ಕರ್ನಾಟಕ

karnataka

ETV Bharat / bharat

ಏರ್ ಇಂಡಿಯಾ  ಸಿಬ್ಬಂದಿ ನಿಂದಿಸಿದ ಲಾಯರ್​ ಶವವಾಗಿ ಪತ್ತೆ! - lawyer

ಫ್ಲೈಟ್​ನಲ್ಲಿ ಅಲ್ಕೋಹಾಲ್ ನಿರಾಕರಿಸಿದ ಕಾರಣಕ್ಕೆ ಸಿಬ್ಬಂದಿಯನ್ನು ಜನಾಂಗೀಯವಾಗಿ ನಿಂದಿಸಿದ ಐರಿಶ್ ಲಾಯರ್ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

lawyer

By

Published : Jul 4, 2019, 3:35 PM IST

ಲಂಡನ್​​​: ಮುಂಬೈ - ಲಂಡನ್ ಏರ್ ಇಂಡಿಯಾ ಫ್ಲೈಟ್​ನಲ್ಲಿ ಅಲ್ಕೋಹಾಲ್ ನಿರಾಕರಿಸಿದ ಕಾರಣಕ್ಕೆ ಸಿಬ್ಬಂದಿಯನ್ನು ಜನಾಂಗೀಯವಾಗಿ ನಿಂದಿಸಿದ ಐರಿಶ್ ಲಾಯರ್ ಇಂಗ್ಲೆಂಡ್​ನ ಪೂರ್ವ ಸಸ್ಸೆಕ್ಸ್​ನ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆಂದು ಮಾಧ್ಯಮವೊಂದು ವರದಿ ಮಾಡಿದೆ. 50 ವರ್ಷದ ಸಿಮೋನ್ ಬರ್ನ್ಸ್ ಜೂನ್ 1 ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. 2019ರ ಏಪ್ರಿಲ್​ನಲ್ಲಿ ವಿಮಾನದಲ್ಲಿ ಪಾನಮತ್ತರಾಗಿ ಪತ್ತೆಯಾಗಿದ್ದಕ್ಕೆ ಆರು ತಿಂಗಳು, ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ 2 ತಿಂಗಳ ಜೈಲು ಶಿಕ್ಷೆಗೆ ಬರ್ನ್ಸ್ ತುತ್ತಾಗಿದ್ದರು. ಮೇ 20ರಂದು ಅವರನ್ನು ಯು.ಕೆ. ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.

"ಜೂನ್ 1ರಂದು ಬೀಚಿ ಹೆಡ್​ನಲ್ಲಿ ಪತ್ತೆಯಾಗಿರುವ ಶವವನ್ನು ಸಿಮೋನ್ ಬರ್ನ್ಸ್ ಎಂದು ಗುರುತಿಸಲಾಗಿದೆ. ಸಾವನ್ನು ಅನುಮಾನಾಸ್ಪದ ಎಂದು ಪರಿಗಣಿಸಲಾಗುವುದಲ್ಲ. ವಿಷಯವನ್ನು ಮೇಲಧಿಕಾರಿಗಳಿಗೆ ರವಾನಿಸಲಾಗಿದೆ" ಎಂದು ಸಸ್ಸೆಕ್ಸ್ ಪೊಲೀಸ್ ವಕ್ತಾರರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. ಕಳೆದ ವರ್ಷದ ನವೆಂಬರ್​ನಲ್ಲಿ ಮುಂಬೈ-ಲಂಡನ್ ಏರ್ ಇಂಡಿಯಾ ಫ್ಲೈಟ್​ನಲ್ಲಿ ವೈನ್ ನಿರಾಕರಿಸಿದ ಕಾರಣಕ್ಕೆ ಬರ್ನ್ಸ್ ಸಿಬ್ಬಂದಿಯನ್ನು ಜನಾಂಗೀಯವಾಗಿ ನಿಂದಿಸಿದ್ದರು.

ABOUT THE AUTHOR

...view details