ಕರ್ನಾಟಕ

karnataka

ETV Bharat / bharat

ಲಂಡನ್​ನ ಭಾರತೀಯ ರಾಯಭಾರ ಕಚೇರಿ ಎದುರು ಕಾಶ್ಮೀರಿಗಳ ಪ್ರತಿಭಟನೆ: ಮೋದಿ ವಿರುದ್ಧ ಘೋಷಣೆ

ಜಮ್ಮು, ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಬಿಜೆಪಿ ಸರ್ಕಾರ ರದ್ದುಗೊಳಿಸಿದ್ದನ್ನು ವಿರೋಧಿಸಿ ಲಂಡನ್​ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಎದುರು ಪ್ರತಿಭಟನೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಕಾಶ್ಮೀರಿಗಳು.

370 ವಿಧಿ ರದ್ದತಿ ಖಂಡಿಸಿ ಪ್ರತಿಭಟನೆ

By

Published : Aug 15, 2019, 11:20 PM IST

ಲಂಡನ್​: ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ವಿಧಿ 370 ಹಾಗೂ 35ಎ ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಡೆ ಖಂಡಿಸಿ, ಲಂಡನ್​ನ ಭಾರತೀಯ ರಾಯಭಾರ ಕಚೇರಿಯ ಎದುರು ಕಾಶ್ಮೀರಿಗಳು ಪ್ರತಿಭಟನೆ ನಡೆಸಿದ್ದಾರೆ.

370 ವಿಧಿ ರದ್ದತಿ ಖಂಡಿಸಿ ಪ್ರತಿಭಟನೆ

ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿ, ವಿಧಿ ರದ್ದತಿಯನ್ನು ಖಂಡಿಸಿದ್ದರೆ. ಮೋದಿ ಅವರನ್ನು ಹಿಟ್ಲರ್​ಗೆ ಹೋಲಿಸಿ ಪ್ರತಿಭಟನೆ ನಡೆಸಿರುವ ಆಕ್ರೋಶಿತರು ಭಾರತವು ನಾಜಿ ಸಿದ್ಧಾಂತ ಪ್ರತಿಪಾದಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಈ ವೇಳೆ ಲಂಡನ್​ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೆಲವರನ್ನು ಬಂಧಿಸಲಾಗಿದೆ.

ಪ್ರತಿಭಟನಾನಿರತರು ಕಾಶ್ಮೀರ ಪ್ರತ್ಯೇಕ ಧ್ವಜ, ಪಾಕ್​ ಧ್ವಜಗಳನ್ನು ಹಾರಿಸಿ ಆಕ್ರೋಶ ವ್ಯಕ್ತಪಡಿಸಿದರು. ಮೋದಿ ಅವರನ್ನು ಟೀಕಿಸುವ ಪೋಸ್ಟರ್​ಗಳು, ಕಾರ್ಟೂನ್​ಗಳು ಪ್ರತಿಭಟನೆ ವೇಳೆ ರಾರಾಜಿಸಿದವು.

ABOUT THE AUTHOR

...view details