ಶಿಮ್ಲಾ(ಹಿಮಾಚಲ ಪ್ರದೇಶ): ನೀವು ಎಂದಾದರೂ ಸೈಬರ್ ಅಪರಾಧಿಗಳ ವಕ್ರದೃಷ್ಠಿಗೆ ಗುರಿಯಾಗಿದ್ದೀರಾ?, ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಸೈಬರ್ ಕಳ್ಳರ ಕುಕೃತ್ಯದಿಂದ ಕಳೆದುಕೊಂಡಿದ್ದೀರಾ?, ಇಲ್ಲದಿದ್ದರೆ ಅವರ ಮುಂದಿನ ಟಾರ್ಗೆಟ್ ನೀವಾಗಿರಬಹುದು, ಹುಷಾರಾಗಿರಿ..
ಹೌದು, ಟೆಕ್ನಾಲಜಿ ಮುಂದುವರಿದಂತೆ ಸೈಬರ್ ಅಪರಾಧ ಕೃತ್ಯಗಳೂ ಹೆಚ್ಚಾಗುತ್ತಲೇ ಇವೆ. ಯಾಕೆ ಈ ವಿಷಯ ಅಂದ್ರೆ, ಈ ಸುದ್ದಿಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಇದೇ ಮಾಯಾಜಾಲಕ್ಕೆ ಸಿಲುಕಿ ಯಾವ ಪಾಡು ಪಟ್ಟರು? ಹೇಗೆ ಆ ಜಾಲವನ್ನು ಜಾಲಾಡಿಸಿದರು? ಎಂಬುದನ್ನು ವಿವರಿಸುತ್ತೇವೆ.
ಇತ್ತೀಚೆಗೆ, ಶಿಮ್ಲಾದ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ಅನಾಮಧೇಯ ಕರೆಯೊಂದನ್ನು ಸ್ವೀಕರಿಸಿದ್ದರು. ಕರೆ ಮಾಡಿದಾತ ತನ್ನನ್ನು ಬ್ಯಾಂಕ್ ಉದ್ಯೋಗಿ ಎಂದು ಹೇಳಿ, ಕೆಲವು ಸಮಸ್ಯೆಗಳಿಂದಾಗಿ ನಿಮ್ಮ ಎಟಿಎಂ ಕಾರ್ಡ್ ಅನ್ನು ಬ್ಲಾಕ್ ಮಾಡಲಾಗಿದೆ. ಅದನ್ನು ರಿ-ಆ್ಯಕ್ಟಿವೇಟ್ ಮಾಡಲು ತಮ್ಮ ಬ್ಯಾಂಕ್ ಖಾತೆ ವಿವರಗಳನ್ನು ಹಂಚಿಕೊಳ್ಳಬೇಕಾಗುತ್ತದೆ ಎಂದಿದ್ದಾನೆ.
ಆದ್ರೆ ಅವನ ಗೇಮ್‌ಪ್ಲಾನ್ ಅರ್ಥಮಾಡಿಕೊಂಡ ಪೊಲೀಸ್ ಅಧಿಕಾರಿ ಅವನಿಗೆ ತಪ್ಪಾದ ವಿವರಗಳನ್ನು ಕೊಟ್ಟರು. ಆ ಬಳಿಕ ಆತ ಆಕೆಗೆ ಪದೇ ಪದೆ ಕರೆ ಮಾಡುತ್ತಿದ್ದರೂ ಆಕೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ನಂತರದಲ್ಲಿ ಕರೆ ಸ್ವೀಕರಿಸಿದಾಗ ಆತ ಆಕೆಗೆ ಫೋನ್‌ನಲ್ಲಿ ಅವಾಚ್ಯವಾಗಿ ನಿಂದಿಸಲು ಪ್ರಾರಂಭಿಸಿದನು. ಈ ವಿಷಯವನ್ನು ಅಧಿಕಾರಿ ಪೊಲೀಸರಿಗೆ ತಿಳಿಸಿದ್ದು, ಬಳಿಕ ಆತನನ್ನು ಬಂಧಿಸಲಾಯಿತು.
ಓದಿ: ಎಟಿಎಂ ಮಷಿನ್ಗಳಿಂದ ಹಣ ಎಗರಿಸಲು ಗೂಗಲ್ ಮೊರೆ: ಖತರ್ನಾಕ್ ವಿದೇಶಿ ವಿದ್ಯಾರ್ಥಿಗಳ ಜಾಲ ಪತ್ತೆ
ಇದೇ ರೀತಿ ಸಾಮಾನ್ಯ ಜನರಿಗೆ ತೊಂದರೆ ಆದರೆ ಅವರೂ ಯಾವುದೇ ರೀತಿಯಲ್ಲಿ ಭಯಪಡದೆ ಪರಿಸ್ಥಿತಿಯನ್ನು ಅರಿತುಕೊಳ್ಳಬೇಕು. ಈ ಸಮಯದಲ್ಲಿ ಜಾಗರೂಕರಾಗಿ ಸಂದರ್ಭವನ್ನು ನಿಭಾಯಿಸಬೇಕು.
ಏನು ಮಾಡಬಾರದು, ಏನು ಮಾಡಬೇಕು ?
ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ಯಾವುದೇ ಪರಿಸ್ಥಿತಿಯಲ್ಲಿ ಯಾರೊಂದಿಗೂ ಹಂಚಿಕೊಳ್ಳಬಾರದು. ಸೈಬರ್ ಸೆಕ್ಯುರಿಟಿ ತಜ್ಞರ ಪ್ರಕಾರ, ಅಪರಾಧಿಗಳು ಮೊದಲು ನಿಮ್ಮ ವಿವರಗಳನ್ನು ಕೇಳಿ ಮೋಸಗೊಳಿಸಲು ಪ್ರಯತ್ನಿಸುವುದರಿಂದ ಎಚ್ಚರಿಕೆಯಿಂದಿರಬೇಕು. ಬ್ಯಾಂಕ್ನ ಯಾವುದೇ ಸಮಸ್ಯೆ ಇದ್ದರೂ ಯಾವುದೇ ಬ್ಯಾಂಕ್ ನಿಮ್ಮ ವಿವರಗಳನ್ನು ಕೇಳುವುದಿಲ್ಲ.
ಯಾರಾದರೂ ನಿಮ್ಮ ಬ್ಯಾಂಕ್ ಖಾತೆಯನ್ನು ಗುರಿಯಾಗಿಸಿಕೊಂಡರೆ, ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುವ ಮೂಲಕ ನಿಮ್ಮ ಎಟಿಎಂ ಅನ್ನು ಮೊದಲು ನಿರ್ಬಂಧಿಸಿ. ಒಂದು ವೇಳೆ ಎಟಿಎಂ ಕಾರ್ಡ್ ಕಾರ್ಯನಿರ್ವಹಿಸದಿದ್ದರೆ, ಒಬ್ಬರು ಬ್ಯಾಂಕಿಗೆ ಹೋಗಿ ಅದನ್ನು ಸಕ್ರಿಯಗೊಳಿಸಬೇಕು. ನೀವು ಎಚ್ಚರಿಕೆ ವಹಿಸಿಕೊಳ್ಳುವ ಮೂಲಕ ನಿಮ್ಮ ಬ್ಯಾಂಕ್ ಖಾತೆಯನ್ನು ಸುರಕ್ಷಿತವಾಗಿರಿಸಿಕೊಳ್ಳಬಹುದು.
ಓದಿ:ಎಟಿಎಂ ಬಳಕೆ ವೇಳೆ ಎಚ್ಚರ ತಪ್ಪಿದರೆ ಅನಾಹುತ ಗ್ಯಾರಂಟಿ! ಏಕೆ ಗೊತ್ತೇ?
ಇಂತಹ ಸೈಬರ್ ಮೋಸಗಾರರು ಯಾವಾಗಲೂ ಅಂತರ್ಜಾಲದಲ್ಲಿ ಸಕ್ರಿಯರಾಗಿರುವುದರಿಂದ ಬ್ಯಾಂಕಿನ ಟೋಲ್-ಫ್ರೀ ಸಂಪರ್ಕ ಸಂಖ್ಯೆಗಳನ್ನು ಯಾವತ್ತಿಗೂ ಸಂಪರ್ಕಿಸಬೇಡಿ. ಒಂದು ಸಣ್ಣ ತಪ್ಪು ನಿಮ್ಮನ್ನು ದೊಡ್ಡ ತೊಂದರೆಗೆ ಸಿಲುಕಿಸಬಹುದು. ಆದ್ದರಿಂದ, ನಿಮ್ಮ ಒಟಿಪಿ, ಸಿವಿವಿ ಮತ್ತು ಎಸ್‌ಟಿಎಂ ಪಿನ್‌ಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಅಲ್ಲದೆ, ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವಾಗ ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಪಾವತಿಸುವಾಗ ಜಾಗರೂಕರಾಗಿರಿ ಎಂದು ಸೈಬರ್ ತಜ್ಞರು ಮಾಹಿತಿ ನೀಡಿದ್ದಾರೆ.