ಕರ್ನಾಟಕ

karnataka

ETV Bharat / bharat

ವಿಕ್ರಂ ಲ್ಯಾಂಡರ್ ಸಂಪರ್ಕ ಕಡಿತ: ರಾಷ್ಟ್ರಮಟ್ಟದ ತಜ್ಞರಿಂದ ಸಮಸ್ಯೆ ವಿಶ್ಲೇಷಣೆ - ಸಂಪರ್ಕ ಕಳೆದುಕೊಂಡಿರುವ ವಿಕ್ರಂ ಲ್ಯಾಂಡರ್

ತಜ್ಞರು ಹಾಗೂ ಇಸ್ರೋ ವಿಜ್ಞಾನಿಗಳನನ್ನೊಳಗೊಂಡ ರಾಷ್ಟ್ರಮಟ್ಟದ ಸಮಿತಿಯು ವಿಕ್ರಂ ಲ್ಯಾಂಡರ್​ ಜೊತೆಗಿನ ಸಂಪರ್ಕ ಕಡಿತಕ್ಕೆ ಕಾರಣಗಳೇನು ಎಂಬುದನ್ನು ವಿಶ್ಲೇಷಿಸುತ್ತಿದೆ ಎಂದು ಬೆಂಗಳೂರಿನಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮಾಹಿತಿ ನೀಡಿದೆ.

ರಾಷ್ಟ್ರಮಟ್ಟದ ತಜ್ಞರಿಂದ ಸಮಸ್ಯೆ ವಿಶ್ಲೇಷಣೆ

By

Published : Sep 19, 2019, 8:52 PM IST

Updated : Sep 20, 2019, 12:34 AM IST

ಬೆಂಗಳೂರು:ಅಂತಿಮ ಹಂತದಲ್ಲಿ ಇಸ್ರೋದೊಂದಿಗಿನ ಸಂಪರ್ಕ ಕಳೆದುಕೊಂಡಿರುವ ಚಂದ್ರಯಾನ-2 ವಿಕ್ರಂ ಲ್ಯಾಂಡರ್ ಎದುರಿಸಿದ ಸಮಸ್ಯೆಗಳೇನು ಎಂಬುದನ್ನು ಇಸ್ರೋ ತಜ್ಞರನ್ನು ಒಳಗೊಂಡ ರಾಷ್ಟ್ರಮಟ್ಟದ ಸಮಿತಿ ವಿಶ್ಲೇಷಣೆ ನಡೆಸುತ್ತಿದೆ.

ಈ ಬಗ್ಗೆ ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮಾಹಿತಿ ನೀಡಿದೆ. ತಜ್ಞರು ಹಾಗೂ ಇಸ್ರೋ ವಿಜ್ಞಾನಿಗಳನ್ನೊಳಗೊಂಡ ರಾಷ್ಟ್ರಮಟ್ಟದ ಸಮಿತಿಯು ವಿಕ್ರಂ ಲ್ಯಾಂಡರ್​ ಜೊತೆಗಿನ ಸಂಪರ್ಕ ಕಡಿತಕ್ಕೆ ಕಾರಣಗಳೇನು ಎಂಬುದನ್ನು ವಿಶ್ಲೇಷಿಸುತ್ತಿರುವುದಾಗಿ ಇಸ್ರೋ ತಿಳಿಸಿದೆ.

ಇನ್ನೊಂದೆಡೆ ವಿಕ್ರಂ ಲ್ಯಾಂಡರ್​ ಕಕ್ಷೆಯನ್ನು ತಲುಪಿ ನಿಗದಿತ ವಿಜ್ಞಾನ ಪ್ರಯೋಗಗಳನ್ನು ಮುಂದುವರೆಸಿದೆ. ಅದರ ಎಲ್ಲಾ ಪೇಲೋಡ್‌ಗಳ ಕಾರ್ಯಕ್ಷಮತೆ ತೃಪ್ತಿದಾಯಕವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಹೇಳಿದೆ.

Last Updated : Sep 20, 2019, 12:34 AM IST

ABOUT THE AUTHOR

...view details