ನವದೆಹಲಿ :ಪೂರ್ವ ಲಡಾಖ್‌ನ ಮೂರು ಸ್ಥಳಗಳಿಂದ ಭಾರತ ಮತ್ತು ಚೀನಾದ ಸೈನ್ಯ ಹಿಂದೆ ಸರಿದಿದ್ದರೂ ಸಹ ಗಡಿ ನಿಯಂತ್ರಣಾ ರೇಖೆ ಬಳಿ ಇರುವ 10 ಸಾವಿರಕ್ಕೂ ಹೆಚ್ಚು ಸೈನಿಕರು ಮತ್ತು ಫಿರಂಗಿ ಮತ್ತು ಟ್ಯಾಂಕ್ ರೆಜಿಮೆಂಟ್‌ಗಳನ್ನು ಚೀನಾ ಹಿಂದಕ್ಕೆ ಕರೆಸಿಕೊಂಡಾಗ ಮಾತ್ರ ಗಡಿಯಲ್ಲಿನ ಉದ್ವಿಗ್ನತೆ ಸಂಪೂರ್ಣ ದೂರವಾಗಲಿದೆ ಎಂದು ಭಾರತ ಸ್ಪಷ್ಟಪಡಿಸಿದೆ.
ಭಾರತ ಮತ್ತು ಚೀನಾ ನಡುವಿನ ಮಾತುಕತೆ ನಂತರ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕ್ರಮವಾಗಿ ಭಾರತ ಮತ್ತು ಚೀನಾದ ಸೈನಿಕರು ಗಾಲ್ವಾನ್ ಕಣಿವೆ ಪ್ರದೇಶ ಸೇರಿ ಮೂರು ಸ್ಥಳಗಳಿಂದ ಹಿಂದಕ್ಕೆ ಸರಿದಿದ್ದರು.