ಕರ್ನಾಟಕ

karnataka

ETV Bharat / bharat

ಕೇಜ್ರಿವಾಲ್​ ಸುತ್ತೋಲೆ ನೀಡಿದ್ರೆ, ಶಾ ಸ್ಥಳಕ್ಕೆ ಭೇಟಿ ನೀಡಿ ಅವಲೋಕಿಸುತ್ತಾರೆ.. ಬಿಜೆಪಿ 'ಟ್ವೀಕೆ'! - ಅರವಿಂದ್ ಕೇಜ್ರಿವಾಲ್ ಸುದ್ದಿ

ಆಪ್​ ಸರ್ಕಾರವು ಆಸ್ಪತ್ರೆಗಳೊಂದಿಗೆ ಸುತ್ತೋಲೆಗಳ ಮೂಲಕ ಸಂವಹನ ನಡೆಸಲು ಆದ್ಯತೆ ನೀಡಿತು. ಆದರೆ ಗೃಹ ಸಚಿವ ಅಮಿತ್ ಶಾ ಅವರು ಸ್ಥಳದಲ್ಲೇ ಇದ್ದು, ಕೊರೊನಾ ಪರಿಸ್ಥಿತಿ ಎದುರಿಸಲು ಮುಂದಾಗಿದ್ದಾರೆ. ದೆಹಲಿಯ ಲೋಕ ನಾಯಕ ಜೈ ಪ್ರಕಾಶ್ (ಎಲ್‌ಎನ್‌ಜೆಪಿ) ಆಸ್ಪತ್ರೆಗೆ ಶಾ ಭೇಟಿ ನೀಡಿ, ಸಿಬ್ಬಂದಿ ಜೊತೆ ಸಂವಹನ ನಡೆಸಿದ ನಂತರ ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್​-19 ಪ್ರಕರಣಗಳಲ್ಲಿ ಭಾರಿ ಏರಿಕೆಯಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್​.ಸಂತೋಷ್ ಹೇಳಿದರು.

ಕೇಜ್ರಿವಾಲ್
ಕೇಜ್ರಿವಾಲ್

By

Published : Jun 16, 2020, 8:12 PM IST

ನವದೆಹಲಿ: ಅರವಿಂದ್ ಕೇಜ್ರಿವಾಲ್ ಆಸ್ಪತ್ರೆಗಳಿಗೆ ನೋಟಿಸ್ ಜಾರಿಗೊಳಿಸಿದರು. ಕೊರೊನಾ ಸಂಖ್ಯೆಗಳೊಂದಿಗೆ ಆಟವಾಡಿದರು, ಸೌಲಭ್ಯಗಳನ್ನು ಹೆಚ್ಚಿಸುವಲ್ಲಿ ವಿಫಲರಾಗಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಸಂವಹನ ನಡೆಸಲು ವಿಫಲರಾಗಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಮಿತ್ ಶಾ ಮೂಲಕ ಮಧ್ಯಪ್ರವೇಶಿಸಿದಾಗ ಜನರು ಬದಲಾವಣೆ ಕಂಡರು. ಇದಕ್ಕೆ ಶಕ್ತಿ ಬೇಕು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಆಕ್ರೋಶ ಹೊರಹಾಕಿದ್ದಾರೆ.

ಆಪ್​ ಸರ್ಕಾರವು ಆಸ್ಪತ್ರೆಗಳೊಂದಿಗೆ ಸುತ್ತೋಲೆಗಳ ಮೂಲಕ ಆಸ್ಪತ್ರೆಗಳೊಂದಿಗೆ ಸಂವಹನ ನಡೆಸಲು ಆದ್ಯತೆ ನೀಡಿತು. ಆದರೆ, ಗೃಹ ಸಚಿವ ಅಮಿತ್ ಶಾ ಅವರು ಸ್ಥಳದಲ್ಲೇ ಇದ್ದು, ಕೊರೊನಾ ಪರಿಸ್ಥಿತಿ ಎದುರಿಸಲು ಮುಂದಾಗಿದ್ದಾರೆ. ದೆಹಲಿಯ ಲೋಕ ನಾಯಕ ಜೈಪ್ರಕಾಶ್ (ಎಲ್‌ಎನ್‌ಜೆಪಿ) ಆಸ್ಪತ್ರೆಗೆ ಶಾ ಭೇಟಿ ನೀಡಿ, ಸಿಬ್ಬಂದಿ ಜೊತೆ ಸಂವಹನ ನಡೆಸಿದ ನಂತರ ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್​-19 ಪ್ರಕರಣಗಳಲ್ಲಿ ಭಾರಿ ಏರಿಕೆಯಾಗಿದೆ ಎಂದು ಹೇಳಿದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್​, ಪ್ರಜಾಪ್ರಭುತ್ವದಲ್ಲಿ ಸಂವಾದವು ಮೊದಲ ಅಂಶ. ಆದರೆ, ಅರವಿಂದ್ ಕೇಜ್ರಿವಾಲ್ ಮತ್ತು ಅವರ ಪಕ್ಷ ಜನರು, ಅಧಿಕಾರಿಗಳು, ಪೊಲೀಸ್, ಆಸ್ಪತ್ರೆಗಳು, ವೈದ್ಯರು, ನೆರೆಯ ರಾಜ್ಯ, ಕೇಂದ್ರ ಸರ್ಕಾರದೊಂದಿಗೆ 'ಮಾಧ್ಯಮ ಮತ್ತು ಸುತ್ತೋಲೆಗಳ ಮೂಲಕ ಮಾತನಾಡಲು ಬಯಸುತ್ತಾರೆ ಎಂದು ಟ್ವೀಟ್​ ಮಾಡಿದ್ದಾರೆ.

ಗೃಹ ಸಚಿವ ಅಮಿತ್ ಶಾ ದೆಹಲಿಯ ಎಲ್ಎನ್​ಜೆಪಿ ಆಸ್ಪತ್ರೆಗೆ ಭೇಟಿ ನೀಡಿ, ಕಾರ್ಯವೈಖರಿ ಮತ್ತು ಸನ್ನದ್ಧತೆಯನ್ನು ಪರಿಶೀಲಿಸಿದರು. ಆದರೆ, ಇಲ್ಲಿಯವರೆಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಆಸ್ಪತ್ರೆಗಳಿಗೆ ಭೇಟಿ ನೀಡಲು ಸಮಯ ಸಿಗಲಿಲ್ಲ. ಅರಾಜಕತಾವಾದಿಗಳಿಗೆ ಆಡಳಿತವು ಎಂದಿಗೂ ಆದ್ಯತೆಯಾಗಿಲ್ಲ ಎಂದು ಕಿಡಿಕಾರಿದ್ದಾರೆ.

ಭಾನುವಾರದಿಂದ ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್-19 ಸಂಖ್ಯೆಯನ್ನು ನಿಯಂತ್ರಿಸಲು ಶಾ ಅವರು ಜವಾಬ್ದಾರಿ ವಹಿಸಿಕೊಂಡರು. ನಂತರ ಪರೀಕ್ಷೆಗಳನ್ನು ಹೆಚ್ಚಿಸಲು ನಿರ್ದಿಷ್ಟ ಆದೇಶಗಳನ್ನು ನೀಡಿದರು ಮತ್ತು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ದೆಹಲಿಗೆ ಸಹಾಯ ಮಾಡಲು ಆರು ಐಎಎಸ್ ಅಧಿಕಾರಿಗಳನ್ನು ನೇಮಿಸಿದರು.

ABOUT THE AUTHOR

...view details