ಮುಂಬೈ : ಶಾಹೀದ್ ಕಪೂರ್ ಅಭಿನಯದ 'ಕಬೀರ್ ಸಿಂಗ್' ಸದ್ಯ ಬಾಲಿವುಡ್ ಅಂಗಳದಲ್ಲಿ ಕಮಾಲ್ ಮಾಡ್ತಿರೋ ಚಿತ್ರ. ಬಿಡುಗಡೆಯಾದ ದಿನದಿಂದ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಹಾಗೇ ಬಾಲಿವುಡ್ ಬಾಕ್ಸಾಫೀಸ್ ನಲ್ಲಿ ಹೊಸ ಸಂಚಲನ ಸೃಷ್ಟಿಸ್ತಿದೆ.
ಬಾಲಿವುಡ್ ಬಾಕ್ಸಾಫೀಸ್ನಲ್ಲಿ 'ಕಬೀರ್ ಸಿಂಗ್' ಕಮಾಲ್.. ರೀಮೇಕಾದರೂ ರೆವಿನ್ಯೂ ಬೊಂಬಾಟ್! - Kannada news
ಬಿಡುಗಡೆಯಾದ ಮೊದಲ ದಿನವೇ ಬರೋಬ್ಬರಿ 20 ರಿಂದ21 ಕೋಟಿ ಬಾಚಿಕೊಂಡಿತ್ತು. ಮೂರನೇ ದಿನಕ್ಕೆ 67.92 ಕೋಟಿ ಗಳಿಸುವ ಮೂಲಕ ಬಾಲಿವುಡ್ ಬಾಕ್ಸಾಫೀಸ್ನಲ್ಲಿ ಕಬೀರ್ ಸಿಂಗ್ ಮೋಡಿ ಮಾಡಿದ್ದಾನೆ.
ಟಾಲಿವುಡ್‌ನಲ್ಲಿ ಕಮಾಲ್ ಮಾಡಿದ್ದ ಚಿತ್ರ 'ಅರ್ಜುನ್ ರೆಡ್ಡಿ'. ಆ ಚಿತ್ರ ವಿಜಯ್ ದೇವರಕೊಂಡ ಮತ್ತು ಶಾಲಿನಿ ಪಾಂಡೆಗೆ ಭಾರಿ ಯಶಸ್ಸನ್ನ ತಂದ್ಕೊಟ್ಟಿತ್ತು. ಅದೇ ಕಥೆಯನ್ನ ಹಿಂದಿಗೆ ರೀಮೇಕ್ ಮಾಡಲಾಗಿತ್ತು. ಹಿಂದಿಯಲ್ಲಿ 'ಕಬೀರ್ ಸಿಂಗ್' ಹೆಸರಿನ ಚಿತ್ರದಲ್ಲಿ ಶಾಹೀದ್ ಕಪೂರ್ ಮತ್ತು ಕೈರಾ ಅಡ್ವಾಣಿ ಕೆಮಿಸ್ಟ್ರೀ ಸಖತ್ ವರ್ಕೌಟ್ ಆಗಿದೆ. ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಕಲೆಕ್ಷನ್ ಮಾಡ್ತಿರೋ ವೇಗ ನೋಡಿದ್ರೇ, ಶಾಹೀದ್ ಮತ್ತು ಕೈರಾ ಅಡ್ವಾಣಿ ಅಭಿನಯಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆನ್ನೋದು ಸ್ಪಷ್ಟ.
ಬಿಡುಗಡೆಯಾದ ಮೊದಲ ದಿನವೇ ಬರೋಬ್ಬರಿ 20 ರಿಂದ 21 ಕೋಟಿ ಬಾಚಿಕೊಂಡಿತ್ತು ಕಬೀರ್ ಸಿಂಗ್. ಮೂರನೇ ದಿನಕ್ಕೆ 67.92 ಕೋಟಿ ರೂ. ಗಲ್ಲಾಪೆಟ್ಟಿಗೆಗೆ ಸೇರಿಸಿಕೊಂಡಿದ್ದ ಈ ಚಿತ್ರ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮತ್ತು ಭೂಷಣ್ ಕುಮಾರ್, ಮುರಾದ್ ಖೇತಾನಿ, ಕ್ರಿಶನ್ ಕುಮಾರ್ ಮತ್ತು ಅಶ್ವಿನ್ ವರ್ಡೆ ನಿರ್ಮಿಸಿದ 'ಕಬೀರ್ ಸಿಂಗ್' ಜೂನ್ 21 ರಂದು ತೆರೆಗೆ ಅಪ್ಪಳಿಸಿತ್ತು.