ಕರ್ನಾಟಕ

karnataka

ETV Bharat / bharat

ಜಲ್ಗಾಂವ್‌ ಪ್ರಕರಣ: ಅತ್ಯಾಚಾರ ಮುಚ್ಚಿ ಹಾಕಲು ಕಂದಮ್ಮಗಳ ಕೊಲೆಗೈದ ದುಷ್ಕರ್ಮಿಗಳು? - Raver news

13 ವರ್ಷದ ಬಾಲಕಿ ಮೇಲೆ ಮೊದಲು ಅತ್ಯಾಚಾರ ಎಸಗಿರುವ ಅಪರಿಚಿತರು ಬಳಿಕ ಈ ವಿಷಯವನ್ನು ಮುಚ್ಚಿಹಾಕಲು ಸಂತ್ರಸ್ತೆಯನ್ನೂ ಸೇರಿ ಉಳಿದ ಮೂವರು ಸಹೋದರರನ್ನು ಕೊಲೆ ಮಾಡಿ ಪರಾರಿಯಾಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

jalgaon-massacre-police-suspect-minor-was-gang-raped-before-murder
ನಿನ್ನೆ ಕೊಲೆಯಾಗಿದ್ದ ನಾಲ್ವರು ಮಕ್ಕಳ ಪೈಕಿ ಓರ್ವ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಶಂಕೆ

By

Published : Oct 17, 2020, 4:04 PM IST

ಜಲ್ಗಾಂವ್(ಮಹಾರಾಷ್ಟ್ರ) : ಜಿಲ್ಲೆಯಲ್ಲಿ ಹತ್ಯೆಗೀಡಾದ ನಾಲ್ವರು ಸಹೋದರರಲ್ಲಿ 13 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಆಕೆಯನ್ನು ಕೊಲೆ ಮಾಡುವ ಮೊದಲು ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಮಹಾರಾಷ್ಟ್ರ ಪೊಲೀಸರು ಶಂಕಿಸಿದ್ದಾರೆ.

ಇಲ್ಲಿನ ರಾವರ್ ಗ್ರಾಮದ ಬಳಿಯ ಜಮೀನೊಂದರಲ್ಲಿ ನಿರ್ಮಿಸಲಾದ ಮನೆಯೊಳಗೆ ನಾಲ್ವರು ಮಕ್ಕಳು ರಕ್ತದ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಮೃತಪಟ್ಟವರು 13, 11, 8 ಹಾಗೂ 6 ವರ್ಷದ ಮಕ್ಕಳಾಗಿದ್ದರು.

13 ವರ್ಷದ ಬಾಲಕಿ ಮೇಲೆ ಮೊದಲು ಅತ್ಯಾಚಾರ ಎಸಗಿರುವ ಅಪರಿಚಿತರು ಬಳಿಕ ಈ ವಿಷಯವನ್ನು ಮುಚ್ಚಿಹಾಕಲು ಸಂತ್ರಸ್ತೆಯನ್ನೂ ಸೇರಿ ಉಳಿದ ಮೂವರು ಸಹೋದರರನ್ನು ಕೊಲೆ ಮಾಡಿ ಪರಾರಿಯಾಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಆರೋಪಿಗಳು ಮದ್ಯದ ಅಮಲಿನಲ್ಲಿ ಸಂತ್ರಸ್ತೆಯ ಮನೆಗೆ ತೆರಳಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅಲ್ಲದೆ ನಾಲ್ವರಿಗೂ ಕುತ್ತಿಗೆಗೆ ಇರಿದು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ತನ್ನ ಪೋಷಕರೊಂದಿಗೆ ಮಧ್ಯಪ್ರದೇಶಕ್ಕೆ ತೆರಳಿದ ಸಂತ್ರಸ್ತೆಯ ಹಿರಿಯ ಸಹೋದರ, ಹೋಗುವಾಗ ತನ್ನ ನಾಲ್ವರು ಸ್ನೇಹಿತರಿಗೆ ತಾನು ಮರಳಿ ಬರುವವರೆಗೂ ಆತನ ಸಹೋದರರನ್ನು ನೋಡಿಕೊಳ್ಳುವಂತೆ ಹೇಳಿ ಹೋಗಿದ್ದ. ಇದೇ ಸಮಯದಲ್ಲಿ ಅರೋಪಿಗಳು ಇಂತಹ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಕೊಡಲಿಯಿಂದ ಕೊಚ್ಚಿ ನಾಲ್ವರು ಮಕ್ಕಳ ಬರ್ಬರ ಕೊಲೆ

ಈ ಕುರಿತು ಮಾತನಾಡಿರುವ ರಾವರ್ ಠಾಣೆ ಪೊಲೀಸ್ ಅಧಿಕಾರಿಯೊಬ್ಬರು, ನಾಲ್ಕು ಮಕ್ಕಳ ಕುತ್ತಿಗೆಯಲ್ಲಿ ಆಳವಾದ ಗಾಯದ ಗುರುತಿದೆೆ. ಕೊಡಲಿಯಿಂದ ಕೊಚ್ಚಿರುವುದು ಕಂಡುಬಂದಿದೆ ಎಂದಿದ್ದಾರೆ.

ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಸಂತ್ರಸ್ತೆಯ ಸಹೋದರನನ್ನು ಕರೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ತನ್ನ ನಾಲ್ವರು ಸ್ನೇಹಿತರಿಗೆ ಸಹೋದರರನ್ನು ನೋಡಿಕೊಳ್ಳುವುದಾಗಿ ಹೇಳಿ ಹೋಗಿದ್ದ ವಿಷಯ ತಿಳಿಸಿದ್ದಾನೆ. ಈ ಹಿನ್ನೆಲೆ ಆ ನಾಲ್ವರು ಸ್ನೇಹಿತರನ್ನೂ ಸಹ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಈ ನಡುವೆ ವಿಚಾರಣೆ ಎದುರಿಸುತ್ತಿರುವ ಶಂಕಿತ ಆರೋಪಿಗಳು ಪೊಲೀಸರು ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿದ್ದು, ಸರಿಯಾದ ಮಾಹಿತಿ ನೀಡಿಲ್ಲ ಎಂದು ತಿಳಿದುಬಂದಿದೆ. ಅಲ್ಲದೇ ಪೊಲೀಸರು ಸಹ ಘಟನೆ ಸಂಬಂಧ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ABOUT THE AUTHOR

...view details