ನವದೆಹಲಿ:ಭಾರತೀಯ ವಾಯುಸೇನೆಗೆ ಸೇರಿದ ವಿಮಾನಗಳು ಆಗಾಗ್ಗೆ ಪತನವಾಗುತ್ತಿದ್ದು, ಈ ಕುರಿತಂತೆ ರಕ್ಷಣಾ ಇಲಾಖೆ ಅಂಕಿ-ಅಂಶವನ್ನು ಬಿಡುಗಡೆ ಮಾಡಿದೆ.
ರಕ್ಷಣಾ ಇಲಾಖೆ ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ ಕಳೆದ ಐದು ವರ್ಷಗಳಲ್ಲಿ 26 ಫೈಟರ್ ಜೆಟ್ಸ್ ಪತನವಾಗಿವೆ. ಇದರಲ್ಲಿ 12 ಪೈಲಟ್ ಹಾಗೂ ಏಳು ಸಿಬ್ಬಂದಿ ಸಾವನ್ನಪ್ಪಿದ್ದಾರೆ.
2019ರ ಮೊದಲ ಆರು ತಿಂಗಳಲ್ಲಿ ಬರೋಬ್ಬರಿ ಆರು ಫೈಟರ್ ಜೆಟ್ಗಳು ಪತನವಾಗಿವೆ. ಜನವರಿಯಲ್ಲಿ ಜಾಗ್ವಾರ್, ಫೆಬ್ರವರಿಯಲ್ಲಿ ಹಾಕ್ ಎಂಕೆ 132 ಹಾಗೂ ಮಿಗ್ 27, ಮಾರ್ಚ್ ತಿಂಗಳಲ್ಲಿ ಮಿಗ್ 21 ಬೈಸನ್ ಹಾಗೂ ಮಿಗ್ 27 ಯುಪಿಜಿ ಮತ್ತು ಜೂನ್ ತಿಂಗಳಲ್ಲಿ ಎನ್-32 ವಿಮಾನ ಪತನವಾಗಿದೆ ಎಂದು ರಕ್ಷಣಾ ಇಲಾಖೆ ಮಾಹಿತಿ ನೀಡಿದೆ.
ರಕ್ಷಣಾ ಇಲಾಖೆ ಬಿಡುಗಡೆ ಮಾಡಿರುವ ಅಂಕಿ-ಅಂಶದಲ್ಲಿ ಜಮ್ಮು ಕಾಶ್ಮೀರದಲ್ಲಿ ಎಪ್ರಿಲ್ ತಿಂಗಳಲ್ಲಿ ಪತನವಾದ ಎಮ್ಐ-17 ಹೆಲಿಕಾಪ್ಟರ್ ಅನ್ನು ಪರಿಗಣಿಸಿಲ್ಲ.
2014-15 ಹಾಗೂ 2018-19ರಲ್ಲಿ ಏಳು ಫೈಟರ್ ಜೆಟ್ಗಳು ಪತನವಾಗಿದ್ದರೆ, 2016-17ರಲ್ಲಿ ಆರು ಫೈಟರ್ ಜೆಟ್ಗಳು ಪತನವಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.