ಮುಂಬೈ:ಬಾಲಿವುಡ್ ನಟಿ ಕಂಗನಾ ರಣಾವತ್ ಹಾಗೂ ಮಹಾರಾಷ್ಟ್ರ ಆಡಳಿತರೂಢ ಸರ್ಕಾರದ ನಡುವೆ ವಾಕ್ಸಮರ ಮುಂದುವರೆದಿದೆ. ಮನಾಲಿಯಿಂದ ಮುಂಬೈ ಏರ್ಪೋರ್ಟ್ಗೆ ಆಗಮಿಸಿದ್ದ ನಟಿ ನೇರವಾಗಿ ತಮ್ಮ ನಿವಾಸಕ್ಕೆ ತೆರಳಿದ್ದರು. ನಿವಾಸಕ್ಕೆ ತೆರಳುತ್ತಿದ್ದಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ನಟಿ ವಾಗ್ದಾಳಿ ನಡೆಸಿದ್ದು, ಉದ್ಧವ್ ಠಾಕ್ರೆ, 'ತುಜೇ ಕ್ಯಾ ಲಗ್ತಾ ಹೈ' ಎಂದು ಪ್ರಶ್ನೆ ಮಾಡಿದ್ದಾರೆ. ಇದರ ಜತೆಗೆ ಮಹಾರಾಷ್ಟ್ರ ಸಿಎಂ ವಿರುದ್ಧ ಏಕವಚನದಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಲಿವುಡ್ ನಟಿ ಕಂಗನಾ ರಣಾವತ್ ಮಾತು ಇದನ್ನೂ ಓದಿ: ಬೆದರಿಕೆ ನಡುವೆಯೂ ಮುಂಬೈಗೆ ಬಂದ ನಟಿ ಕಂಗನಾ... ಭಾರೀ ಪೊಲೀಸ್ ಭದ್ರತೆ
ನೀವೂ ಫಿಲ್ಮ್ ಮಾಫಿಯಾದೊಂದಿಗೆ ಕೈಜೋಡಿಸಿದ್ದೀರಿ, ನನ್ನ ಮನೆಯನ್ನು ಕೆಡವಿ ನನ್ನ ಮೇಲೆ ಸೇಡು ತೀರಿಸಿಕೊಂಡಿದ್ದೀರಾ? ನನ್ನ ಮನೆ ಇಂದು ನೆಲಸಮವಾಯಿತು. ನಿಮ್ಮ ದುರಹಂಕಾರವು ನಾಳೆ ಕೊನೆಗೊಳ್ಳಲಿದೆ ಎಂದಿದ್ದಾರೆ.
ಇದು ಸಮಯದ ಚಕ್ರ, ನೆನಪಿಡಿ, ಅದು ಎಂದಿಗೂ ಒಂದೇ ಆಗಿರುವುದಿಲ್ಲ. ಎಂದು 33 ವರ್ಷದ ನಟಿ ಎಚ್ಚರಿಕೆ ನೀಡಿದ್ದಾರೆ. ಮುಂಬೈ ಮಹಾನಗರ ಪಾಲಿಕೆ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಕಂಗನಾ ಕಚೇರಿ ತೆರವಿಗೆ ಇಂದು ಅಧಿಕಾರಿಗಳು ಮುಂದಾಗಿದ್ದರು. ಇದು ಭಾರೀ ವಿವಾದಕ್ಕೂ ಕಾರಣವಾಗಿತ್ತು. ಇದರ ಬೆನ್ನಲ್ಲೇ ಕೆಲವೊಂದು ಕಟ್ಟಡ ನೆಲಸಮಗೊಳಿಸಲಾಗಿದ್ದು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಕೋರ್ಟ್ ತಡೆಯಾಜ್ಞೆ ನೀಡಿದೆ.