ಕರ್ನಾಟಕ

karnataka

ETV Bharat / bharat

ಮತ್ತೊಂದು ಬೊಂಬಾಟ್ ಆಫರ್ ನೀಡಿದ ಜಿಯೋ : ಜೂನ್‌ನಲ್ಲಿ ರೀಚಾರ್ಜ್ ಮಾಡಿ ಹೆಚ್ಚು ಲಾಭ ಪಡೆಯಿರಿ - Jio Offer

ದೇಶದಲ್ಲಿ ಗರಿಷ್ಠ ಸಂಖ್ಯೆಯ ಬಳಕೆದಾರರನ್ನು ಹೊಂದಿರುವ ರಿಲಯನ್ಸ್ ಜಿಯೋ, ಜೂನ್ ತಿಂಗಳ ವಿಶೇಷ ರಿಚಾರ್ಜ್ ಆಫರ್ ಪ್ರಕಟಿಸಿದೆ. ಬಳಕೆದಾರರಿಗೆ ಬೆಸ್ಟ್ ಆಫರ್ ನೀಡಲಿದ್ದು ಗರಿಷ್ಠ ಡೇಟಾ ಮತ್ತು ಕರೆ ಪ್ರಯೋಜನದೊಂದಿಗೆ ರಿಲಯನ್ಸ್ ಇತರ ಉತ್ಪನ್ನಗಳ ಲಾಭವನ್ನು ರೀಚಾರ್ಜ್ ಮಾಡಿಸಿಕೊಂಡವರು ಪಡೆಯಬಹುದಾಗಿದೆ. ರಿಲಯನ್ಸ್ ಜಿಯೋದ 4X ಆಫರ್ ಬಗ್ಗೆ ಇಲ್ಲಿ ವಿವರ ನೀಡಲಾಗಿದೆ.

ಮತ್ತೊಂದು ಬೊಂಬಾಟ್ ಆಫರ್ ನೀಡಿದ ಜಿಯೋ
ಮತ್ತೊಂದು ಬೊಂಬಾಟ್ ಆಫರ್ ನೀಡಿದ ಜಿಯೋ

By

Published : Jun 3, 2020, 6:43 PM IST

ಜಿಯೋ ತನ್ನ ಬಳಕೆದಾರರಿಗೆ ಹೊಸ ಮಾದರಿಯ ರೀಚಾರ್ಜ್​ ಆಫರ್​ಗಳನ್ನು ನೀಡಲು ಮುಂದಾಗಿದೆ. ಒಮ್ಮೆ ರೀಚಾರ್ಜ್ ಮಾಡಿಸಿದರೆ ಅದಕ್ಕಿಂತ ನಾಲ್ಕು ಪಟ್ಟು ಲಾಭವನ್ನು ಮಾಡಿಕೊಡಲು ಮುಂದಾಗಿದೆ. ಜಿಯೋ ಬಳಕೆದಾರರು ಜೂನ್‌ನಲ್ಲಿ ರೀಚಾರ್ಜ್ ಮಾಡಿಸಿಕೊಂಡರೆ ರಿಲಯನ್ಸ್ ಡಿಜಿಟಲ್, ಎಜಿಯೊ, ಟ್ರೆಂಡ್ಸ್ ಮತ್ತು ಟ್ರೆಂಡ್ಸ್ ಪಾದರಕ್ಷೆಗಳ ತಲಾ ಒಂದು ರಿಯಾಯಿತಿ ಕೂಪನ್ ಪಡೆಯಲಿದ್ದಾರೆ.

ಜಿಯೋ ಬಳಕೆದಾರರು ಜೂನ್‌ನಲ್ಲಿ ರೂ.249 ಮತ್ತು ಅದಕ್ಕಿಂತ ಹೆಚ್ಚಿನ ರೀಚಾರ್ಜ್‌ಗಳನ್ನು ಮಾಡಿಸಿಕೊಂಡಲ್ಲಿ 4X ಹೆಚ್ಚು ಲಾಭದ ಈ ಕೊಡುಗೆ ಅನ್ವಯವಾಗುತ್ತದೆ. ಜಿಯೋ ಬಳಕೆದಾರರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಮೈ-ಜಿಯೊ, ಜಿಯೋ.ಕಾಮ್, ಜಿಯೋ ಪೋಸ್‌ಲೈಟ್, ಹತ್ತಿರದ ಜಿಯೋ ಸ್ಟೋರ್, ಫೋನ್‌ಪೇ / ಗೂಗಲ್‌ಪೇ / ಪೇಟಿಎಂ / ಅಮೆಜಾನ್ ಪೇ / ಜಿಯೋಮನಿ ಇತ್ಯಾದಿಗಳಿಂದ ರೀಚಾರ್ಜ್ ಮಾಡಿಕೊಳ್ಳಬಹುದು.

ಮೈ-ಜಿಯೋ ಅಪ್ಲಿಕೇಶನ್‌ನಲ್ಲಿ 'ಕೂಪನ್' ವಿಭಾಗದ ಅಡಿಯಲ್ಲಿ ನೀವು ಕೂಪನ್‌ಗಳ ಸ್ಥಿತಿಯನ್ನು ಪರಿಶೀಲಿಸಬಹುದು. ಕೂಪನ್ ಅನ್ನು 72 ಗಂಟೆಗಳ ಒಳಗೆ ಜಮಾ ಮಾಡಲಾಗುತ್ತದೆ. ರೂ. 249 ಮತ್ತು ಅದಕ್ಕಿಂತ ಹೆಚ್ಚಿನ ಯೋಜನೆಯನ್ನು ಯಶಸ್ವಿಯಾಗಿ ರೀಚಾರ್ಜ್ ಮಾಡಿದವರಿಗೆ ಮಾತ್ರ ದೊರೆಯಲಿದೆ.

ಈ ಜಿಯೋ ಹೊಸ ಯೋಜನೆ ಎಲ್ಲಾ ಜಿಯೋ ಬಳಕೆದಾರರಿಗೆ ಲಭ್ಯವಿದೆ. ಈಗಾಗಲೇ ಜಿಯೋ ಬಳಕೆ ಮಾಡುತ್ತಿರುವವರಿಗೆ ಮತ್ತು ಹೊಸದಾಗಿ ಜಿಯೋ ಬಳಕೆಯನ್ನು ಆರಂಭಿಸುವವರಿಗೂ ಈ ಯೋಜನೆ ಲಭ್ಯವಿರಲಿದೆ.

ಜಿಯೋ ಬಳಕೆದಾರರು ಜೂನ್ 1 ರಿಂದ 2020 ರ ಜೂನ್ 30ರ ವರೆಗೆ ರೀಚಾರ್ಜ್ ಮಾಡಿಸಿಕೊಂಡರೆ ಮಾತ್ರ ಈ ಆಫರ್ ಅನ್ವಯವಾಗುತ್ತದೆ. ಮೈ-ಜಿಯೋದ ಕೂಪನ್ ವಿಭಾಗದಲ್ಲಿ ಕೂಪನ್‌ಗಳು ಲಭ್ಯವಿರುತ್ತವೆ.

ಈ ಕುರಿತಾದ ಹೆಚ್ಚಿನ ಮಾಹಿತಿ ಇಲ್ಲಿದೆ..

Recharge Value Ajio Trends Trends Footwear Reliance Digital
Coupon Denomination Minimum Cart Value Number of Coupons Provided Coupon Denomination Minimum Cart Value Number of Coupons Provided Coupon Denomination Minimum Cart Value Number of Coupons Provided Coupon Denomination Minimum Cart Value Number of Coupons Provided
249 Rs.300 off on Rs.999. 1 Rs.300 off on Rs.999. 1 Rs.300 off on Rs.999. 1 Rs 249 RS 249 instant discount on minimum purchase of Rs 10,000 1
349 2 2 2 Rs 349 RS 349 instant discount on minimum purchase of Rs 10,000 1
399 2 2 2 Rs 399 RS 399 instant discount on minimum purchase of Rs 10,000 1
444 2 2 2 Rs 444 RS 444 instant discount on minimum purchase of Rs 10,000 1
555 2 2 2 Rs 555 RS 555 instant discount on minimum purchase of Rs 10,000 1
599 2 2 2 Rs 599 RS 599 instant discount on minimum purchase of Rs 10,000 1
999 4 4 4 Rs 1000 Rs 1000 instant discount on minimum purchase of Rs 15,000 1
1299 5 5 5 Rs 1000 & Rs 399 Rs 1000 instant discount on minimum purchase of Rs 15,000
RS 399 instant discount on minimum purchase of Rs 10,000
2
2121 8 8 8 Rs 1000 * 2 & Rs 399 Rs 1000 instant discount on minimum purchase of Rs 15,000
RS 399 instant discount on minimum purchase of Rs 10,000
3
2399 8 8 8 Rs 1000 * 2 & Rs 399 Rs 1000 instant discount on minimum purchase of Rs 15,000
RS 399 instant discount on minimum purchase of Rs 10,000
3
4999 17 17 17 Rs 1000 * 5 Rs 1000 instant discount on minimum purchase of Rs 15,000 5

ABOUT THE AUTHOR

...view details