ಕರ್ನಾಟಕ

karnataka

ETV Bharat / bharat

ದಕ್ಷಿಣ ಕಾಶ್ಮೀರದಲ್ಲಿ ಗ್ರೆನೇಡ್​ ದಾಳಿ ನಡೆಸಿದ್ದು ನಾವೇ ಎಂದು ಒಪ್ಪಿಕೊಂಡ ಐಸಿಸ್!​​ - ದಕ್ಷಿಣ ಕಾಶ್ಮೀರ ಗ್ರೆನೇಡ್​ ದಾಳಿ

ಮಂಗಳವಾರ ಸಂಜೆ ಸಿಆರ್​ಪಿಎಫ್​​ ಯೋಧರ ಮೇಲೆ ಗುಂಡಿನ ದಾಳಿ ನಡೆದಿದ್ದು, ದಾಳಿ ಮಾಡಿದ್ದು ತಾನೇ ಎಂದು ಇದೀಗ ಐಸಿಸ್​ ಸಂಘಟನೆ ಒಪ್ಪಿಕೊಂಡಿದೆ.

grenade attack
grenade attack

By

Published : Apr 8, 2020, 10:32 AM IST

ಶ್ರೀನಗರ:ಕಳೆದೆರಡು ದಿನಗಳ ಹಿಂದೆ ದಕ್ಷಿಣ ಕಾಶ್ಮೀರದ ಅನಂತ್​ನಾಗ್ ಜಿಲ್ಲೆಯಲ್ಲಿ ಕಾರ್ಯನಿರತ ಸೈನಿಕರ ಮೇಳೆ ಉಗ್ರರು ಗ್ರೆನೇಡ್ ದಾಳಿ ನಡೆಸಿದ ಪರಿಣಾಮ ಸಿಆರ್​ಪಿಎಫ್​ನ ಇಬ್ಬರು ಯೋಧರು ಹುತಾತ್ಮರಾಗಿದ್ದ ಘಟನೆ ನಡೆದಿತ್ತುರು. ಇದೀಗ ಇದರ ಹೊಣೆ ಐಸಿಸ್ ಹೊತ್ತುಕೊಂಡಿದೆ.

ಮಂಗಳವಾರ ಸಂಜೆ ಬಿಜ್ ಬೇಹ್ರಾದ ಗೋರಿವಾನ್ ಚೌಕ್ ಸಮೀಪ ಶಂಕಿತ ಉಗ್ರರು ಗ್ರೆನೇಡ್ ಎಸೆದ ಪರಿಣಾಮ ಹೆಡ್ ಕಾನ್ಸ್​ಟೇಬಲ್​ ಶಿವ್​ಲಾಲ್​ ನೀಟಾಂ ಹುತಾತ್ಮರಾಗಿ, ನೀಟಾಮ್​​ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನ ಆಸ್ಪತ್ರೆಗೆ ದಾಖಸುವ ವೇಳೆ ಹುತಾತ್ಮರಾಗಿದ್ದರು.

ಗ್ರೆನೇಡ್​ ಎಸೆದು ಏಕಾಏಕಿ ಗುಂಡಿನ ದಾಳಿ ನಡೆಸಿದ್ದ ಉಗ್ರರ ಮೇಲೆ ಭಾರತೀಯ ಯೋಧರು ಪ್ರತಿದಾಳಿ ನಡೆಸಿದ್ದರು. ಇದೀಗ ದಾಳಿಯ ಹೊಣೆ ಇಸ್ಲಾಮಿಕ ಉಗ್ರ ಸಂಘಟನೆ ಐಸಿಸ್​ ಹೊತ್ತುಕೊಂಡಿದ್ದು, ದಾಳಿ ನಡೆಸಿದ್ದು ನಾವೇ ಎಂದು ಹೇಳಿದೆ. ಕಳೆದ ಕೆಲ ದಿನಗಳಿಂದ ಕಣಿವೆ ನಾಡಿನಲ್ಲಿ ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಿರುವ ಉಗ್ರರ ಮೇಲೆ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿ, ಇಲ್ಲಿಯವರೆಗೆ 10ಕ್ಕೂ ಹೆಚ್ಚು ಉಗ್ರರ ಬಲಿ ಪಡೆದುಕೊಂಡಿದ್ದಾರೆ.

ABOUT THE AUTHOR

...view details