ನವದೆಹಲಿ:ದೇಶಾದ್ಯಂತ ಲಾಕ್ಡೌನ್ ಹೇರಿಕೆ ಮಾಡಲಾಗಿರುವ ಕಾರಣ ವಾಹನ ಸವಾರರು ರಸ್ತೆಗಿಳಿಯುತ್ತಿಲ್ಲ. ಗೂಡ್ಸ್ ವಾಹನಗಳ ಸಂಚಾರ ಕಡಿಮೆಯಾಗಿದೆ. ಹೀಗಾಗಿ ತೈಲ ಬೇಡಿಕೆಯಲ್ಲಿ ಭಾರಿ ಪ್ರಮಾಣದ ಇಳಿಕೆಯಾಗಿದೆ.
ಹದಿಮೂರು ವರ್ಷಗಳ ಬಳಿಕ ಮೊದಲ ಬಾರಿಗೆ ತೈಲ ಬೇಡಿಕೆಯಲ್ಲಿ ಇಷ್ಟೊಂದು ಇಳಿಕೆ!
ಮಹಾಮಾರಿ ಕೊರೊನಾ ವೈರಸ್ ಬಿಕ್ಕಟ್ಟಿನಿಂದಾಗಿ ಭಾರತದಲ್ಲಿ ತೈಲ ಬೆಲೆ ಬೇಡಿಕೆಯಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡು ಬಂದಿದೆ.
ಪೆಟ್ರೋಲ್ ಬೇಡಿಕೆಯಲ್ಲಿ ಶೇ. 60.6ರಷ್ಟು ಹಾಗೂ ಡಿಸೇಲ್ ಬೇಡಿಕೆ ಶೇ. 55.6ರಷ್ಟು ಕುಸಿತವಾಗಿದೆ. ಏಪ್ರಿಲ್ ತಿಂಗಳಲ್ಲಿ 45.8ರಷ್ಟು ಬೇಡಿಕೆ ತಗ್ಗಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಸುಮಾರು 9.93ಮಿಲಿಯನ್ ಟನ್ನಷ್ಟು ತೈಲ ಮಾರಾಟಗೊಂಡಿಲ್ಲ. 2007ರ ಬಳಿಕ ಇಷ್ಟೊಂದು ಕಡಿಮೆ ಮಟ್ಟದ ಬೇಡಿಕೆ ಇಳಿಕೆಯಾಗಿದೆ.
ಬೇರೆ ಬೇರೆ ರಾಜ್ಯಗಳಲ್ಲಿ ಶೇ.50ರಷ್ಟು ಮಾತ್ರ ತೈಲ ಮಾರಾಟ ಮಾಡಿದ್ದು, ಲಾಕ್ಡೌನ್ ಮುಂದೂಡಿಕೆಯಾಗಿರುವುದೇ ಇದಕ್ಕೆ ಮುಖ್ಯ ಕಾರಣ ಎಂದು ತೈಲ ಕಂಪನಿಗಳು ಮಾಹಿತಿ ನೀಡಿವೆ. ಪ್ರಪಂಚದಾದ್ಯಂತ ಕೊರೊನಾ ವೈರಸ್ ಅಬ್ಬರ ಜೋರಾಗಿರುವ ಕಾರಣ ಕಚ್ಚಾ ತೈಲ ಬೇಡಿಕೆಯಲ್ಲೂ ಇಳಿಕೆ ಕಂಡು ಬಂದಿದ್ದು, ಖರೀದಿಗೆ ಜನರು ಹಿಂದೇಟು ಹಾಕುತ್ತಿದ್ದಾರೆ.