ನವದೆಹಲಿ: ತಮಗೆ ನನ್ನನ್ನು ಬಂಧಿಸುತ್ತಾರೆ ಎಂಬ ಭೀತಿಯಿಲ್ಲ. ನನ್ನನ್ನು ಬಂಧಿಸುವುದರಿಂದ ಅವರಿಗೇ ಸಮಸ್ಯೆಗಳು ಹೆಚ್ಚು. ಇದು ಎಚ್ಚರಿಕೆ ಅಲ್ಲ ಸಲಹೆ ಮಾತ್ರ ಎಂದು ಕಮಲ್ ಹಾಸನ್ ಹೇಳುವ ಮೂಲಕ ವಿರೋಧಿಗಳಿಗೆ ತಾವು ಜಗ್ಗಲ್ಲ ಬಗ್ಗಲ್ಲ ಎಂಬ ಸಂದೇಶ ರವಾನಿಸಿದ್ದಾರೆ.
ಬಂಧಿಸುವುದಾದರೆ ಬಂಧಿಸಲಿ... ಯಾವುದಕ್ಕೂ ಜಗ್ಗಲ್ಲ ಎಂದ ಕಮಲ್ ಹಾಸನ್
ಗೊಡ್ಸೆ ಹೇಳಿಕೆಯಿಂದಾಗಿ ವಿವಾದಕ್ಕೊಳಗಾಗಿರುವ ನಟ ಕಮಲ್ ಹಾಸನ್, ತಮ್ಮ ಹೇಳಿಕೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಯಾವ ಪ್ರತಿಭಟನೆಗೂ ತಾವು ಜಗ್ಗುವುದಿಲ್ಲ ಎಂದು ವಿರೋಧಿಗಳಿಗೆ ಟಾಂಗ್ ಕೊಟ್ಟಿದ್ದಾರೆ.
ಚೆನ್ನೈನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಕಮಲ್ ಹಾಸನ್, ತಿರುಚಿಘಟನೆಯನ್ನು ಖಂಡಿಸಿದರು. 'ಇತ್ತೀಚಿನ ದಿನಗಳಲ್ಲಿ ಸಭ್ಯತೆ, ಕರುಣೆ ಮರೆಯಾಗುತ್ತಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.ತಿರುಚಿಯಲ್ಲಿ ಕಮಲ್ ಹಾಸನ್ ಸಮಾವೇಶ ನಡೆಸುತ್ತಿದ್ದ ಸಂದರ್ಭದಲ್ಲಿ ಕಲ್ಲುತೂರಾಟದ ಘಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಕಮಲ್ ಹಾಸನ್ ಈ ಹೇಳಿಕೆ ನೀಡಿದ್ದಾರೆ.
ಅಷ್ಟೇ ಅಲ್ಲದೆ, ಪ್ರತಿ ಧರ್ಮವೂ ಭಯೋತ್ಪಾದಕರನ್ನು ಹೊಂದಿದ್ದು, ನಾವು ಮಾತ್ರ ಪವಿತ್ರರಾಗಿದ್ದೇವೆ ಎಂದು ಹೇಳಲಾರೆವು. ಎಲ್ಲಾ ಧರ್ಮಗಳು ಉಗ್ರಗಾಮಿಗಳನ್ನು ಹೊಂದಿದೆ ಎಂಬುದನ್ನು ಇತಿಹಾಸವೇ ತೋರಿಸುತ್ತದೆ ಎಂದು ಕಮಲ್ ಹಾಸನ್ ಅಭಿಪ್ರಾಯಪಟ್ಟಿದ್ದಾರೆ.
TAGGED:
kamal hassan