ಮುಂಬೈ:ಮುಂಬೈ ಷೇರು ಮಾರುಕಟ್ಟೆ ಇಂದು ಏರಿಕೆ ಕಂಡಿದೆ. ನಿನ್ನೆ ಮಹಾವೀರ ಜಯಂತಿ ಅಂಗವಾಗಿ ರಜೆಯಿದ್ದು, ಇಂದು ಬೆಳ್ಳಂಬೆಳಗ್ಗೆಯೇ ಚೇತರಿಸಿಕೊಂಡಿದೆ.
ಷೇರು ಮಾರುಕಟ್ಟೆಯಲ್ಲಿ ಉತ್ಸಾಹ: ಸೆನ್ಸೆಕ್ಸ್ 2 ಸಾವಿರ ಪಾಯಿಂಟು ಏರಿಕೆ, ನಿಫ್ಟಿ ಚೇತರಿಕೆ
ಬೆಳ್ಳಂಬೆಳಗ್ಗೆ ಮುಂಬೈ ಷೇರು ಮಾರುಕಟ್ಟೆ ಗಣನೀಯ ಚೇತರಿಕೆ ಕಂಡಿದೆ. ನಿನ್ನೆ ಮಹಾವೀರ ಜಯಂತಿ ಅಂಗವಾಗಿ ರಜೆಯಿದ್ದು ಇಂದು ಉತ್ಸಾಹದಿಂದಲೇ ದಿನಾರಂಭವಾಗಿದೆ.
ಭಾರತೀಯ ಷೇರು ಮಾರುಕಟ್ಟೆ
ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಸೂಚ್ಯಂಕ ಸೆನ್ಸೆಕ್ಸ್ 29,637ರಷ್ಟಿದ್ದು, 2,046 ಪಾಯಿಂಟ್ಗಳಷ್ಟು ಏರಿಕೆ ಕಂಡಿದೆ. ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಕೂಡಾ ಏರಿಕೆ ಕಂಡಿದ್ದು 8,667ಕ್ಕೆ ತಲುಪಿದೆ.
ಇಂಡಸ್ ಇಂಡ್ ಬ್ಯಾಂಕ್ ಹಾಗೂ ಮಹೀಂದ್ರಾ ವಹಿವಾಟಿ ಸೂಚ್ಯಂಕದಲ್ಲಿ ಶೇ 10ರಷ್ಟು ಹೆಚ್ಚಾಗಿದೆ. ಐಸಿಐಸಿಐ ಬ್ಯಾಂಕ್ ಶೇ 8ರಷ್ಟು, ಕೊಟಕ್ ಮಹೀಂದ್ರಾ ಬ್ಯಾಂಕ್ಗಳ ವಹಿವಾಟು ಸೂಚ್ಯಂಕದಲ್ಲಿ ಶೇ 6ರಷ್ಟು ಏರಿಕೆ ಕಂಡಿದೆ.
Last Updated : Apr 7, 2020, 2:08 PM IST