ನವದೆಹಲಿ: ಕೊರೊನಾ ಸೋಂಕಿನಿಂದ ಜನರು ಪ್ರಯಾಣ ಮಾಡುವುದನ್ನು ಕಡಿಮೆ ಮಾಡಿದ್ದು, ಪ್ರಯಾಣಿಕರ ಕೊರತೆಯಿಂದಾಗಿ 168 ರೈಲುಗಳ ಸಂಚಾರವನ್ನು ಭಾರತೀಯ ರೈಲ್ವೇ ರದ್ದು ಮಾಡಿದೆ.
ದೂರ ಪ್ರಯಾಣಕ್ಕೆ ಜನರ ಹಿಂದೇಟು: 168 ರೈಲುಗಳ ಸಂಚಾರ ರದ್ದು ಮಾಡಿದ ಭಾರತೀಯ ರೈಲ್ವೇ - 168 ರೈಲುಗಳ ಸಂಚಾರ ರದ್ದು
ಪ್ರಯಾಣಿಕರ ಕೊರತೆಯಿಂದಾಗಿ ಭಾರತೀಯ ರೈಲ್ವೆ ಇಲಾಖೆ 10 ದಿನಗಳ ಕಾಲ 168 ರೈಲುಗಳ ಸಂಚಾರವನ್ನು ರದ್ದು ಮಾಡಿದೆ.
168 ರೈಲುಗಳ ಸಂಚಾರ ರದ್ದು
ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಪ್ರಯಾಣವನ್ನು ಕಡಿಮೆ ಮಾಡುವಂತೆ ವಿವಿಧ ರಾಜ್ಯ ಸರ್ಕಾರಗಳು ಜನರಿಗೆ ಮನವಿ ಮಾಡಿವೆ. ಕೊವಿಡ್-19 ಭೀತಿಯಿಂದ ಜನರು ಕೂಡಾ ಸ್ವಇಚ್ಛೆಯಿಂದ ದೂರ ಪ್ರಯಾಣ ರದ್ದು ಮಾಡುತ್ತಿದ್ದಾರೆ. ಹೀಗಾಗಿ ಪ್ರಯಾಣಿಕರ ಕೊರತೆಯಿಂದಾಗಿ ಭಾರತೀಯ ರೈಲ್ವೆ ಇಲಾಖೆ ಮಾರ್ಚ್ 20 ರಿಂದ ಮಾರ್ಚ್ 31ರ ವರೆಗೆ 168 ರೈಲುಗಳ ಸಂಚಾರವನ್ನು ರದ್ದುಪಡಿಸಿದೆ.