ಬೆಂಗಳೂರು: ಮೊದಲ ಯತ್ನದಲ್ಲಿ ತಾಂತ್ರಿಕ ದೋಷದಿಂದ ಚಂದ್ರಯಾನ -2 ಉಡ್ಡಯನ ರದ್ದಾಗಿ 2ನೇ ಯತ್ನದಲ್ಲಿ ಯಶಸ್ವಿಯಾಗಿರುವ ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (ಇಸ್ರೋ) ಇದೀಗ ಮುಂದಿನ ಪ್ರಾಜೆಕ್ಟ್ ಕೈಗೆತ್ತಿಕೊಂಡಿದೆ.
ಇಸ್ರೋ ಈಗಾಗಲೇ ಮಂಗಳನಲ್ಲಿ ತನ್ನ ಯಶಸ್ವಿ ಯಾತ್ರೆ ಮುಗಿಸಿ, ಈಗ ಚಂದ್ರನ ಬಳಿಗೆ ಮತ್ತೊಮ್ಮೆ ತೆರಳಿದೆ. ಇನ್ನೂ ಚಂದ್ರನ ಅಂಗಳಕ್ಕೆ ಇಳಿಯುವ ಮುನ್ನವೇ ಇಸ್ರೋ ಸದ್ದಿಲ್ಲದೆ ಸೂರ್ಯನತ್ತ ದೃಷ್ಟಿ ನೆಟ್ಟಿದೆ. 2020ರ ಮೊದಲಾರ್ಧದಲ್ಲಿ ಸೋಲಾರ್ ಮಿಷನ್ ಕಾರ್ಯಗತಗೊಳಿಸಲು ಯೋಜಿಸಿದ್ದು, ಆದಿತ್ಯ- ಎಲ್-1 ಉಡ್ಡಯನಕ್ಕೆ ಸಿದ್ಧತೆ ಮಾಡಿಕೊಂಡಿದೆ.
ಚಂದ್ರನೂರಿಗೆ ಪಯಣಿಸಿದ ಭಾರತದ 'ಬಾಹುಬಲಿ'; ಐತಿಹಾಸಿಕ ಉಡ್ಡಯನದ ಸ್ಮರಣೀಯ ಕ್ಷಣಗಳು...
ಚಂದ್ರನಲ್ಲಿ ಇಳಿಯುವ ಬಾಹುಬಲಿ, ಅಲ್ಲಿನ ದಕ್ಷಿಣ ಧ್ರುವದಲ್ಲಿ ನೀರಿನ ಅಂಶ ಪತ್ತೆ ಹಚ್ಚಲಿದ್ದರೆ, 2020ರಲ್ಲಿ ಸೂರ್ಯನತ್ತ ಪಯಣ ಬೆಳೆಸುವ ಆದಿತ್ಯ ಎಲ್-1 ಸೂರ್ಯನಲ್ಲಿ ನಿಗಿ ನಿಗಿ ಕೆಂಡ ಎನ್ನಲಾದ ಕರೋನಾ ಭಾಗದ ಅಧ್ಯಯನ ನಡೆಸಲಿದೆಯಂತೆ.
ಸೂರ್ಯನ ಈ ಕರೋನಾ ಭಾಗ ಭೂಮಿಯಿಂದ 1.5 ಮಿಲಿಯನ್ ಕಿ.ಮೀ ದೂರದಲ್ಲಿದೆ. ಆದಿತ್ಯ ಎಲ್-1 ಅಲ್ಲಿಗೆ ತೆರಳಿ ತನ್ನ ಅಧ್ಯಯನ ನಡೆಸಬೇಕಿದೆ. ಈ ಮೂಲಕ ಭಾರತ ಮೊದಲ ಸಲ ಸೂರ್ಯನ ಅಧ್ಯಯನಕ್ಕೆ ತನ್ನದೇ ನೌಕೆಯನ್ನ ಕಳುಹಿಸುವ ಪ್ರಯತ್ನ ಮಾಡಿದಂತಾಗುತ್ತದೆ.