ಮುಂಬೈ:ಬಾಲಿವುಡ್ ನಟಿ ಕಂಗನಾ ರಣಾವತ್ ಹಾಗೂ ಮಹಾರಾಷ್ಟ್ರ ಸರ್ಕಾರದ ನಡುವಿನ ಮುಸುಕಿನ ಗುದ್ದಾಟ ಇದೀಗ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ನಿನ್ನೆ ಶಿವಸೇನೆ ವಿರುದ್ಧ ವಾಗ್ದಾಳಿ ನಡೆಸಿದ್ದ ನಟಿ ಇದೀಗ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: 'ನಾನು ಮಾದಕ ವ್ಯಸನಿಯಾಗಿದ್ದೆ'... ಕಂಗನಾ ರಣಾವತ್ ಹಳೆ ವಿಡಿಯೋ ಬಹಿರಂಗ!
ಮಹಾರಾಷ್ಟ್ರದಲ್ಲಿ ನಿಮ್ಮ ಸರ್ಕಾರ ಅಧಿಕಾರದಲ್ಲಿದ್ದು, ಅದು ನನಗೆ ಕಿರುಕುಳ ನೀಡುತ್ತಿದ್ದರೂ ನಿಮಗೆ ಸಂಕಟವಾಗುತ್ತಿಲ್ಲವೇ? ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.
'ಗೌರವಾನ್ವಿತ ಅಧ್ಯಕ್ಷರೇ, ಓರ್ವ ಮಹಿಳೆಯಾಗಿ ನಿಮ್ಮ ಸರ್ಕಾರ ನನಗೆ ನೀಡುತ್ತಿರುವ ಕಿರುಕುಳ ನೋಡಿ ನಿಮಗೆ ಸಂಕಟವಾಗುತ್ತಿಲ್ಲವೇ? ಡಾ. ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಎತ್ತಿ ಹಿಡಿಯುವಂತೆ ನೀವೂ ಅವರಿಗೆ ಮನವಿ ಮಾಡಲು ಸಾಧ್ಯವಿಲ್ಲವೇ..? ನಿಮ್ಮ ಈ ಮೌನವನ್ನ ಕಾಲವೇ ನಿರ್ಧರಿಸಲಿದೆ. ಈಗಲಾದರೂ ಸಮಸ್ಯೆ ಬಗೆಹರಿಸಲು ನೀವೂ ಮಧ್ಯಪ್ರವೇಶ ಮಾಡಬಹುದಲ್ಲವೇ' ಎಂದು ಕಂಗನಾ ಪ್ರಶ್ನಿಸಿದ್ದಾರೆ.