ಕೆವಾಡಿಯಾ:ಸ್ವತಂತ್ರ ಭಾರತದ ಪ್ರಥಮ ಗೃಹ ಸಚಿವ ಸರ್ದಾರ್ ವಲಭ್‌ಭಾಯಿ ಪಟೇಲ್ ದೃಷ್ಟಿಕೋನವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ವಾಪಸ್ ಪಡೆಯಲು ಪಟೇಲರೇ ಪ್ರೇರಣೆ ಎಂದು ಹೇಳಿದ್ರು.
ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಗೆ ಮೋದಿಗೆ ಇವ್ರೇ ಸ್ಪೂರ್ತಿಯಂತೆ - NDA
69ನೇ ಜನ್ಮದಿನದ ಪ್ರಯುಕ್ತ ಗುಜರಾತ್ಗೆ ಭೇಟಿ ನೀಡಿದ ಪ್ರಧಾನಿ ಮೋದಿ, ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡುತ್ತಾ ಸರ್ದಾರ್ ವಲ್ಲಭ್‌ಭಾಯಿ ಪಟೇಲ್ ತ್ಯಾಗವನ್ನು ಕೊಂಡಾಡಿದ್ರು. ಹೈದರಾಬಾದ್ ಸಂಸ್ಥಾನವನ್ನು ಭಾರತದ ಒಕ್ಕೂಟಕ್ಕೆ ಸೇರಿಸಲು ಅವರು ತೋರಿದ ಧೈರ್ಯವನ್ನು ಸ್ಮರಿಸಿದ್ರು.
ಪ್ರಧಾನಿ ಮೋದಿ
ತಮ್ಮ 69ನೇ ಜನ್ಮದಿನದ ಪ್ರಯುಕ್ತ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಮೋದಿ, ದಶಕಗಳಿಗೂ ಹಳೆಯದಾದ ಕಾಶ್ಮೀರದ ಸಮಸ್ಯೆಯನ್ನು ಪರಿಹರಿಸಲು ಸರ್ದಾರ್ ಪ್ರೇರಣೆಯಿಂದ ಸಾಧ್ಯವಾಯ್ತು ಎಂದರು.
'ದೇಶದ ಉಕ್ಕಿನ ಮನುಷ್ಯ' ಪಟೇಲ್ ದೂರದೃಷ್ಟಿಯ ಪರಿಣಾಮವಾಗಿ ಪ್ರತಿ ವರ್ಷ 17ರಂದು ಹೈದರಾಬಾದ್ ವಿಮೋಚನಾ (ಕಲ್ಯಾಣ ಕರ್ನಾಟಕ ಉತ್ಸವ) ದಿನಾಚರಣೆ ನಡೆಯುತ್ತಿದೆ. 1948 ರಲ್ಲಿ ಈ ಹಿಂದಿನ ಹೈದರಾಬಾದ್ ಸಂಸ್ಥಾನವನ್ನು ಭಾರತೀಯ ಒಕ್ಕೂಟಕ್ಕೆ ಸೇರಿಸಿದ ವಿಶೇಷ ದಿನ ಇದಾಗಿದೆ.