ನವದೆಹಲಿ:ಜಮ್ಮುವಿನ ಒಂದು ಜಿಲ್ಲೆ ಮತ್ತು ಕಾಶ್ಮೀರದ ಒಂದು ಜಿಲ್ಲೆಯಲ್ಲಿ 4ಜಿ ಇಂಟರ್ನೆಟ್ ಪ್ರಾಯೋಗಿಕ ಆಧಾರದ ಮೇಲೆ ಅನುಮತಿಸಲು ಸಮಿತಿಯೊಂದನ್ನು ರಚಿಸಲು ಯೋಜಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.
ಕಾಶ್ಮೀರದಲ್ಲಿ 4ಜಿ ಇಂಟರ್ನೆಟ್ ಮರುಸ್ಥಾಪನೆ ವಿಚಾರ: ಸುಪ್ರೀಂಗೆ ಅಫಿಡವಿಟ್ ಸಲ್ಲಿಸಿದ ಕೇಂದ್ರ - ಸುಪ್ರೀಂ ಕೋರ್ಟ್
ಜಮ್ಮುವಿನ ಒಂದು ಜಿಲ್ಲೆ ಮತ್ತು ಕಾಶ್ಮೀರದ ಒಂದು ಜಿಲ್ಲೆಯಲ್ಲಿ 4ಜಿ ಇಂಟರ್ನೆಟ್ ಮರುಸ್ಥಾಪನೆ ಸಂಪರ್ಕ ವಿಷಯದಲ್ಲಿ ಹೆಚ್ಚುವರಿ ಅಫಿಡವಿಟ್ ಸಲ್ಲಿಸಲಾಗಿದೆ ಎಂದು ಭಾರತ ಸರ್ಕಾರವನ್ನು ಪ್ರತಿನಿಧಿಸುವ ಅಟಾರ್ನಿ ಜನರಲ್ (ಎಜಿ) ಕೆ.ಕೆ.ವೇಣುಗೋಪಾಲ್ ಸುಪ್ರೀಂಕೋರ್ಟ್‌ಗೆ ತಿಳಿಸಿದ್ದಾರೆ.
supreme
4ಜಿ ಇಂಟರ್ನೆಟ್ ಮರುಸ್ಥಾಪನೆ ಸಂಪರ್ಕ ವಿಷಯದಲ್ಲಿ ಹೆಚ್ಚುವರಿ ಅಫಿಡವಿಟ್ ಸಲ್ಲಿಸಲಾಗಿದೆ ಎಂದು ಭಾರತ ಸರ್ಕಾರವನ್ನು ಪ್ರತಿನಿಧಿಸುವ ಅಟಾರ್ನಿ ಜನರಲ್ (ಎಜಿ) ಕೆ.ಕೆ.ವೇಣುಗೋಪಾಲ್ ಅವರು ಇಂದು ಸುಪ್ರೀಂಕೋರ್ಟ್‌ಗೆ ತಿಳಿಸಿದ್ದಾರೆ.
ಈ ಹಿಂದೆ ಆಗಸ್ಟ್ 7ರಂದು ಸುಪ್ರೀಂಕೋರ್ಟ್, ಕೇಂದ್ರ ಮತ್ತು ಜಮ್ಮು ಮತ್ತು ಕಾಶ್ಮೀರ ಆಡಳಿತವನ್ನು ಕೇಳಿ, ಸಂಬಂಧಪಟ್ಟ ಅಧಿಕಾರಿಗಳು ಜಮ್ಮು ಕಾಶ್ಮೀರದ ಆಯ್ದ ಪ್ರದೇಶಗಳಲ್ಲಿ 4 ಜಿ ಸೇವೆಗಳನ್ನು ಮರುಸ್ಥಾಪಿಸುವ ಸಾಧ್ಯತೆಯ ಬಗ್ಗೆ ನಿರ್ದಿಷ್ಟ ನಿಲುವನ್ನು ತಾಳಬೇಕು ಎಂದು ಸುಪ್ರೀಂಕೋರ್ಟ್ ಹೇಳಿತ್ತು.