ಕರ್ನಾಟಕ

karnataka

ETV Bharat / bharat

ಪ್ರತ್ಯೇಕತಾವಾದಿಗಳ ಮೇಲೆ ಕೇಂದ್ರದ ಕೆಂಗಣ್ಣು: ಉಗ್ರರ ಸಂಪರ್ಕದಲ್ಲಿದ್ದ ಜೆಇಎಲ್​ ಬ್ಯಾನ್​ - ಪ್ರತ್ಯೇಕವಾದಿ

ಕಾಶ್ಮೀರದ ಜಮಾತ್​ - ಇ- ಇಸ್ಲಾಮಿ(ಜೆಇಎಲ್​) ಯನ್ನು ನಿಷೇಧಿಸಿರುವುದಾಗಿ ಕೇಂದ್ರದ ಗೃಹ ಇಲಾಖೆ ಘೋಷಿಸಿದೆ

ಕೇಂದ್ರ ಸರ್ಕಾರದಿಂದ ಕಾಶ್ಮೀರದ ಜಮಾತ್​ - ಇ- ಇಸ್ಲಾಮಿ ಬ್ಯಾನ್

By

Published : Mar 2, 2019, 3:36 PM IST

ಶ್ರೀನಗರ: ಪುಲ್ವಾಮ ದಾಳಿಯ ನಂತರ ಪ್ರತ್ಯೇಕತಾವಾದಿಗಳನ್ನು ಹತ್ತಿಕ್ಕುವಲ್ಲಿ ಕೇಂದ್ರ ಸರ್ಕಾರ ನಿರತವಾಗಿದೆ. ಕಾಶ್ಮೀರದ ಜಮಾತ್​ - ಇ- ಇಸ್ಲಾಮಿ(ಜೆಇಎಲ್​) ಯನ್ನು ಬ್ಯಾನ್​ ಮಾಡಿದ ಬೆನ್ನಲ್ಲೇ ಸಂಘಟನೆಯ ಆಸ್ತಿಯನ್ನೂ ಜಪ್ತಿ ಮಾಡುತ್ತಿದೆ.

ಕಾಶ್ಮೀರದಾದ್ಯಂತ ಇರುವ ಜೆಇಎಲ್​ ಸಂಘಟನೆಯ ಡಜನ್​ಗೂ ಹೆಚ್ಚು ಕಾರ್ಯಕರ್ತರು ಹಾಗೂ ನಾಯಕರ ಮನೆಗಳಿಗೆ ಬೀಗಮುದ್ರೆ ಹಾಕಲಾಗಿದೆ ಎಂದು ತಿಳಿದುಬಂದಿದೆ. ಜಿಲ್ಲಾಧಿಕಾರಿಗಳ ಸೂಚನೆಯಂತೆ ಸಂಘಟನೆಯ ಆಸ್ತಿಯನ್ನ ಮುಟ್ಟುಗೋಲು ಹಾಕಲಾಗಿದೆ.

ಗುರುವಾರವಷ್ಟೆ ಜೆಇಎಲ್​ ಕಾನೂನು ಬಾಹಿರ ಸಂಘಟನೆ ಎಂದು ಘೋಷಿಸಿದ ಕೇಂದ್ರದ ಗೃಹ ಇಲಾಖೆ, ಅದರ 200ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿದೆ. ಉಗ್ರಗಾಮಿ ಸಂಘಟನೆಗಳ ಜತೆ ಸಂಪರ್ಕದಲ್ಲಿರುವ ಜೆಇಎಲ್​, ಜಮ್ಮು ಮತ್ತು ಕಾಶ್ಮೀರದಲ್ಲಿ ದೇಶವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ಇಲಾಖೆ ಹೇಳಿದೆ.

ಪುಲ್ವಾಮ ದಾಳಿ ಬೆನ್ನಲ್ಲೆ ಪ್ರತ್ಯೇಕವಾದಿಗಳಿಗೆ ಸರ್ಕಾರ ನೀಡಿದ್ದ ಭದ್ರತೆಯನ್ನು ವಾಪಸ್​ ಪಡೆಯಲಾಗಿತ್ತು. ಉಗ್ರವಾದಕ್ಕೆ ಪ್ರಚೋದನೆ ನೀಡುತ್ತಿರುವ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ಬಂಧಿಸುತ್ತಲೇ ಇದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಭೆಗಳಲ್ಲಿಯೇ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಇನ್ನು ಇಲ್ಲಿನ ಪೀಪಲ್ಸ್​ ಡೆಮಾಕ್ರಟಿಕ್​ ಪಾರ್ಟಿ ಹಾಗೂ ನ್ಯಾಷನಲ್​ ಕಾನ್ಫರೆನ್ಸ್​ ಜೆಇಎಲ್​ ಬ್ಯಾನ್​ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿವೆ.

ABOUT THE AUTHOR

...view details