ನವದೆಹಲಿ:ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳಿಗೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370 ವಿಧಿಯನ್ನು ಕೇಂದ್ರ ಸರ್ಕಾರ ರದ್ವದು ಮಾಡುವ ಮೂಲಕ ಚುನಾವಣಾ ಪ್ರಣಾಳಿಕೆಯ ಭರವಸೆ ಈಡೇರಿಸಿದೆ.
ಐತಿಹಾಸಿಕ ಘೋಷಣೆ... ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಗೆ ಕಣಿವೆ ರಾಜ್ಯ!
ಗೃಹ ಸಚಿವ ಅಮಿತ್ ಶಾ ಘೋಷಣೆ ಪ್ರಸ್ತಾಪ ಮಾಡಿರುವ 370 ವಿಧಿ ರದ್ಧತಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಈ ಪ್ರಸ್ತಾವಕ್ಕೆ ಸಹಿ ಹಾಕಿದ್ದು, ತಕ್ಷಣದಿಂದಲೇ ರಾಷ್ಟ್ರಪತಿಗಳ ಆದೇಶ ಜಾರಿಗೆ ಬಂದಿದೆ.
ಕಣಿವೆ ರಾಜ್ಯ
ಹಲವು ದಶಕಗಳಿಂದ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸೌಲಭ್ಯವನ್ನು ರದ್ದು ಮಾಡುವ ಮಹತ್ವದ ತೀರ್ಮಾನಕ್ಕೆ ಕೇಂದ್ರ ಬಂದಿದ್ದು, ಕಣಿವೆ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಣೆ ಮಾಡಿದೆ.
ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಲಿವೆ. ಆದರೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಹೊಂದಿರಲಿದ್ದು, ಲಡಾಖ್ಗೆ ವಿಧಾನಸಭೆ ಇರುವುದಿಲ್ಲ.
ಅಮಿತ್ ಶಾ ಘೋಷಣೆ ಪ್ರಸ್ತಾಪ ಮಾಡಿರುವ 370 ವಿಧಿ ರದ್ಧತಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕೆಲ ಹೊತ್ತಿನಲ್ಲೇ ಅಂಕಿತ ಹಾಕಿದ್ದಾರೆ.
Last Updated : Aug 5, 2019, 1:15 PM IST