ನವದೆಹಲಿ: ಕೊವಿಡ್ 19 ಸಾಂಕ್ರಾಮಿಕ ದಂತಹ ರೋಗವನ್ನು ಹಿಮ್ಮೆಟ್ಟಿಸಲು ಕಾರ್ಯತಂತ್ರ ರೂಪಿಸುವ ಪಾಲುದಾರರಾಗಿ ಭಾರತ- ಕಜಕಿಸ್ತಾನ್ ರಾಷ್ಟ್ರಗಳು ಒಗ್ಗಟ್ಟಿನ ಪ್ರದರ್ಶನ ತೋರಿ ಎರಡು ದೇಶಗಳ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಕೊರೊನಾ ವೈರಸ್ಗೆ ಸಂಬಂಧಿಸಿದ ಮೆಡಿಸಿನ್ಗಳನ್ನು ಕಳುಹಿಸಿಕೊಟ್ಟಿದ್ದಕ್ಕಲಾಗಿ ಕಜಕಿಸ್ತಾನದ ಅಧ್ಯಕ್ಷ ಕಸ್ಯಮ್ ಜೊಮಾರ್ಟ್ ಟೊಕಾಯೆವ್ ಭಾರತದ ನೆರವಿಗೆ ಧನ್ಯವಾದ ತಿಳಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಮೋದಿ " ನಿಮ್ಮ ಹೃದಯ ಸ್ಪರ್ಶಿ ಮಾತುಗಳಿಗೆ ನನ್ನ ಧನ್ಯವಾದಗಳು ಪ್ರಸಿಡೆಂಟ್ ಟೊಕಾಯೆವ್. ಭಾರತ ಹಾಗೂ ಕಜಿಕಿಸ್ತಾನ ರಾಷ್ಟ್ರಗಳು ಕಾರ್ಯತಂತ್ರದ ಪಾಲುದಾರರಾಗಿ ಕಾರ್ಯ ನಿರ್ವಹಿಸಬೇಕು. ಜೊತೆಗೆ ಇಂತಹ ಸವಾಲಿನ ಕಾಲದಲ್ಲಿ ಸಹಕಾರ ಹಾಗೂ ಒಗ್ಗಟ್ಟಿನ ಪ್ರದರ್ಶನ ಕೂಡ ಎರಡು ದೇಶಗಳ ನಡುವಿನ ಸ್ನೇಹ ಹಾಗೂ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದಿದ್ದರು.
ವಿದೇಶಗಳಿಗೆ ಔಷಗಳನ್ನು ರಫ್ತು ಮಾಡುವುದನ್ನು ನಿಷೇಧಿಸಿರುವ ಭಾರತ ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ವೈದ್ಯಕೀಯ ಸೌಲಭ್ಯವನ್ನು ಒದಗಿಸಿಕೊಟ್ಟಿರುವುದಕ್ಕೆ ಧನ್ಯವಾದ ಎಂದು ಟೊಕಾಯೆವ್ ಟ್ವೀಟ್ ಮಾಡಿದ್ದರು.