ನವದೆಹಲಿ:ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಗೆದ್ದು ಕೇಂದ್ರದಲ್ಲಿ ಸಚಿವರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುರೇಶ್ ಚನ್ನಬಸಪ್ಪ ಅಂಗಡಿ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದು ತಿಳಿಯುತ್ತಿದ್ದಂತೆ ರಾಜ್ಯ ಸಚಿವ ಜಗದೀಶ್ ಶೆಟ್ಟರ್ ಅವರು ಅಂಗಡಿ ಅವರ ದೆಹಲಿಯ ನಿವಾಸಕ್ಕೆತಡರಾತ್ರಿಗೆ ಆಗಮಿಸಿದರು.
ಸತತ ನಾಲ್ಕು ಬಾರಿಯಿಂದ ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಸುರೇಶ್ ಅಂಗಡಿಯವರ ಜೊತೆ ನನಗೆ ಆತ್ಮೀಯ ಸ್ನೇಹವಿತ್ತು. ರಾಜಕಾರಣವನ್ನು ಹೊರತುಪಡಿಸಿದ ಅತ್ಮೀಯ ಸಂಬಂಧ ನಮ್ಮದಾಗಿತ್ತು. ಅವರ ಅಕಾಲಿಕ ಅಗಲಿಕೆ ನನಗೆ ವೈಯಕ್ತಿಯಕವಾಗಿ ಬಹಳಷ್ಟು ನೋವನ್ನು ಉಂಟುಮಾಡಿದೆ ಎಂದು ಬೃಹತ್ ಹಾಗೂ ಸಣ್ಣ ಕೈಗಾರಿಕೆಗಳ ರಾಜ್ಯ ಸಚಿವ ಜಗದೀಶ್ ಶೆಟ್ಟರ್ ಶೋಕ ವ್ಯಕ್ತಪಡಿಸಿದರು.