ಕರ್ನಾಟಕ

karnataka

ETV Bharat / bharat

ಐದು ದಿನಗಳಲ್ಲಿ 1.4 ಲಕ್ಷಕ್ಕೂ ಹೆಚ್ಚು ಜನರಿಗೆ ಆಹಾರ ವಿತರಿಸಿದ ಐಆರ್‌ಸಿಟಿಸಿ

ಐಆರ್‌ಸಿಟಿಸಿಯ ಮೂಲ ಅಡುಗೆ ಮನೆಯಲ್ಲಿ ತಯಾರಿಸಲಾದ ಆಹಾರವನ್ನು ಸುಮಾರು 1.4 ಲಕ್ಷಕ್ಕೂ ಹೆಚ್ಚು ಬಡವರು ಹಾಗೂ ನಿರ್ಗತಿಕರಿಗೆ ವಿತರಿಸಲಾಗಿದೆ.

ಆಹಾರ ವಿತರಿಸಿದ ಐಆರ್‌ಸಿಟಿಸಿ
ಆಹಾರ ವಿತರಿಸಿದ ಐಆರ್‌ಸಿಟಿಸಿ

By

Published : Apr 1, 2020, 9:41 PM IST

ನವದೆಹಲಿ: ಭಾರತೀಯ ರೈಲ್ವೆ ಕ್ಯಾಟರಿಂಗ್ ಆರ್ಮ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಸುಮಾರು 1.4 ಲಕ್ಷಕ್ಕೂ ಹೆಚ್ಚು ಬಡವರು ಹಾಗೂ ನಿರ್ಗತಿಕರಿಗೆ ಆಹಾರವನ್ನು ವಿತರಿಸಿದೆ. ರೈಲ್ವೆ ಪ್ರೊಟೆಕ್ಷನ್​​ ಫೋರ್ಸ್​ (ಆರ್​​ಪಿಎಫ್​) ಮತ್ತು ರೋಟರಿ ಕ್ಲಬ್​​ ಮೂಲಕ ಆಹಾರ ವಿತರಿಸಲಾಗಿದೆ.

ವರದಿಗಳ ಪ್ರಕಾರ, ಸಾಮಾಜಿಕ ಕಲ್ಯಾಣ ಸಂಸ್ಥೆಗೆ ಆಹಾರ ತಯಾರಿಸಲು ವಹಿಸಲಾಗಿದೆ ಎಂದು ತಿಳಿದುಬಂದಿದೆ. ರೈಲ್ವೆ ಸಚಿವಾಲಯದ ಅಧಿಕೃತ ಮಾಹಿತಿ ಪ್ರಕಾರ, ಮಾರ್ಚ್ 28ರಂದು 2,700 ಜನರಿಗೆ ಆಹಾರ ಹಂಚಿಕೆ ಮಾಡಲಾಗಿದೆ. ಐಆರ್​ಸಿಟಿಸಿ ಮಾ. 29ರಂದು 11530 ಜನರಿಗೆ, ಮಾ. 30ರಂದು 30850, ಮಾ. 31ರಂದು 37370 ಮಂದಿಗೆ ಹಾಗೂ ಏಪ್ರಿಲ್​​ 1ರಂದು 23 ಸ್ಥಳಗಳಲ್ಲಿ ಆಹಾರ ವಿತರಿಸಲಾಗಿದೆ.

ಆಹಾರವನ್ನು ವಿತರಿಸುವ ಮೊದಲೇ ರೈಲ್ವೆ ಕಾರ್ಮಿಕರಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮತ್ತು ಆರೋಗ್ಯಕರ ಆಹಾರ ಒದಗಿಸಲು ತರಬೇತಿ ನೀಡಲಾಗಿತ್ತು.

ರೈಲ್ವೆ ಮಂಡಳಿಯ ಇತ್ತೀಚಿನ ಆದೇಶದಲ್ಲಿ ಐಆರ್‌ಸಿಟಿಸಿಯ ಮೂಲ ಅಡುಗೆ ಮನೆಯಲ್ಲಿ ಆಹಾರ ತಯಾರಿಸುವಂತೆ ಸೂಚಿಸಿತ್ತು. ಹೀಗೆ ತಯಾರಿಸಿದ ಆಹಾರವನ್ನು ಆರ್‌ಪಿಎಫ್, ಜಿಆರ್​ಪಿ, ವಾಣಿಜ್ಯ ವಲಯಗಳ ಇಲಾಖೆಗಳು, ರಾಜ್ಯ ಸರ್ಕಾರಗಳು ಮತ್ತು ಎನ್‌ಜಿಒಗಳ ಸಹಾಯದಿಂದ ವಿತರಿಸುವಂತೆ ಸೂಚಿಸಿತ್ತು.

ರೈಲ್ವೆ ನಿಲ್ದಾಣಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಗತ್ಯವಿರುವ ಜನರ ಆಹಾರ ಅಗತ್ಯತೆಗಳನ್ನು ಪೂರೈಸಲು, ಸಂಬಂಧಪಟ್ಟ ವಲಯ ಮತ್ತು ವಿಭಾಗಗಳ ಜಿಎಂ/ಡಿಆರ್‌ಎಂ ಐಆರ್‌ಸಿಟಿಸಿ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಲು ತಿಳಿಸಲಾಗಿತ್ತು. ಅಗತ್ಯವಿರುವ ಜನರಿಗೆ ಆಹಾರ ಮತ್ತು ಇತರ ನೆರವನ್ನು ಅಧಿಕಾರಿಗಳು ನೀಡಬೇಕೆಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಸೂಚಿಸಿದ್ದರು.

ನವದೆಹಲಿ, ಬೆಂಗಳೂರು, ಹುಬ್ಬಳ್ಳಿ, ಮುಂಬೈ ಸೆಂಟ್ರಲ್, ಅಹಮದಾಬಾದ್, ಹೌರಾ, ಪಾಟ್ನಾ, ಗಯಾ, ರಾಂಚಿ ಮತ್ತು ಇತರ ಹಲವು ಸ್ಥಳಗಳಲ್ಲಿ ಐಆರ್‌ಸಿಟಿಸಿ ತನ್ನ ಅಡುಗೆ ಮನೆಗಳನ್ನು ಹೊಂದಿದೆ.

ಗೃಹ ಸಚಿವಾಲಯವು ಶನಿವಾರ ಎರಡನೇ ಸಲಹೆ ಹೊರಡಿಸಿದ್ದು, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು (ಯುಟಿ) ತಾತ್ಕಾಲಿಕ ವಸತಿ, ಆಹಾರ, ಬಟ್ಟೆ ಮತ್ತು ವೈದ್ಯಕೀಯ ಆರೈಕೆ ಒದಗಿಸಲು ತಕ್ಷಣದ ಪರಿಹಾರ ಕ್ರಮಗಳನ್ನು ಪ್ರಾರಂಭಿಸಬೇಕೆಂದು ಹೇಳಿದೆ.

ABOUT THE AUTHOR

...view details