ಕರ್ನಾಟಕ

karnataka

ETV Bharat / bharat

ಮೈನಸ್ -0 ಸೆಲ್ಸಿಯಸ್​​ನಲ್ಲೂ ಜನರನ್ನ ರಕ್ಷಿಸಿದ ಭಾರತೀಯ ಸೇನೆ!

ಅರುಣಾಚಲ ಪ್ರದೇಶದಲ್ಲಿ ಮೈನಸ್ ಝೀರೋ ನಡುಗುವ ಚಳಿ ವಾತಾವರಣದ ನಡುವೆ ಸತತ 16 ಗಂಟೆಗಳ ಸುದೀರ್ಘ ಕಾರ್ಯಾಚರಣೆ ನಡೆಸಿ ಭಾರತೀಯ ಸೇನೆ ಅನೇಕ ನಾಗರಿಕರು ಹಾಗೂ ವಾಹನಗಳನ್ನು ರಕ್ಷಿಸಿದೆ.

indian-army
indian-army

By

Published : Mar 9, 2020, 1:54 PM IST

ಅರುಣಾಚಲ ಪ್ರದೇಶ: ಭಾರತೀಯ ಸೈನಿಕರು ಮೈನಸ್ ಝೀರೋ ಟೆಂಪರೇಚರ್​ನಲ್ಲೂ ನಾಗರಿಕರು ಹಾಗೂ ವಾಹನಗಳನ್ನು ರಕ್ಷಿಸುವ ಕಾರ್ಯ ಮಾಡಿದ್ದಾರೆ.

ಸುಮಾರು 14,000 ಅಡಿ ಎತ್ತರದಲ್ಲಿ ಭಾರತೀಯ ಸೇನೆಯು ಕಾರ್ಯಾಚರಣೆ ನಡೆಸಿದೆ. ಸೆಲಾ ಪಾಸ್‌ನಲ್ಲಿ ಮಾರ್ಚ್ 7 ಹಾಗೂ 8ರಂದು ರಾತ್ರಿ ಭಾರೀ ಹಿಮಪಾತವಾಗಿತ್ತು. ಹಿಮದಲ್ಲಿ ಸಿಲುಕಿದ್ದ 390 ನಾಗರಿಕರನ್ನು ಮತ್ತು 175 ವಾಹನಗಳನ್ನು ಸೈನಿಕರನ್ನ ರಕ್ಷಿಸಿದ್ದಾರೆ.

ಭಾರತೀಯ ಸೇನೆ ಕಾರ್ಯಾಚರಣೆ

ರಕ್ಷಿಸಿದ ನಾಗರಿಕರಿಗೆ ವೈದ್ಯಕೀಯ ನೆರವು ಮತ್ತು ಬಿಸಿ ತಿಂಡಿಗಳನ್ನು ನೀಡಲಾಯಿತು. ಭಾರತೀಯ ಸೇನೆಯ ಈ ಕಾರ್ಯಕ್ಕೆ ನಾಗರಿಕರು ಕೃತಜ್ಞತೆ ವ್ಯಕ್ತಪಡಿಸಿದರು.

ಅನೇಕ ಜೀವಗಳನ್ನು ಉಳಿಸುವುದರ ಜೊತೆಗೆ, ಮೈನಸ್ ಝೀರೋ ಚಳಿಯ ವಾತಾವರಣದಲ್ಲೂ 16 ಗಂಟೆಗಳ ಸುದೀರ್ಘ ಕಾರ್ಯಾಚರಣೆ ನಡೆಸಿದ ಭಾರತೀಯ ಸೇನೆಗೆ ಅಭಿನಂದನೆಯ ಮಹಾಪೂರವೇ ಹರಿದು ಬರುತ್ತಿದೆ.

ABOUT THE AUTHOR

...view details