ಕರ್ನಾಟಕ

karnataka

ETV Bharat / bharat

'ದೇಶದಲ್ಲಿನ ಕೊರೊನಾ ಸೋಂಕಿತರ ಸಾವಿನ ಪ್ರಮಾಣ ವಿಶ್ವದಲ್ಲೇ ಅತಿ ಕಡಿಮೆ..' - ಕೇಂದ್ರ ಆರೋಗ್ಯ ಸಚಿವ

ವಿಶ್ವದಲ್ಲೇ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಆದರೆ ಭಾರತದಲ್ಲಿ ಸೋಂಕಿತರ ಸಾವಿನ ಸಂಖ್ಯೆ ವಿಶ್ವದಲ್ಲೇ ಕಡಿಮೆ ಇದೆ ಎಂದು ಕೇಂದ್ರ ಆರೋಗ್ಯ ಸಚಿವರು ಸ್ಪಷ್ಟನೆ ನೀಡಿದ್ದಾರೆ.

Union Health Minister
ಕೇಂದ್ರ ಆರೋಗ್ಯ ಸಚಿವರು

By

Published : May 3, 2020, 5:37 PM IST

ನವದೆಹಲಿ: ಕೊರೊನಾದಿಂದ ಸಾವನ್ನಪ್ಪುವವರ ಪ್ರಮಾಣ ದೇಶದಲ್ಲಿ ಶೇಕಡಾ 3.2ರಷ್ಟಿದೆ ಎಂದು ಕೇಂದ್ರ ಸಚಿವ ಡಾ. ಹರ್ಷವರ್ಧನ್​ ತಿಳಿಸಿದ್ದಾರೆ.

ಇದು ವಿಶ್ವದಲ್ಲೇ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ ಎಂದಿರುವ ಅವರು 14 ದಿನಗಳ ಹಿಂದೆ ಸೋಂಕಿತರು ದ್ವಿಗುಣಗೊಳ್ಳುವ ಪ್ರಮಾಣ 10.5ರಷ್ಟಿತ್ತು. ಈಗ ಸೋಂಕಿತರು ದ್ವಿಗುಣಗೊಳ್ಳಲು 12 ದಿನಗಳು ಬೇಕಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇಲ್ಲಿಯವರೆಗೆ ಸುಮಾರು 10 ಸಾವಿರ ಕೊರೊನಾ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆಯಲ್ಲಿರುವ ಸೋಂಕಿತರೂ ಬೇಗನೇ ಚೇತರಿಕೆಗೊಳ್ಳುತ್ತಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮೊದಲು ಇಂಡಿಯನ್​ ಕೌನ್ಸಿನ್​ ಆಫ್​ ಮೆಡಿಕಲ್​ ರಿಸರ್ಚ್​ ಇದುವರೆಗೂ ದೇಶದಲ್ಲಿ 10 ಲಕ್ಷ ಮಂದಿಗೆ ಆರ್​ಟಿ-ಪಿಸಿಆರ್ ಪರೀಕ್ಷೆ ಅಂದರೆ ಕೊರೊನಾ ಸೋಂಕಿನ ಪರೀಕ್ಷೆ ಕೈಗೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿದೆ. ಮೇ 3ರ ಬೆಳಗ್ಗೆ 9 ಗಂಟೆಯವರೆಗೆ 10,46,450 ಮಂದಿಯ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ ಎಂದು ವರದಿಯೊಂದರಲ್ಲಿ ತಿಳಿಸಿತ್ತು.

ದೇಶದಲ್ಲಿ 130 ಸರ್ಕಾರಿ ಲ್ಯಾಬ್​ಗಳು ಹಾಗೂ 111 ಖಾಸಗಿ ಲ್ಯಾಬ್​ಗಳು ಕೊರೊನಾ ಸೋಂಕು ಪತ್ತೆ ಪರೀಕ್ಷೆ ನಡೆಸಲು ಅನುಮತಿ ಪಡೆದುಕೊಂಡಿವೆ.

ABOUT THE AUTHOR

...view details