ಕರ್ನಾಟಕ

karnataka

IPL ಬಿಡ್ಡಿಂಗ್​​​ನಲ್ಲಿ ಜಯದೇವ್ ಉನಾದ್ಕತ್​​ ಹೊಸ ದಾಖಲೆ!

By

Published : Dec 20, 2019, 12:40 PM IST

ಸೌರಾಷ್ಟ್ರ ತಂಡದ ಎಡಗೈ ವೇಗಿ ಜಯದೇವ್​ ಉನಾದ್ಕತ್ ಇಂಡಿಯನ್​ ಪ್ರೀಮಿಯರ್​ ಲೀಗ್​​ನ ಹರಾಜು ಪ್ರಕ್ರಿಯೆಯಲ್ಲಿ​ ಹೊಸ ದಾಖಲೆ ನಿರ್ಮಿಸಿದ್ದಾರೆ.

Jaydev Unadkat
ಜಯದೇವ್ ಉನಾದ್ಕತ್

ಕೋಲ್ಕತ್ತಾ:ಮುಂದಿನ ವರ್ಷ ನಡೆಯಲಿರುವ 13ನೇ ಆವೃತ್ತಿಯ ಇಂಡಿಯನ್​​ ಪ್ರೀಮಿಯರ್​ ಲೀಗ್ ಕ್ರಿಕೆಟ್‌ಗೆ ಆಟಗಾರರ ಹರಾಜು ಪ್ರಕ್ರಿಯೆ ನಿನ್ನೆ ಕೋಲ್ಕತ್ತಾದಲ್ಲಿ ನಡೆದಿದೆ. ಎಲ್ಲಾ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಹರಾಜಿನಲ್ಲಿ ಪಡೆಯುವ ಮೂಲಕ ತಮ್ಮ ತಂಡಗಳನ್ನು ಮತ್ತಷ್ಟು ಬಲಿಷ್ಟಗೊಳಿಸುತ್ತಿವೆ.

2019ರಲ್ಲಿ ಬರೋಬ್ಬರಿ 8.4ಕೋಟಿ ರೂಗೆ ರಾಜಸ್ಥಾನ ರಾಯಲ್ಸ್​​ ತಂಡದ ಪಾಲಾಗಿದ್ದ ಸೌರಾಷ್ಟ್ರದ ಎಡಗೈ ವೇಗಿ ಜಯದೇವ್‌ ಉನಾದ್ಕತ್‌ ಇದೀಗ ಮತ್ತೊಮ್ಮೆ ಅದೇ ಫ್ರಾಂಚೈಸಿ ತೆಕ್ಕೆಗೆ ಸೇರಿಕೊಂಡಿದ್ದು, ನಿನ್ನೆಯ ಬಿಡ್ಡಿಂಗ್​​ನಲ್ಲಿ 3 ಕೋಟಿ ರೂಗೆ ಬಿಕರಿಯಾದರು.

ಜಯದೇವ್ ಉನಾದ್ಕತ್ ಸೇಲ್​​

ಮೂಲ ಬೆಲೆ 1 ಕೋಟಿ ರೂ ಹೊಂದಿದ್ದ ಉನಾದ್ಕತ್​​​ ಖರೀದಿಸಲು ಡೆಲ್ಲಿ ಕ್ಯಾಪಿಟಲ್ಸ್​​ ಹಾಗೂ ಕಿಂಗ್ಸ್​​​ ಇಲೆವೆಲ್​ ಪಂಜಾಬ್​​ ತಂಡಗಳ ನಡುವೆ ಜಿದ್ದಾಜಿದ್ದಿ ನಡೆಯಿತು. ಆದರೆ ರಾಜಸ್ಥಾನ ರಾಯಲ್ಸ್​​​ ತಂಡ ಅವರನ್ನು 3 ಕೋಟಿ ರೂ ನೀಡಿ ಮತ್ತೊಮ್ಮೆ ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ. ಈ ಮೂಲಕ ಐಪಿಎಲ್​​ನಲ್ಲಿ ಒಟ್ಟು 9 ಸಲ ಹರಾಜಾದ ಆಟಗಾರರಾಗಿದ್ದಾರೆ ಉನಾದ್ಕತ್.

ಯಾವ ವರ್ಷ ಉನಾದ್ಕತ್​​ ಸೇಲ್?​​

  • 2011- ಕೋಲ್ಕತ್ತಾ ನೈಟ್​ ರೈಡರ್ಸ್ ​​(2.50 ಲಕ್ಷ)
  • 2013- ರಾಯಲ್​ ಚಾಲೆಂಜರ್ಸ್​ ಬೆಂಗಳೂರು (5.25 ಲಕ್ಷ)
  • 2014- ಡೆಲ್ಲಿ ಡೇರ್​ ಡೆವಿಲ್ಸ್ ​​​(2.8 ಕೋಟಿ)
  • 2015- ಡೆಲ್ಲಿ ಡೇರ್​ ಡೆವಿಲ್ಸ್​​(1.1ಕೋಟಿ)
  • 2016-ಕೋಲ್ಕತ್ತಾ ನೈಟ್​​ ರೈಡರ್ಸ್ ​(​​1.6ಕೋಟಿ)
  • 2017-ರೈಸಿಂಗ್​​​ ಪುಣೆ ಸೂಪರ್​​ಜೈಂಟ್ಸ್ ​​​(30 ಲಕ್ಷ)
  • 2018- ರಾಜಸ್ಥಾನ ರಾಯಲ್ಸ್​​​ (11.5ಕೋಟಿ)
  • 2019-ರಾಜಸ್ಥಾನ ರಾಯಲ್ಸ್ ​​(8.4ಕೋಟಿ)
  • 2020- ರಾಜಸ್ಥಾನ ರಾಯಲ್ಸ್ ​​​(3ಕೋಟಿ)

ಇಲ್ಲಿಯವರೆಗೆ ಐದು ತಂಡಗಳಲ್ಲಿ ಐಪಿಎಲ್​​ ಪಂದ್ಯಗಳನ್ನಾಡಿರುವ ಉನಾದ್ಕತ್​​ ಒಟ್ಟು 73 ಪಂದ್ಯಗಳಿಂದ 77 ವಿಕೆಟ್​ ಪಡೆದಿದ್ದು, 2018ರಲ್ಲಿ ರಾಜಸ್ಥಾನ ರಾಯಲ್ಸ್​​ ಫ್ರಾಂಚೈಸಿ 11.50 ಕೋಟಿ ರೂ ನೀಡಿ ಖರೀದಿಸಿತ್ತು. ಇದಾದ ಬಳಿಕ 2019ರಲ್ಲಿ ಅದೇ ತಂಡದ ಪಾಲಾಗಿದ್ದ ಉನಾದ್ಕತ್​​​ 8.48 ಕೋಟಿ ರೂಗೆ ಮಾರಾಟವಾಗಿದ್ದರು.

ABOUT THE AUTHOR

...view details