ಬಾಟೊಟ್(ಜಮ್ಮುಕಾಶ್ಮೀರ):ಕಣಿವೆ ರಾಜ್ಯದಲ್ಲಿ ಸೇನೆ ಹಾಗೂ ಇಬ್ಬರು ಶಂಕಿತ ವ್ಯಕ್ತಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಬಾಟೊಟ್ ಬಳಿ ಶಂಕಿತರಿಬ್ಬರು ವಾಹನವೊಂದನ್ನು ತಡೆಯಲು ಯತ್ನಿಸಿದ್ದು, ಚಾಲಕ ನೀಡಿದ ಮಾಹಿತಿ ಮೇರೆಗೆ ಸೇನೆ ಕಾರ್ಯಾಚರಣೆಗಿಳಿದಿದೆ.
ವಾಹನ ತಡೆಯಲೆತ್ನಿಸಿದ ಶಂಕಿತರು; ಜಮ್ಮುಕಾಶ್ಮೀರದಲ್ಲಿ ಮತ್ತೆ ಎನ್ಕೌಂಟರ್ - ಬಾಟೊಟ್ ಕಾರ್ಯಾಚರಣೆ
ಕಣಿವೆ ರಾಜ್ಯದಲ್ಲಿ ಸೇನೆ ಹಾಗೂ ಇಬ್ಬರು ಶಂಕಿತರ ನಡುವೆ ಗುಂಡಿನ ಚಕಮಕಿ ನಡೆದಿದೆ. ಬಾಟೊಟ್ ಬಳಿ ಶಂಕಿತರಿಬ್ಬರು ವಾಹನವೊಂದನ್ನು ತಡೆಯಲು ಯತ್ನ ನಡೆದಿತ್ತು.
ಜಮ್ಮು ಕಾಶ್ಮೀರ
ಮಾಹಿತಿ ಪ್ರಕಾರ, ಬೆಳಗ್ಗೆ 7.30ರ ಸುಮಾರಿಗೆ, ರಾಮ್ಬಾನ್ ಜಿಲ್ಲೆಯ ಬಾಟೊಟ್ ಬಳಿ ರಾಷ್ಟ್ರೀಯ ಹೆದ್ದಾರಿ 244ರಲ್ಲಿ ವಾಹನವೊಂದನ್ನು ತಡೆದು ನಿಲ್ಲಿಸಲು ಯತ್ನಿಸಿದ್ದಾರೆ. ಆದರೆ ವಾಹನ ಚಾಲಕ ಹಾಗೆಯೇ ತೆರಳಿದ್ದು, ಬಳಿಕ ಸೇನೆಗೆ ಈ ಬಗ್ಗೆ ತಿಳಿಸಿದ್ದಾನೆ.
ಸೇನೆ ತಕ್ಷಣ ಕಾರ್ಯಪ್ರವೃತ್ತವಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿದುಬಂದಿದೆ.
Last Updated : Sep 28, 2019, 1:02 PM IST