ಕರ್ನಾಟಕ

karnataka

ETV Bharat / bharat

ಯುಪಿಎಸ್​​ಸಿ ಎಕ್ಸಾಂನಲ್ಲಿ ಈ ವಿವಿಯದ್ದೇ ಕಾರುಬಾರು... ಯಾವುದಾ ಯುನಿವರ್ಸಿಟಿ? - ವಿವಿಯ ದಕ್ಷತೆ ಹಾಗೂ ಉತ್ತಮ ಶಿಕ್ಷಣದ ಪ್ರತೀಕ

ಇತ್ತೀಚಿನ ದಿನಗಳಲ್ಲಿ ದೆಹಲಿ ಜವಾಹರ್​​ಲಾಲ್​ ನೆಹರೂ ವಿವಿ ಸದಾ ವಿವಾದಗಳಿಂದಲೇ ಸದ್ದು ಮಾಡುತ್ತಿದೆ. ಈ ಅಪವಾದದ ನಡುವೆ ಇಲ್ಲಿನ ವಿದ್ಯಾರ್ಥಿಗಳು ತಾವು ಓದಿನಲ್ಲಿ ಮುಂದಿದ್ದೇವೆ... ನಮ್ಮ ಓದಿನ ಹಿರಿಮೆಗೆ ಭಂಗ ಇಲ್ಲ ಎಂಬಂತೆ ಸಾಧನೆ ಮಾಡಿ ತೋರಿಸಿದ್ದಾರೆ

JNU students selected on 18 seats in UPSC IES exam
ಯುಪಿಎಸ್​​ಸಿ ಎಕ್ಸಾಂನಲ್ಲಿ ಈ ವಿವಿಯದ್ದೇ ಕಾರುಬಾರು... ಯಾವುದಾ ವಿವಿ?

By

Published : Jan 13, 2020, 10:04 AM IST

ನವದೆಹಲಿ:ಇತ್ತೀಚಿನ ದಿನಗಳಲ್ಲಿ ದೆಹಲಿ ಜವಾಹರ್​​ಲಾಲ್​ ನೆಹರೂ ವಿವಿ ಸದಾ ವಿವಾದಗಳಿಂದಲೇ ಸದ್ದು ಮಾಡುತ್ತಿದೆ. ಈ ಅಪವಾದದ ನಡುವೆ ಇಲ್ಲಿನ ವಿದ್ಯಾರ್ಥಿಗಳು ತಾವು ಓದಿನಲ್ಲಿ ಮುಂದಿದ್ದೇವೆ... ನಮ್ಮ ಓದಿನ ಹಿರಿಮೆಗೆ ಭಂಗ ಇಲ್ಲ ಎಂಬಂತೆ ಸಾಧನೆ ಮಾಡಿ ತೋರಿಸಿದ್ದಾರೆ. ಯುಪಿಎಸ್​​ಸಿಯ ( ಐಇಎಸ್​) ಇಂಡಿಯನ್​ ಎಕನಾಮಿಕ್ಸ್​ ಸರ್ವೀಸ್​​ ಪರೀಕ್ಷೆಯಲ್ಲಿ ವಿವಿಯ 18 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಪರೀಕ್ಷೆ ನಡೆಸಿದ 32 ಹುದ್ದೆಗಳಲ್ಲಿ 18 ಸ್ಥಾನಗಳಲ್ಲಿ ಜವಾಹರ್​ಲಾಲ್​ ವಿವಿಯ ವಿದ್ಯಾರ್ಥಿಗಳೇ ತೇರ್ಗಡೆ ಆಗಿ ಪಾರಮ್ಯ ಸಾಧಿಸಿದ್ದಾರೆ. ಇದು ವಿವಿಯ ದಕ್ಷತೆ ಹಾಗೂ ಉತ್ತಮ ಶಿಕ್ಷಣದ ಪ್ರತೀಕ ಎಂದೇ ಹೇಳಲಾಗುತ್ತಿದೆ.

For All Latest Updates

ABOUT THE AUTHOR

...view details