ನವದೆಹಲಿ: ಕೋವಿಡ್-19 ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇಂದು ಸಂಜೆ ವೇಳೆಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 12,759ಕ್ಕೆ ತಲುಪಿದ್ದರೆ, ಮೃತರ ಸಂಖ್ಯೆ 420ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ವೈರಸ್ ದೃಢಪಟ್ಟಿರುವವರ ಪೈಕಿ 10,824 ಪ್ರಕರಣಗಳು ಆ್ಯಕ್ವಿಟ್ ಇದ್ದು, 1,514 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಸಾವಿರ ಗಡಿ ದಾಟಿದ ರಾಜ್ಯಗಳು:ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,081ಕ್ಕೆ ತಲುಪಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಇಲ್ಲಿ 187 ಮಂದಿ ಮೃತಪಟ್ಟಿದ್ದು, 295 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಎರಡನೇ ಸ್ಥಾನದಲ್ಲಿರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 1578 ಸೋಂಕಿತರಿದ್ದಾರೆ. ತಮಿಳುನಾಡು 1,242 ಪ್ರಕರಣಗಳೊಂದಿಗೆ ಮೂರನೇ, 1,120 ಸೋಂಕಿತರೊಂದಿಗೆ ಮಧ್ಯ ಪ್ರದೇಶ 4ನೇ ಸ್ಥಾನದಲ್ಲಿದೆ. ಐದನೇ ಸ್ಥಾನದಲ್ಲಿರುವ ರಾಜಸ್ಥಾನದಲ್ಲಿ 1,104 ಪ್ರಕರಣಗಳು ದೃಢಪಟ್ಟಿವೆ.
ಇನ್ನು, ದೇಶದಲ್ಲೇ ಮೊದಲ ಬಾರಿಗೆ ಕೊರೊನಾ ವೈರಸ್ ಪತ್ತೆಯಾದ ಕೇರಳದಲ್ಲಿ 388 ಮಂದಿಗೆ ಕೋವಿಡ್ ಕನ್ಫರ್ಮ್ ಆಗಿದ್ದು, 295 ಮಂದಿ ಗುಣಮುಖರಾಗಿದ್ದಾರೆ. ಛತ್ತೀಸ್‌ಘಡದಲ್ಲಿ 33, ಚಂಡೀಗಢದಲ್ಲಿ 21 ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಕೇವಲ 7 ಪ್ರಕರಣಗಳು ದಾಖಲಾಗಿವೆ.