ಕರ್ನಾಟಕ

karnataka

ETV Bharat / bharat

ಲಾಕ್​ಡೌನ್​ 3.0: ಯಾವ ಝೋನ್​ಗಳಲ್ಲಿ ಏನು? ಗ್ರೀನ್ ಝೋನ್​ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ

ಕೊರೊನಾ ವಿರುದ್ಧದ ಹೋರಾಟ ಮುಂದುವರಿದಿದ್ದು, ದೇಶದಲ್ಲಿ ಮತ್ತೆರೆಡು ವಾರ ಲಾಕ್​ಡೌನ್​ ವಿಸ್ತರಣೆಗೊಂಡಿದೆ. ಇದರ ಮಧ್ಯೆ ಗ್ರೀನ್​ ವಲಯಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ.

India lockdown extended for 2 weeks
India lockdown extended for 2 weeks

By

Published : May 1, 2020, 7:49 PM IST

Updated : May 1, 2020, 8:40 PM IST

ನವದೆಹಲಿ:ಮೇ.4ರವರೆಗೆ ವಿಸ್ತರಣೆಗೊಂಡಿದ್ದ ಲಾಕ್​ಡೌನ್​ ಇದೀಗ ಮೇ.17ರವರೆಗೆ ಮುಂದೂಡಿಕೆಯಾಗಿದ್ದು, ಹೀಗಾಗಿ ದೇಶದ ಜನರು ಮತ್ತೆ ಎರಡು ವಾರ ಮನೆಯಲ್ಲೇ ಇರಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ.

ದೇಶದಲ್ಲಿ ಲಾಕ್​ಡೌನ್​ ಮುಂದೂಡಿಕೆಯಾಗಿರುವ ಕಾರಣ ಕೇಂದ್ರ ಗೃಹ ಇಲಾಖೆಯಿಂದ ಹೊಸ ಕಾರ್ಯಸೂಚಿ ರಿಲೀಸ್​ ಆಗಿದ್ದು, ಈಗಾಗಲೇ ಮೂರು ವಲಯಗಳಾಗಿ ವಿಂಗಡನೆಯಾಗಿರುವ ರೆಡ್​​, ಗ್ರೀನ್ ಹಾಗೂ ಆರೆಂಜ್​ ಝೋನ್​​ಗಳಲ್ಲಿ ಕೆಲವೊಂದು ನಿರ್ಬಂಧಗಳು ಸಡಿಲಗೊಂಡಿವೆ.

ಏನೆಲ್ಲ ನಿರ್ಬಂಧ?

  • ಮೂರು ವಲಯಗಳಲ್ಲಿ ಯಾವುದೇ ರೀತಿಯಲ್ಲೂ ಮೆಟ್ರೋ ಹಾಗೂ ಪ್ಯಾಸೆಂಜರ್​​ ರೈಲುಗಳ ಸಂಚಾರ ಇರುವುದಿಲ್ಲ.
  • ಶಾಲೆ, ಕಾಲೇಜು​, ಶಿಕ್ಷಣ ಸಂಸ್ಥೆಗಳು, ಕೋಚಿಂಗ್​ ಸೆಂಟರ್​​, ಹೋಟೆಲ್​ಗಳು ಬಂದ್, ಹೋಟೆಲ್​ಗಳಲ್ಲಿ ಪಾರ್ಸಲ್​ಗಳಿಗೆ ಮಾತ್ರ ಅವಕಾಶ
  • ​ ಸಿನಿಮಾ ಹಾಲ್​​, ಶಾಪಿಂಗ್​ ಮಾಲ್​, ಜಿಮ್​, ಸ್ಪೋರ್ಟ್ಸ್​​ ಕಾಂಪ್ಲೆಕ್ಸ್​​, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಪೂರ್ಣ ನಿರ್ಬಂಧ
  • ರೆಡ್​ ಝೋನ್​ಗಳಲ್ಲಿ ಸೈಕಲ್​ ರಿಕ್ಷಾ, ಆಟೋ ರಿಕ್ಷಾ, ಟ್ಯಾಕ್ಸಿ, ಕ್ಯಾಬ್​,ಅಂತಾರಾಜ್ಯ ಬಸ್​ ಸಂಚಾರ, ಸಲೂನ್​ ಶಾಪ್​, ಸ್ಪಾ ಸಂಪೂರ್ಣ ಬಂದ್​
  • ರೆಡ್​ ಝೋನ್​ಗಳಲ್ಲಿ ಅನುಮತಿ ಪಡೆದ ವಾಹನ ಸಂಚಾರ
  • ಕಾರುಗಳಲ್ಲಿ ಡ್ರೈವರ್​ ಹಾಗೂ ಓರ್ವ ಪ್ರಯಾಣಿಕರಿಗೆ ಮಾತ್ರ ಅವಕಾಶ
  • ಬೈಕ್​ನಲ್ಲಿ ಒಬ್ಬರಿಗೆ ಮಾತ್ರ ಅನುಮತಿ.
  • ರೆಡ್​​ ಝೋನ್​​ನಲ್ಲಿ 130 ಜಿಲ್ಲೆಗಳಿದ್ದು, ಕಟ್ಟಿನಿಟ್ಟಿನ ಆದೇಶ ಜಾರಿಯಲ್ಲಿರುತ್ತವೆ. ಕರ್ನಾಟಕದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಮೈಸೂರು ಜಿಲ್ಲೆಗಳು ಕೂಡ ಸೇರಿಕೊಂಡಿವೆ.

ಆರೆಂಜ್​ ಝೋನ್​:

  • ಆರೆಂಜ್​ ಜೋನ್​ನಲ್ಲಿ ಮಿತ ಸಂಚಾರಕ್ಕೆ ಅವಕಾಶ
  • ಕಾರಲ್ಲಿ ಇಬ್ಬರು, ಬೈಕ್​ನಲ್ಲಿ ಒಬ್ಬರು ಓಡಾಡಲು ಅನುಮತಿ

ಗ್ರೀನ್​ ಝೋನ್​:

  • ಇನ್ನು ಗ್ರೀನ್​ ಝೋನ್​ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ.
  • ಮದ್ಯದ ಅಂಗಡಿ ಮುಂದೆ 6 ಮಂದಿಗೆ ಮಾತ್ರ ನಿಂತು ಪಾರ್ಸಲ್​ ತೆಗೆದುಕೊಂಡು ಹೋಗಬಹುದು.
  • ಮದುವೆ ಕಾರ್ಯಕ್ರಮಗಳಲ್ಲಿ 50 ಜನರು ಭಾಗಿಯಾಗುವುದಕ್ಕೆ ಅವಕಾಶ.
  • ಗ್ರೀನ್ ಝೋನ್‌ನಲ್ಲಿ 50 ಸರ್ಕಾರಿ ಬಸ್ಸುಗಳ ಓಡಾಟಕ್ಕೆ ಅವಕಾಶ
  • ಖಾಸಗಿ ಆಸ್ಪತ್ರೆಗಳಲ್ಲಿ OPD ತೆರೆಯಲು ಅವಕಾಶ
  • ಕಟ್ಟಡ ಕಾರ್ಮಿಕರು, ನಿರ್ಮಾಣ ಕಾಮಗಾರಿಗಳಲ್ಲಿ ತೊಡಗಿರುವ ಕಾರ್ಮಿಕರಿಗೆ ಷರತ್ತುಬದ್ಧ ಅನುಮತಿ
  • ಗ್ರಾಮೀಣ ಪ್ರದೇಶಗಳಲ್ಲೂ ಮಾಲ್​ ಹೊರತುಪಡಿಸಿ ಉಳಿದೆಲ್ಲ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ
  • ಕೃಷಿ ಕಾರ್ಯಗಳು, ಹೈನುಗಾರಿಕೆ, ಮೀನುಗಾರಿಕೆ ಚಟುವಟಿಕೆಗಳಿಗೆ ಹಾಗೂ ಪ್ಲಾಂಟೇಶನ್ ಚಟುವಟಿಕೆಗಳಿಗೆ ಅನುಮತಿ
  • ಬ್ಯಾಂಕ್​ಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ವಿಮೆ ಮತ್ತು ಕ್ಯಾಪಿಟಲ್ ಮಾರ್ಕೆಟ್ ಚಟುವಟಿಕೆಗಳು ಹಾಗೂ ಕ್ರೆಡಿಟ್ ಕೊ-ಅಪರೇಟಿವ್ ಸೊಸೈಟಿ ಕಾರ್ಯ
  • ಕಟ್ಟಡ ಕಾರ್ಮಿಕರನ್ನು ಹೊರ ರಾಜ್ಯಗಳಿಂದ ಕರೆದು ತರುವಂತಿಲ್ಲ.
  • ಅಂತಾರಾಜ್ಯ ಗೂಡ್ಸ್‌ ವಾಹನಗಳ ಸಂಚಾರಕ್ಕೆ ಅವಕಾಶ
  • ಎಲ್ಲರೂ ಆರೋಗ್ಯ ಸೇತು ಆ್ಯಪ್ ಬಳಸುವುದು ಕಡ್ಡಾಯ
  • ಕೈಗಾರಿಕೆಗಳಿಗೆ ಶರತ್ತುಬದ್ಧ ಅನುಮತಿ
Last Updated : May 1, 2020, 8:40 PM IST

ABOUT THE AUTHOR

...view details