಲಿನ ಹೊಡೆತಕ್ಕೆ ಈಗಾಗಲೇ ಮೂವರು ಮೃತಪಟ್ಟಿದ್ದಾರೆ.

ತಾಪಮಾನ ಗುರುವಾರದ ವೇಳೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕೇರಳ ರಾಜ್ಯ ವಿಪತ್ತು ನಿರ್ವಹಣಾ ತಂಡ ಎಚ್ಚರಿಕೆ ನೀಡಿದೆ.

ಕೇರಳದ ಪ್ರಮುಖ ನಗರಗಳಾದ ತಿರುವನಂತಪುರಂ, ಕೊಲ್ಲಂ, ಎರ್ನಾಕುಲಂ, ತ್ರಿಶ್ಯೂರ್​ ಹಾಗೂ ಮಲಪ್ಪುರಂಗಳಲ್ಲಿ ತಾಪಮಾನ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ತಾಪಮಾನ ದಿಢೀರ್ ಏರಿಕೆಯಾದ ಹಿನ್ನೆಲೆಯಲ್ಲಿ ಜನರು ಒಂದಷ್ಟು ಕ್ರಮಗಳನ್ನು ಅನುಸರಿಸಲು ಸೂಚನೆ ನೀಡಲಾಗಿದೆ. ಬಿಸಿಲಿನ ತಾಪ ಹೆಚ್ಚಾದ ಬಳಿಕ ಓಡಾಟವನ್ನು ಕಡಿಮೆ ಮಾಡುವಂತೆ ಹವಾಮಾನ ಇಲಾಖೆ ಸೂಚಿಸಿದೆ. 2018 ಕೇರಳಕ್ಕೆ ದುಸ್ವಪ್ನವಾಗಿದ್ದ ಮಹಾ ಮಳೆ ಕೇರಳವನ್ನ ಅಕ್ಷರಶಃ ಸರ್ವನಾಶ ಮಾಡಿತ್ತು. ಈಗ ಬೇಸಿಗೆ ಸಹ ದೇವರ ನಾಡಿನ ಜನರನ್ನ ಸಂಕಷ್ಟಕ್ಕೆ ದೂಡಿದೆ.


ABOUT THE AUTHOR

...view details